ಕೆಲಸ ಮಾಡೋ ಮಹಿಳೆಯರಿಗೆ ಬೆಂಗಳೂರು ಬೆಸ್ಟ್​ ಪ್ಲೇಸ್​​; ನೀವು ಓದಲೇಬೇಕಾದ ಸ್ಟೋರಿ ಇದು

author-image
Ganesh Nachikethu
Updated On
ಟೆನ್ಷನ್ ಬಿಟ್ಹಾಕಿ ಕೂಲ್ ಆಗಿರಿ.. ಈ 4 ಮಾರ್ಗಗಳನ್ನ ಪಾಲಿಸಿದ್ರೆ ಒತ್ತಡದಿಂದ ಪಾರಾಗಬಹುದು; ನೀವೂ ಟ್ರೈ ಮಾಡಿ!
Advertisment
  • ಕೆಲಸ ಮಾಡೋ ಮಹಿಳೆಯರಿಗೆ ಬೆಂಗಳೂರು ಬೆಸ್ಟ್
  • 2023ರಲ್ಲಿ ಚೆನ್ನೈ; 2024ರಲ್ಲಿ ಬೆಂಗಳೂರು ನಂಬರ್ 1
  • ಮಹಿಳೆಯರ ವೇತನ ವಿಚಾರದಲ್ಲೂ ಮುಂಚೂಣಿ..!

ಬೆಂಗಳೂರು: ಇದು ನಮ್ಮ ಬೆಂಗಳೂರು. ಐಟಿ ಫೀಲ್ಡ್, ಸೈನ್ಸ್, ಟೆಕ್ನಾಲಜಿ, ಶಿಕ್ಷಣ ಹೀಗೆ ಹತ್ತು ಹಲವು ವಿಚಾರಗಳಲ್ಲಿ ಬೆಂಗಳೂರು ಈಸ್​ ಬೆಸ್ಟ್​. ಐಟಿ ಬಿಟಿ ನಗರದ ಶಕ್ತಿ ತಾಕತ್ತು ಇಡೀ ಜಗತ್ತಿಗೆ ಗೊತ್ತು. ಅದೇ ರೀತಿ ಇದೀಗ ಮತ್ತೊಂದು ವಿಚಾರದಲ್ಲಿ ಸಿಲಿಕಾನ್ ಸಿಟಿ ಫಸ್ಟ್ ಅನ್ನೋ ಪಟ್ಟ ಅಲಂಕರಿಸಿದೆ.

ಅದೆಷ್ಟೋ ಕೋಟಿ ಜನರಿಗೆ ಕನಸಿನ ನಗರಿ ಈ ಬೆಂಗಳೂರು. ಬದುಕು ಕಟ್ಟಿಕೊಳ್ಳುವವರಿಗೆ ಸ್ವಂತ ಊರು ಈ ನಮ್ಮ ಬೆಂಗಳೂರು. ಈಗ ಇದೇ ಬೆಂಗಳೂರಿಗೆ ಮತ್ತೊಂದು ಪ್ರಮುಖ ವಿಚಾರದಲ್ಲಿ ಬೆಸ್ಟ್​ ಜೊತೆಗೆ ಫಸ್ಟ್ ಅನ್ನೋ ಪಟ್ಟ ದಕ್ಕಿದೆ.
ಕೆಲಸ ಮಾಡೋ ಮಹಿಳೆಯರಿಗೆ ಬೆಂಗಳೂರು ಈಸ್ ಬೆಸ್ಟ್..​!

ಇದು ಸತ್ಯ ಕೆಲಸ ಮಾಡುವ ಮಹಿಳೆಯರಿಗೆ ಬೆಂಗಳೂರು ಇಡೀ ಇಂಡಿಯಾದಲ್ಲೇ ಒನ್ ಆಫ್ ದಿ ಬೆಸ್ಟ್​ ಸಿಟಿ. 2024ರಲ್ಲಿ ಅವತಾರ್ ಗ್ರೂಪ್ ನಡೆಸಿದ ಟಿಸಿಡಬ್ಲ್ಯೂಐ ಅಂದ್ರೆ, ಟಾಪ್ ಸಿಟೀಸ್ ಫಾರ್ ವುಮೆನ್ ಇನ್ ಇಂಡಿಯಾ ಈ ಸಮೀಕ್ಷೆಯಲ್ಲಿ ಬೆಂಗಳೂರು ನಂಬರ್ 1 ಸ್ಥಾನ ಅಲಂಕರಿಸಿದೆ. ಚೆನ್ನೈ ಹಿಂದಿಕ್ಕಿರುವ ಬೆಂಗಳೂರೇ ಇದೀಗ ದೇಶದಲ್ಲೇ ನಂಬರ್ 1.

ಸಿಲಿಕಾನ್​ ಸಿಟಿ ಬೆಂಗಳೂರು ನಂ. 1

ಉದ್ಯೋಗ ಮಾಡೋ ಮಹಿಳೆಯರಿಗೆ ಬೆಂಗಳೂರು ಭಾರತದ ಬೆಸ್ಟ್​ ಸಿಟಿ. ಭಾರತದ ಪ್ರಮುಖ 120 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ವಿಶೇಷ ಏನಂದ್ರೆ, ದಕ್ಷಿಣ ಭಾರತದ ಬಹುತೇಕ ನಗರಗಳು ಲಿಂಗ ಸಮಾನತೆ, ಮಹಿಳೆಯರ ಸುರಕ್ಷತೆಯಲ್ಲಿ ಮುಂದಿವೆ ಅನ್ನೋದು ಸಮೀಕ್ಷೆಯಲ್ಲಿ ರಿವೀಲ್ ಆಗಿದೆ. ಉದ್ಯೋಗವಕಾಶ, ಮೂಲ ಸೌಕರ್ಯ, ಮಹಿಳೆಯರಿಗೆ ಪ್ರೋತ್ಸಾಹ ವಿಚಾರದಲ್ಲಿ ಬೆಂಗಳೂರು ಎಲ್ಲಾ ನಗರಗಳಿಗಿಂತ ಬೆಸ್ಟ್. ಅಲ್ಲದೇ, ಕೆಲಸದ ಕಚೇರಿಗಳಲ್ಲಿ ಮಹಿಳೆಯರಿಗೆ ಉತ್ತಮ ವಾತಾವರಣ ಕಲ್ಪಿಸೋದ್ರಲ್ಲೂ ಹಾಗೂ ವೇತನ ವಿಚಾರದಲ್ಲೂ ಬೆಂಗಳೂರು ಮುಂಚೂಣಿಯಲ್ಲಿದೆ.

ಮಹಿಳಾ ಸುರಕ್ಷತೆಯಲ್ಲಿ ಪ್ರತಿ ನಗರದಲ್ಲಿ ದಾಖಲಾಗಿರುವ ಪ್ರಕರಣ, ಕಿರುಕುಳ, ಮಹಿಳೆಯರ ದೂರಿಗೆ ಸಿಕ್ಕ ಪರಿಹಾರ ಹಾಗೂ ನ್ಯಾಯ ಸೇರಿದಂತೆ ಹಲವು ಮಾನದಂಡಗಳನ್ನು ಮುಂದಿಟ್ಟು ಸರ್ವೆ ನಡೆಸಲಾಗಿದೆ.

ಒಟ್ಟಾರೆ ಬೆಂಗಳೂರು ಪ್ರತಿ ದಿನ ಬೆಳೆಯುತ್ತಿದೆ. ಇಲ್ಲಿ ಮಹಿಳಾ ಸುರಕ್ಷತೆಗೆ ಹೆಚ್ಚು ಪ್ರಿಫರೆನ್ಸ್ ನೀಡಬೇಕಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಮಧ್ಯೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಈ ಪಟ್ಟ ಒಲಿದು ಬಂದಿರೋದು ನಿಜಕ್ಕೂ ಖುಷಿ ವಿಚಾರ.

ಇದನ್ನೂ ಓದಿ:ಖಾಸಗಿ ಉದ್ಯೋಗಿಗಳಿಗೆ ಬಿಗ್​​ ಶಾಕ್​​; ಇನ್ಮುಂದೆ ದಿನಕ್ಕೆ 15 ಗಂಟೆ ಕೆಲಸ ಮಾಡಬೇಕಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment