Advertisment

ಬಾ ಮನೆಗೆ ಟೀ ಕುಡಿಯೋಣ.. ಕಂಟ್ರ್ಯಾಕ್ಟರ್​ ಕರೆದು ಶಾಕ್ ಕೊಟ್ಟ ಯುವತಿ; ಇದು ಪಕ್ಕಾ ಫಿಲ್ಮಿ ಸ್ಟೈಲ್‌!

author-image
admin
Updated On
ಬಾ ಮನೆಗೆ ಟೀ ಕುಡಿಯೋಣ.. ಕಂಟ್ರ್ಯಾಕ್ಟರ್​ ಕರೆದು ಶಾಕ್ ಕೊಟ್ಟ ಯುವತಿ; ಇದು ಪಕ್ಕಾ ಫಿಲ್ಮಿ ಸ್ಟೈಲ್‌!
Advertisment
  • ಮಾಗಡಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುವಾಗ ಭೇಟಿ ಮಾಡಿದ್ದರು
  • ಬನ್ನಿ ನಮ್ಮ ಮನೆಗೆ ಟೀ ಕುಡಿದು ಹೋಗಿ ಎಂದು ಕರೆದಳು
  • ಗೋಲ್ಡ್ ಚೈನ್, 29 ಸಾವಿರ ಕ್ಯಾಶ್, 2 ಲಕ್ಷ ರೂ. ಡಿಮ್ಯಾಂಡ್!

ಬೆಂಗಳೂರು: ಸುಂದರಿಯ ಗ್ಯಾಂಗ್‌ ಕಂಟ್ರ್ಯಾಕ್ಟರ್‌ಗೆ ಬಲೆ ಬೀಸಿ ಹನಿ ಟ್ರ್ಯಾಪ್ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕಂಟ್ರ್ಯಾಕ್ಟರ್ ರಂಗನಾಥ್ ಅವರು ಯುವತಿ ನಯನಾ ಹಾಗೂ ಹನಿ ಟ್ರ್ಯಾಪ್ ಗ್ಯಾಂಗ್ ವಿರುದ್ಧ ದೂರು ದಾಖಲಿಸಿದ್ದಾರೆ.

Advertisment

ಕಂಟ್ರ್ಯಾಕ್ಟರ್ ರಂಗನಾಥ್ ಅವರನ್ನ ನಯನಾ ಅಂಡ್ ಟೀಮ್‌ ಸಿನಿಮಾ ಶೈಲಿಯಲ್ಲಿ ಬಲೆಗೆ ಬೀಳಿಸಿದೆ. ಬನ್ನಿ ನಮ್ಮ ಮನೆಗೆ ಟೀ ಕುಡಿದು ಹೋಗಿ ಎಂದು ಕರೆದಿದ್ದ ಯುವತಿ ಮಾತು ಕೇಳಿ ಹೋದ ಕಂಟ್ರ್ಯಾಕ್ಟರ್‌ ಹನಿ ಗ್ಯಾಂಗ್ ಬಲೆಗೆ ಬಿದ್ದು ಒದ್ದಾಡಿದ್ದಾರೆ.

ಇದನ್ನೂ ಓದಿ: BREAKING: ಬೆಂಗಳೂರಲ್ಲಿ ಕಿರುತೆರೆಯ ಖ್ಯಾತ ನಟ ಚರಿತ್ ಬಾಳಪ್ಪ ಬಂಧನ 

ಕಂಟ್ರಾಕ್ಟರ್​ಗೆ ಬಲೆ ಬೀಸಿದ್ದ ‘ಹನಿ’ ಗ್ಯಾಂಗ್‌! 
ಆರೋಪಿ ನಯನಾ ಎಂಬಾಕೆಗೆ ಸ್ನೇಹಿತನ ಮೂಲಕ ಕಂಟ್ರ್ಯಾಕ್ಟರ್​ ರಂಗನಾಥ್​ ಪರಿಚಯ ಆಗಿದೆ. ಹಾಗೆ ಮಾತನಾಡುತ್ತಾ ನಯನ ತನ್ನ ಮಗುವಿಗೆ ಹುಷಾರಿಲ್ಲ ಅಂತ 5, 10 ಸಾವಿರ ರೂಪಾಯಿ ಹಣ ಹಾಕಿಸಿಕೊಂಡಿದ್ದರಂತೆ.

