/newsfirstlive-kannada/media/post_attachments/wp-content/uploads/2025/05/ISCKON.jpg)
ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಹರೇ ಕೃಷ್ಣ ದೇವಾಲಯವು ಬೆಂಗಳೂರು ಇಸ್ಕಾನ್ ಸೊಸೈಟಿಗೆ ಸೇರಿದೆ ಅಂತಾ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಹಿಂದೆ ಕರ್ನಾಟಕ ಹೈಕೋರ್ಟ್, ಬೆಂಗಳೂರು ಇಸ್ಕಾನ್, ಮುಂಬೈ ಇಸ್ಕಾನ್ ಸಂಸ್ಥೆಗೆ ಸೇರಿದೆ ಎಂದು ತೀರ್ಪು ನೀಡಿತ್ತು. ಇನ್ಮುಂದೆ ಸುಪ್ರೀಂ ಕೋರ್ಟ್ ಆದೇಶದಂತೆ ಬೆಂಗಳೂರಿನ ಹರೇ ಕೃಷ್ಣ ದೇವಾಲಯ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿನ ಪೂರ್ಣ ಹಕ್ಕು ಬೆಂಗಳೂರು ಇಸ್ಕಾನ್ ಸೊಸೈಟಿಗೆ ಸಿಗಲಿದೆ.
ಏನಿದು ಪ್ರಕರಣ..?
ಈ ಹಿಂದೆ ಇಸ್ಕಾನ್ ಮಾಲೀಕತ್ವದ ವಿವಾದ ಬೀದಿ ರಂಪವಾಗಿತ್ತು. ಮುಂಬೈ ಇಸ್ಕಾನ್ (Mumbai ISKCON) ಸಂಸ್ಥೆಯು ಬೆಂಗಳೂರಿನ ಇಸ್ಕಾನ್ ದೇವಾಲಯ ತನ್ನ ಶಾಖೆಯ ಭಾಗ ಅಂತಾ ಹೇಳಿಕೊಂಡಿತ್ತು. ಈ ಸಂಬಂಧ ಮೊದಲು ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿತ್ತು. ಬೆಂಗಳೂರು ಇಸ್ಕಾನ್ ಸಂಸ್ಥೆಯ ಎಲ್ಲಾ ಆಸ್ತಿ ತನಗೆ ಸೇರಬೇಕು ಎಂದು ಮುಂಬೈ ಇಸ್ಕಾನ್ ವಾದಿಸಿತ್ತು. ಆದ್ರೆ ಬೆಂಗಳೂರು ಇಸ್ಕಾನ್ ಸಂಸ್ಥೆಯು ಇದು ಸ್ವತಂತ್ರ ಸಂಸ್ಥೆ ಅಂತ ವಾದಿಸುತಲೇ ಬಂದಿತ್ತು. 2009ರಲ್ಲಿ ಸಿಟಿ ಸಿವಿಲ್ ಕೋರ್ಟ್ ಬೆಂಗಳೂರು ಇಸ್ಕಾನ್ ಸಂಸ್ಥೆ ಪರ ತೀರ್ಪು ನೀಡಿತ್ತು. 2009ರಲ್ಲಿ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಮುಂಬೈ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ್ದ ಹೈಕೋರ್ಟ್, ಬೆಂಗಳೂರು ಇಸ್ಕಾನ್‌ನ ಆಸ್ತಿಗಳ ಮೇಲೆ ಮುಂಬೈ ಇಸ್ಕಾನ್‌ಗೆ ಹಕ್ಕಿದೆ ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಬೆಂಗಳೂರು ಇಸ್ಕಾನ್, 2011ರ ಜೂನ್ 2 ರಂದು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್, ಸಿಟಿ ಸಿವಿಲ್ ಕೋರ್ಟ್ನ ಆದೇಶವನ್ನು ಎತ್ತಿ ಹಿಡಿದಿದೆ. ಅಲ್ಲದೇ ಹೈಕೋರ್ಟ್ನ ಆದೇಶವನ್ನು ರದ್ದು ಮಾಡಿದೆ. ಆ ಮೂಲಕ ಬೆಂಗಳೂರಿನ ಹರೇ ಕೃಷ್ಣ ದೇವಾಲಯ, ಶಿಕ್ಷಣ ಸಂಸ್ಥೆಗಳ ಮೇಲಿನ ಪೂರ್ಣ ಹಕ್ಕು ಬೆಂಗಳೂರು ಇಸ್ಕಾನ್ ಸೊಸೈಟಿಗೆ ನೀಡಿದೆ. ಸುಪ್ರೀಂ ಕೋರ್ಟ್ನ ಜಸ್ಟೀಸ್ ಅಭಯ ಎಸ್.ಓಕಾ ಮತ್ತು ಜಸ್ಟೀಸ್ ಆಗಸ್ಟೀಸ್ ಜಾರ್ಜ್ ನೇತೃತ್ವದ ಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್ಗೆ ಗುಡ್ಬೈ.. ಐಪಿಎಲ್ಗೆ ಹಾಯ್ ಹಾಯ್ ಹೇಳಿದ ಸ್ಟಾರ್ ಪ್ಲೇಯರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