newsfirstkannada.com

‘2019ರಿಂದ ಚಲನಚಿತ್ರ ಪ್ರಶಸ್ತಿ ಕೊಟ್ಟಿಲ್ಲ, ಆದರೆ..’ ಶೀಘ್ರದಲ್ಲೇ ಕಲಾವಿದರಿಗೆ ಗುಡ್​ನ್ಯೂಸ್ ಎಂದ ಸಿದ್ದರಾಮಯ್ಯ

Share :

Published March 1, 2024 at 7:28am

Update March 1, 2024 at 7:29am

    ರಾಯಭಾರಿ ಆಗಿ ಡಾಲಿ ಧನಂಜಯ್, ಶಿವರಾಜ್ ಕುಮಾರ್ ಭಾಗಿ

    ಕಾರ್ಯಕ್ರಮದಲ್ಲಿ ರಿಕ್ಕಿ ಕೇಜ್ ಟೀಂ ಪರ್ಫಾಮೆನ್ಸ್ ಝಲಕ್‌ ಜೋರು

    ಕೆಜಿಎಫ್​, ಕಾಂತಾರ ನಾಡಿನ ಹೆಮ್ಮ ಹೆಚ್ಚಿಸಿವೆ- ಶಿವರಾಜ್​ ಕುಮಾರ್

ಸಿನಿಮಾ ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಕಿರಿಯಂದಿರಿಂದ ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಅದು ಒಂದೊಂದು ದೇಶ ಸಿನಿಮಾಗಳು ತನ್ನದೆ ಆದ ಮಹತ್ವ ಹೊಂದಿರುತ್ತವೆ. ಇದೀಗ ನಿನ್ನೆ 90 ವರ್ಷಗಳ ಸಂಭ್ರಮ ಮತ್ತು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.

15ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಚಲನಚಿತ್ರ ಉತ್ಸವಕ್ಕೆ ವಿಜೃಂಭಣೆಯ ಸ್ವಾಗತಕೋರಿದೆ.

ಇಳಿ ಸಂಜೆಯಲ್ಲಿ ಸೊಂಪಾದ ಸಂಗೀತದ ರಸದೌತಣ

ವಿಧಾನಸೌಧದ ಮುಂಭಾಗದಲ್ಲಿರುವ ಗ್ರ್ಯಾಂಡ್ ಸ್ಟೆಪ್ಸ್​​​ನಲ್ಲಿ ಸಿಎಂ ಸಿದ್ಧರಾಮಯ್ಯ ದೀಪ ಬೆಳಗುವ ಮೂಲಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನ ಉದ್ಘಾಟಿಸಿದ್ರು. ಕಾರ್ಯಕ್ರದಲ್ಲಿ ಚಲನಚಿತ್ರೋತ್ಸವದ ರಾಯಭಾರಿ ಆಗಿರುವ ಡಾಲಿ ಧನಂಜಯ್, ನಟ ಶಿವರಾಜ್ ಕುಮಾರ್ ಭಾಗಿಯಾಗಿದ್ದರು.

5 ವರ್ಷವು ಎಲ್ಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದೆ. ಚಲನಚಿತ್ರೋತ್ಸವ ನಡೆಯಲು ಸರ್ಕಾರದಿಂದ ಎಲ್ಲ ಸಹಾಕಾರ, ಸಹಾಯವನ್ನು ನೀಡಿರುವುದು ಖುಷಿ ಕೊಟ್ಟಿದೆ. ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಮತ್ತು ನಮ್ಮ ಸಮಾಜವನ್ನು ಇನ್ನಷ್ಟು ಮಾನವೀಯಗೊಳಿಸಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ. ಇಡೀ ಜಗತ್ತು ಮಾನವೀಯ ಬೆಸುಗೆಯಲ್ಲಿ ಬೆರೆಯಲು, ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಂಸ್ಕೃತಿಯನ್ನು ಪಾಲಿಸಿದಾಗ ಜಗತ್ತಲ್ಲಿ ಶಾಂತಿ ನೆಲೆಸುತ್ತದೆ. 2019 ರಿಂದ ಚಲನಚಿತ್ರ ಪ್ರಶಸ್ತಿಗಳನ್ನು ಕೊಟ್ಟಿಲ್ಲ. ನಾವು ಬಾಕಿ ಉಳಿದಿರುವ ಎಲ್ಲಾ ವರ್ಷಗಳ ಉತ್ತಮ ಸಿನಿಮಾಗಳ ಆಯ್ಕೆಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ವರದಿ ಕೊಟ್ಟ ತಕ್ಷಣ ಪ್ರಶಸ್ತಿಗಳನ್ನು ಘೋಷಿಸಲಾಗುವುದು-ಸಿದ್ದರಾಮಯ್ಯ, ಮುಖ್ಯಮಂತ್ರಿ

15ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಳಿಸಂಜೆಯಲ್ಲಿ ಸೊಂಪಾದ ಸಂಗೀತ ಕಾರ್ಯಕ್ರಮ ನೆರೆದವರ ಮನ ತಣಿಸಿತು. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತಹ ಗಂಗಾ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಸಿಕ್ಕಿತ್ತು.. ಇನ್ನೂ ಕನ್ನಡಿಗರ ಜೀವ-ಜಲ ಕಾವೇರಿ ನದಿಯ ಕುರಿತು ‘ಅಮ್ಮ ಕಾವೇರಿ’ ಹಾಡಿಗೆ ಗಾಯಕಿ ಚೈತ್ರಾ ಹಾಗೂ ರಿಕ್ಕಿ ಕೇಜ್ ಜೀವ ತುಂಬಿ ಹಾಡಿದ್ದರು. ಸೋಜುಗಾದ ಸೂಜು ಮಲ್ಲಿಗೆ ಹಾಡಿನ‌ ಮೂಲಕ ಮಹದೇಶ್ವರನ ಪ್ರಾರ್ಥನೆ ಮಾಡಿದ್ರೆ, 90 ವರ್ಷದ ಕನ್ನಡದ ಸಿನಿಮಾ ಹಬ್ಬ ಎಂದ ರಿಕ್ಕಿ ಕೇಜ್ ವೈಲ್ಡ್ ಕರ್ನಾಟಕ ವಿಶೇಷ ಗೀತೆಗೆ ರಿಕ್ಕಿ ಕೇಜ್ ಟೀಂ ಪರ್ಫಾಮೆನ್ಸ್ ಝಲಕ್‌ ಜೋರಾಗಿತ್ತು.

ಇನ್ನೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿ ಆಗಿದ್ದ ನಟ ಡಾಲಿ ಧನಂಜಯ್ ಮತ್ತು ನಟ ಶಿನರಾಜ ಕುಮಾರ್ ಕೂಡಾ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದರು. ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡ್ರು.

‘ಕನ್ನಡ ಸಿನಿಮಾಗಳು ನಮಗೆ ಹೆಮ್ಮೆ’

ಆರ್ಟ್,​ ಸೈನ್ಸ್​​ ಮತ್ತು ಸ್ಪೋರ್ಟ್ಸ್​​ ಈ ಮೂರು ಜನಗಳನ್ನು ಯಾವಗಲೂ ಒಟ್ಟಿಗೆ ಇಡುತ್ತಾವೆ. ತುಂಬಾ ಚೆನ್ನಾಗಿ ಜನರನ್ನು ಸೇರಿಸುತ್ತಾವೆ. ಜಾತಿ, ಮತ, ಧರ್ಮಗಳನ್ನ ಮೀರಿ ಸಿನಿಮಾ ಮಾಡುತ್ತೇವೆ. ಒಟ್ಟಿಗೆ ಥಿಯೇಟರ್​ನಲ್ಲಿ ಕುಳಿತು ಸಲೆಬ್ರೆಟ್ ಮಾಡುತ್ತೇವೆ. ಹಾಗಾಗಿ ಇಂತಹ ಕಾರ್ಯಕ್ರಮಗಳು ತುಂಬಾ ಮುಖ್ಯ.

ಡಾಲಿ ಧನಂಜಯ್, ನಟ

‘ಸಿನಿಮಾ ಜನರನ್ನ ಒಗ್ಗೂಡಿಸುತ್ತೆ’

ಈಗಾಗಲೇ 200 ಸಿನಿಮಾಗಳು ಬಂದಿದ್ದು ಇದರಲ್ಲಿ ಕನ್ನಡ ಸಿನಿಮಾಗಳು ಬಂದಿರುವುದು ಸಂತೋಷವಾಗಿದೆ. ಕನ್ನಡ ಸಿನಿಮಾ ಇಂಟರ್​​ನ್ಯಾಷನಲ್​ ಲೆವೆಲ್​ಗೆ ಮುಟ್ಟಿದೆ. ಕೆಜಿಎಫ್​, ಕಾಂತಾರ ಮುಖಾಂತರ ನಮ್ಮ ನಾಡಿನ ಹೆಮ್ಮೆ ಹೆಚ್ಚಿದೆ. ಇದು ನಮಗೂ ಕೂಡ ಹೆಮ್ಮೆ ತರುತ್ತದೆ.

ಶಿವರಾಜ್​ಕುಮಾರ್, ನಟ

ಫೆಬ್ರವರಿ 29ರಿಂದ ಮಾರ್ಚ್ 7ರ ವರೆಗೆ ಎಂಟು ದಿನಗಳ ಕಾಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ದೇಶ-ವಿದೇಶಗಳಲ್ಲಿ ಮನ್ನಣೆ ಪಡೆದಿದ್ದು, ಇದರಲ್ಲಿ 50 ರಾಷ್ಟ್ರಗಳ ಸುಮಾರು 180 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಒರಾಯನ್ ಮಾಲ್‌ನ ಪಿವಿಆರ್‌, ಸುಚಿತ್ರಾ ಫಿಲ್ಮ್ ಸೊಸೈಟಿ ಹಾಗೂ ಕಲಾವಿದರ ಸಂಘದಲ್ಲಿ ಚಿತ್ರಗಳ ಪ್ರದರ್ಶನ ನಡೆಯಲಿದೆ. ಮಾರ್ಚ್​ 7ರ ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ರಾಜ್ಯಪಾಲರು ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಕನ್ನಡ ಸ್ಪರ್ಧಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಏಷಿಯನ್ ಸ್ಪರ್ಧಾ ವಿಭಾಗ ಎಂಬ 3 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕನ್ನಡ ವಿಭಾಗದಲ್ಲಿ ಈ ಬಾರಿ 12 ಸಿನಿಮಾ ಕಣಕ್ಕಿಳಿಯುತ್ತಿವೆ.

ಜಗತ್ತಿನ ಆರ್ಟ್, ಸೈನ್ಸ್,‌ ಸ್ಪೋರ್ಟ್ ಸೇರಿದಂತೆ ಹತ್ತಾರು ಬಗೆಯ ಸಿನಿಮಾಗಳು ಪ್ರದರ್ಶನಗೊಳಲಿವೆ. ಪ್ರೇಕ್ಷರನ್ನು 8 ದಿನಗಳ ಕಾಲ ಈ 15ನೇ ಚಿತ್ರೋತ್ಸವ ರಸದೌತಣ ನೀಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘2019ರಿಂದ ಚಲನಚಿತ್ರ ಪ್ರಶಸ್ತಿ ಕೊಟ್ಟಿಲ್ಲ, ಆದರೆ..’ ಶೀಘ್ರದಲ್ಲೇ ಕಲಾವಿದರಿಗೆ ಗುಡ್​ನ್ಯೂಸ್ ಎಂದ ಸಿದ್ದರಾಮಯ್ಯ

https://newsfirstlive.com/wp-content/uploads/2024/03/SIDDARAMAIAH-22.jpg

Load More