publive-image

ಕಳೆದ ಡಿಸೆಂಬರ್ 9ರಂದು ಬೆಳಗ್ಗೆ ರಂಗನಾಥ್ ಅವರು ಬೈಕ್​ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಹಿಂದೆ ಸ್ಕೂಟರ್​ನಲ್ಲಿ ಬಂದು ನಯನ ರಂಗನಾಥ್ ಅವರನ್ನ ಮಾತನಾಡಿಸಿದ್ದಾರೆ. ಆಗ ಬನ್ನಿ ನಮ್ಮ ಮನೆ ಇಲ್ಲೇ ಇದೆ. ಬನ್ನಿ ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದಾರೆ.

Advertisment

ನಯನಾ ಅವರ ಮಾತು ನಂಬಿ ಮನೆಗೆ ಹೋದ ಕಂಟ್ರ್ಯಾಕ್ಟರ್‌ ಜೊತೆ ಆಕೆ ಮಾತನಾಡುತ್ತಾ ಇದ್ದರು. ಈ ವೇಳೆ ನಯನಾ ಮನೆಗೆ ಅಪರಿಚಿತ ವ್ಯಕ್ತಿಗಳು ಏಕಾಏಕಿ ಎಂಟ್ರಿ ಕೊಟ್ಟಿದ್ದಾರೆ. ನಾವು ಕ್ರೈಂ ಪೊಲೀಸರು ಎಂದು ಬೆದರಿಸಿ ಕಂಟ್ರ್ಯಾಕ್ಟರ್‌ ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ.

publive-image

ಹಲ್ಲೆ ಮಾಡುವುದರ ಜೊತೆಗೆ ಬಟ್ಟೆ ಬಿಚ್ಚಿಸಿ ಫೋಟೋ ತೆಗೆದುಕೊಂಡು 2 ಲಕ್ಷ ರೂಪಾಯಿ ಡಿಮ್ಯಾಂಡ್ ‌ಮಾಡಿದ್ದಾರೆ. ಗೋಲ್ಡ್ ಚೈನ್, 29 ಸಾವಿರ ಕ್ಯಾಶ್​​ ಹಾಗೂ 26 ಸಾವಿರ ಫೋನ್ ಪೇ ಮಾಡಿಸಿಕೊಂಡು ಅಲ್ಲಿಂದ ಪರಾರಿ ಆಗಿದ್ದಾರೆ.

publive-image

ನಯನಾ ಡ್ರಾಮಾ ಶುರುವಾಗಿದ್ದೇ ಈಗ
ಇದೆಲ್ಲಾ ರಿಯಲ್ ಎಂದು ನಂಬಿದ್ದ ಕಂಟ್ರ್ಯಾಕ್ಟರ್‌ ರಂಗನಾಥ್, ನಯನಾಗೆ ಕರೆ ಮಾಡಿ ಬಾ ಪೊಲೀಸ್ ಠಾಣೆಗೆ ದೂರು ಕೊಡೋಣ ಎಂದು ಕರೆದಿದ್ದಾರೆ. ಆಗ ಡ್ರಾಮಾ ಶುರು ಮಾಡಿದ್ದ ಆರೋಪಿ ನಯನಾ ರಂಗನಾಥ್​ಗೆ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದರಂತೆ. ಕೊನೆಗೆ ವಕೀಲರ ಜೊತೆ ಚರ್ಚಿಸಿ ರಂಗನಾಥ್ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆ ವೇಳೆ ನಯನಾ, ಮೋಹನ್, ಸಂತೋಷ್, ಮತ್ತಿಬ್ಬರ ಕೃತ್ಯ ಬಯಲಾಗಿದೆ. ಈ ಪ್ರಕರಣದಲ್ಲಿ ಮೂವರು ಅರೆಸ್ಟ್ ಆದ್ರೆ ನಯನಾಳಿಗಾಗಿ ಪೊಲೀಸರು ಬಲೆ‌ ಬೀಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment