/newsfirstlive-kannada/media/post_attachments/wp-content/uploads/2025/02/Bangalore.jpg)
ಸಿಲಿಕಾನ್ ಸಿಟಿ ಜನರು ಇನ್ಮುಂದೆ ಸ್ವಲ್ಪ ಎಚ್ಚರದಿಂದ ಇರಬೇಕು. ಸುಖಾ ಸುಮ್ಮನೇ ನೀರು ವ್ಯರ್ಥ ಮಾಡುವ ಜನರಿಗೆ ಬಿಸಿ ಮುಟ್ಟಿಸಲು ಜಲಮಂಡಳಿ ಮುಂದಾಗಿದೆ.
ಇನ್ಮುಂದೆ ಬೆಂಗಳೂರು ನಗರದಲ್ಲಿ ನೀರು ವೇಸ್ಟ್ ಮಾಡಿದ್ರೆ ಸ್ಥಳದಲ್ಲೇ ದಂಡ ಬೀಳುತ್ತೆ. ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರನ್ನು ವ್ಯರ್ಥ ಮಾಡೋರಿಗೆ ದಂಡ ಹಾಕಲಾಗುವುದು ಎಂದು ಜಲಮಂಡಳಿ ನಗರದ ಜನತೆಗೆ ಎಚ್ಚರಿಕೆ ನೀಡಿದೆ.
/newsfirstlive-kannada/media/post_attachments/wp-content/uploads/2024/03/Car-Washing.jpg)
ಯಾವುದಕ್ಕೆ ಕುಡಿಯುವ ನೀರು ಬಳಸಬಾರದು?
1. ವಾಹನ ಸ್ವಚ್ಛತೆಗೆ ಬಳಸುವಂತಿಲ್ಲ
2. ಕೈದೋಟಕ್ಕೆ ಬಳಸುವಂತಿಲ್ಲ
3. ಕಟ್ಟಡ ನಿರ್ಮಾಣಕ್ಕೆ ಬಳಸುವಂತಿಲ್ಲ
4. ಮನರಂಜನೆ ಉದ್ದೇಶದಿಂದ ಕಾರಂಜಿ ಅಂತಹ ವ್ಯವಸ್ಥೆಗೆ ಬಳಸುವಂತಿಲ್ಲ
5. ಸಿನಿಮಾ ಮಂದಿರ, ಮಾಲ್‌ಗಳಲ್ಲಿ ಕುಡಿಯುವುದಕ್ಕೆ ಹೊರತು ಪಡಿಸಿ ಬೇರೆಯದಕ್ಕೆ ಬಳಸುವಂತಿಲ್ಲ
6. ರಸ್ತೆ ನಿರ್ಮಾಣಕ್ಕೆ ಮತ್ತು ಸ್ವಚ್ಚತೆಗೆ ಬಳಸುವಂತಿಲ್ಲ
ಇದನ್ನೂ ಓದಿ:
ಈ ಮೇಲಿನ 6 ಉದ್ದೇಶಗಳಿಗೆ ಮೊದಲನೆಯ ಸಲ ಬಳಸಿದ್ದು ಕಂಡು ಬಂದರೆ 5000 ದಂಡ ವಿಧಿಸಲಾಗುತ್ತೆ. ಮತ್ತೆ ಮರುಕಳಿಸಿದರೆ ಮತ್ತೆ 5000 ದಂಡ ಹಾಕಲಾಗುತ್ತೆ. ಇದರ ಜೊತೆಗೆ ಪ್ರತಿನಿತ್ಯ 500 ಹೆಚ್ಚುವರಿ ದಂಡ ಕೂಡ ಹಾಕಲಾಗುವುದು ಎಂದು ಜಲಮಂಡಳಿ ಎಚ್ಚರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us