ಹೆಂಡತಿ, ಮಕ್ಕಳಿಗೆ ಮಚ್ಚು ಬೀಸಿ ಪೊಲೀಸ್ ಠಾಣೆಗೆ ಬಂದ ಹೋಂ ಗಾರ್ಡ್‌; ಕಾರಣವೇನು?

author-image
admin
Updated On
ಹೆಂಡತಿ, ಮಕ್ಕಳಿಗೆ ಮಚ್ಚು ಬೀಸಿ ಪೊಲೀಸ್ ಠಾಣೆಗೆ ಬಂದ ಹೋಂ ಗಾರ್ಡ್‌; ಕಾರಣವೇನು?
Advertisment
  • ಮನೆಯಲ್ಲಿ ಇಬ್ಬರೇ ಹೆಣ್ಣು ಮಕ್ಕಳು ಇದ್ದ ವೇಳೆ ಅಟ್ಯಾಕ್‌!
  • ಇಬ್ಬರ ತಲೆಯನ್ನ ಕಡಿದು ಅಡುಗೆ ಮನೆಯಲ್ಲಿ ಬಿಸಾಡಿದ
  • ಹೆಂಡತಿ ಮನೆಗೆ ಎಂಟ್ರಿ ಆಗ್ತಿದ್ದಂತೆ ಮಚ್ಚು ಹಿಡಿದು ಕುಳಿತಿದ್ದ

ಬೆಂಗಳೂರು: ಜಾಲಹಳ್ಳಿ ಕ್ರಾಸ್ ಬಳಿಯ ಮನೆಯಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ತಾಯಿ ಹಾಗೂ ಇಬ್ಬರು ಮಕ್ಕಳ ಜೀವ ತೆಗೆದಿರೋ ಟ್ರಾಫಿಕ್ ಹೋಂ ಗಾರ್ಡ್ ಗಂಗರಾಜು ಮಚ್ಚಿನ ಸಮೇತ ಪೀಣ್ಯಾ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿ ಹೋಂ ಗಾರ್ಡ್ ಗಂಗರಾಜು, ಮನೆಯಲ್ಲಿ ಪತ್ನಿ, ಮಗಳು ಹಾಗೂ ಮತ್ತೊಬ್ಬ ಮಹಿಳೆ ಮೇಲೆ ಮನಬಂದಂತೆ ಮಚ್ಚು ಬೀಸಿದ್ದಾನೆ. ಇಬ್ಬರು ಹೆಣ್ಣು ಮಕ್ಕಳ ತಲೆಯನ್ನ ಕತ್ತರಿಸಿ ಅಡುಗೆ ಮನೆಯಲ್ಲಿ ಬಿಸಾಡಿದ್ದಾನೆ. ಹೊರಗೆ ಹೋಗಿದ್ದ ಹೆಂಡತಿ ಮನೆಗೆ ಎಂಟ್ರಿ ಆಗುತ್ತಿದ್ದಂತೆ ಮಚ್ಚು ಬೀಸಿ ಕ್ರೌರ್ಯ ಮೆರೆದಿದ್ದಾನೆ.

[caption id="attachment_105010" align="aligncenter" width="800"]publive-image ಮೃತ ಹೇಮಾವತಿ, ನವ್ಯ ಹಾಗೂ ಭಾಗ್ಯಮ್ಮ[/caption]

ಇವತ್ತು ಸಂಜೆ 5 ಗಂಟೆಗೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಈ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಪರಿಶೀಲಿಸಿದಾಗ ಒಂದೇ ಮನೆಯಲ್ಲಿ ಮೂವರು ಮಹಿಳೆಯರ ರುಂಡ-ಮುಂಡ ಬೇರೆಯಾಗಿರೋ ಮೃತದೇಹಗಳು ಪತ್ತೆಯಾಗಿದೆ.

ಆರೋಪಿ ಗಂಗರಾಜುಗೆ 42 ವರ್ಷ ವಯಸ್ಸು. ಈತ ಹೆಬ್ಬಗೋಡಿ ಠಾಣೆಯ ಹೋಮ್‌ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. 36 ವರ್ಷದ ಭಾಗ್ಯ ಗಂಗರಾಜು ಪತ್ನಿ. 19 ವರ್ಷದ ಮಗಳು ನವ್ಯಾ ಹಾಗೂ 23 ವರ್ಷದ ಹೇಮಾವತಿ ಮೃತ ಮೂವರು ಮಹಿಳೆಯರು. ಸಂಬಂಧದಲ್ಲಿ ಹೇಮಾವತಿಗೆ ಗಂಗರಾಜು ಚಿಕ್ಕಪ್ಪ ಆಗಬೇಕು.

ಇದನ್ನೂ ಓದಿ: Karnataka Naxal: ಸಿಎಂ ಸಿದ್ದರಾಮಯ್ಯ ಎದುರು 6 ಮಂದಿ ನಕ್ಸಲರು ಶರಣಾಗತಿ 

ಆರೋಪಿ ಗಂಗರಾಜು ಮುಲತಃ ನೆಲಮಂಗಲದವರು. ಕಳೆದ 6 ವರ್ಷದಿಂದ ಜಾಲಹಳ್ಳಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಂಗರಾಜು ಒಂದೇ ಕೊಣೆಯಲ್ಲಿ ಮೂವರು ಮಹಿಳೆಯರ ಜೀವ ತೆಗೆದು ಮಚ್ಚಿನ ಸಮೇತ ಪೀಣ್ಯಾ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮಚ್ವಿನಿಂದ ಸಿಕ್ಕ ಸಿಕ್ಕಲ್ಲಿ ಕತ್ತರಿಸಿರುವ ಗಂಗರಾಜು, ಹೆಂಡತಿ ಮೇಲೆ ಅಕ್ರಮ ಸಂಬಂಧದ ಆರೋಪ ಮಾಡಿ ನಾಟಕ ಮಾಡಿದ್ದಾನೆ.

publive-image

ಭಯಾನಕ ಕೃತ್ಯಕ್ಕೆ ಕಾರಣವೇನು?
ಮನೆಯಲ್ಲಿ ನಿನ್ನೆ ಗಂಗರಾಜು ಮೇಲೆ ಹೆಂಡತಿ ಮತ್ತು ಇಬ್ಬರು ಯುವತಿಯರು ಜಗಳ ಮಾಡಿದ್ದಾರೆ. ಈ ಜಗಳದಲ್ಲಿ ಮೂವರು ಮಹಿಳೆಯರು ಸೇರಿ ಗಂಗರಾಜು ಮೇಲೆ ಹಲ್ಲೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಗಂಗರಾಜುಗೆ ಮೂವರು ತಲೆ ಊದಿಕೊಳ್ಳುವಂತೆ ಹೊಡೆದಿದ್ದಾರೆ. ಇಂದು ಮತ್ತೆ ಇಬ್ಬರು ಯುವತಿಯರ ಜೊತೆ ಗಂಗರಾಜು ಗಲಾಟೆ ಮಾಡಿಕೊಂಡಿದ್ದಾನೆ. ಆ ವೇಳೆ ಯುವತಿಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ನಿನ್ನೆಯ ಗಲಾಟೆಯ ಹಿನ್ನೆಲೆ ಇಂದು ಮತ್ತೆ ಕುಡಿದಿದ್ದ ಗಂಗರಾಜು, ಮನೆಯಲ್ಲಿ ಇಬ್ಬರೇ ಹೆಣ್ಣು ಮಕ್ಕಳು ಇದ್ದ ವೇಳೆ ಇಬ್ಬರನ್ನು ಮಚ್ಚಲ್ಲಿ ಕೊಚ್ಚಿದ್ದಾನೆ. ಇಬ್ಬರ ತಲೆಯನ್ನ ಕಡಿದು ಅಡುಗೆ ಮನೆಯಲ್ಲಿ ಬಿಸಾಡಿದ್ದಾನೆ. ಈ ವೇಳೆ ಭಾಗ್ಯಮ್ಮ ಮನೆ ಸಾಮಗ್ರಿ ತರಲು ಹೊರಗೆ ಹೋಗಿದ್ದರು. ಮನೆಗೆ ಎಂಟ್ರಿ ಆಗ್ತಿದ್ದಂತೆ ಮಚ್ಚು ಹಿಡಿದು ಕುಳಿತಿದ್ದ ಗಂಗರಾಜು, ಭಾಗಮ್ಯ ಎಂಟ್ರಿ ಆಗ್ತಿದ್ದಂತೆ ಮಚ್ಚು ಬೀಸಿದ್ದಾನೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಸದ್ಯ ಪೀಣ್ಯಾ ಪೊಲೀಸ್ ಠಾಣೆಯಲ್ಲಿರುವ ಆರೋಪಿ ಗಂಗರಾಜು ಅವರನ್ನ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment