newsfirstkannada.com

ದೇವರ ಹೆಸರಲ್ಲಿ ಹಣ ವಸೂಲಿ.. ₹10, ₹20 ನಡಿಯೋಲ್ಲ.. ಇವ್ರ ಡಿಮ್ಯಾಂಡ್​​ ಕೇಳಿದ್ರೆ ನೀವೂ ಶಾಕ್​ ಆಗ್ತೀರಾ!

Share :

Published March 31, 2024 at 8:39am

Update March 31, 2024 at 8:40am

    ಬೆಂಗಳೂರು ನಗರದಲ್ಲಿ ಹಣ ವಸೂಲಿ ಮಾಡ್ತಿರೋ ಜೋಗ್ತಿಯಮ್ಮ

    ದುಡಿದು ತಿನ್ನೋಕಾಗದೇ ದೇವರ ಹೆಸರಲ್ಲಿ ವಸೂಲಿಗಿಳಿದಿರುವ ಮಹಾತಾಯಂದಿರು

    ಏನಮ್ಮ ಹೀಗೆಲ್ಲ ಹಣ ವಸೂಲಿ ಮಾಡ್ತಿಯಲ್ಲ ಅಂದ್ರೆ ಏನಂತಾರೆ ಗೊತ್ತಾ?

ತಲೆಯ ಮೇಲೆ ಅಮ್ಮನವರ ಫೋಟೋ. ಕಂಕುಳಲೊಂದು ಜೋಳಿಗೆ. ಹೆಗಲ ಮೇಲೊಂದು ಚಾಟಿ. ಬೆಂಗಳೂರು ಜನ ಇವರನ್ನ ಸಿಗ್ನಲ್​​ಗಳಲ್ಲಿ, ಫುಡ್​ ಸ್ಟ್ರೀಟ್​ಗಳಲ್ಲಿ, ಜಾಮ್​ ಇರೋ ರೋಡ್​ಗಳಲ್ಲಿ ಆಲ್​ಮೋಸ್ಟ್ ನೋಡಿರ್ತಿರಾ. ನೋಡೋಕೆ ಸದೃಢವಾಗಿದ್ದಾರೆ, ಆದ್ರೆ ದುಡಿದು ತಿನ್ನೋಕಾಗದೇ ದೇವರ ಹೆಸರಲ್ಲಿ ವಸೂಲಿಗಿಳಿದಿದ್ದಾರೆ ಈ ಮಹಾತಾಯಂದಿರು.

ಪಾಪ ಅಂತ ನೀವೇನಾದ್ರೂ ಅವರಿಗೆ 10 ರೂಪಾಯಿ 20 ರೂಪಾಯಿ ಕೊಟ್ರೆ ನಡೆಯೋದೆ ಇಲ್ಲ. ಯಾಕಂದ್ರೆ ಜನರಿಂದ ಹೆಚ್ಚಿನ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಿರೋ ದೃಶ್ಯ ನ್ಯೂಸ್​ ಫಸ್ಟ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವರ ಡಿಮ್ಯಾಂಡ್ ಕೇಳಿದ್ರೆ ನೀವೂ ಶಾಕ್ ಆಗ್ತೀರಾ.

ಪ್ರತಿನಿಧಿ: ಏನ್ ಕೆಲಸ ಮಾಡೋದು ನೀವು
ಜೋಗ್ತಿಯಮ್ಮ: ನಾವಾ? ಹರಕೆ ಮಾಡ್ಕೊಂಡಿರೋದು. 8 ವರ್ಷ ಹರಕೆ ಮಾಡ್ಕೊಂಡಿರೋದು.
ಪ್ರತಿನಿಧಿ: ಎಂಟು ವರ್ಷ ಮಾಡ್ಕೊಂಡಿರೋದಾ?
ಜೋಗ್ತಿಯಮ್ಮ: ನಮ್ಮ ಅಮ್ಮನಿಗೆ ಆರಾಮ ಇಲ್ಲ ಅದ್ಕೆ ಮಾಡ್ಕೊಂಡಿರೋದು.. ಎಂಟು ವರ್ಷ ಹರಕೆ ಮಾಡ್ಕೊಂಡಿರೋದು.
ಪ್ರತಿನಿಧಿ: ಏನಕ್ಕೆ ಮಾಡ್ಕೊಳೋದು ಇದನ್ನ
ಜೋಗ್ತಿಯಮ್ಮ: ಇದು ದೇವರ ಕೆಲಸ.. ಮುತ್ತಾತನ ಕಾಲದಿಂದಲೂ ಇದನ್ನೇ ಮಾಡ್ತಿದ್ವಿ.
ಪ್ರತಿನಿಧಿ: ಹರಕೆ ಏನಕ್ಕೆ ಹೊತ್ಕೊಂಡಿರೋದು
ಜೋಗ್ತಿಯಮ್ಮ: ಇವರ ಮುತ್ತಾತ ಏನೋ ಮಾಡ್ಕೊಂಡಿದ್ರಂತೆ.
ಜೋಗ್ತಿಯಮ್ಮ: ನಾವಲ್ಲ.. ನಮ್ಮ ಅಮ್ಮ ಅವರು ಹರಕೆ ಹೊತ್ಕೊಂಡಿದ್ರು.

ಆಟೋ ಪಕ್ಕ ನಿಂತಿದ್ದಾನಲ್ಲ ಈ ವ್ಯಕ್ತಿಗೆ, ಕೈಯಲ್ಲಿ ದೇವರನ್ನ ಹಿಡ್ಕೊಂಡು ಏನೇನೋ ಕತೆ ಕಟ್ಟಿ ಕೊನೆಗೆ ಅವನ ಬಳಿಯಿಂದ ಬರೋಬ್ಬರಿ 200 ರೂಪಾಯಿ ಇಸ್ಕೊಂಡಿದ್ದಾಳೆ. ಬಳಿಕ ಚಾಟಿ ಏಟು ಕೊಟ್ಟು ಅಲ್ಲಿಂದ ಈಕೆ ಮುಂದಕ್ಕೆ ಹೋಗಿದ್ದಾಳೆ. ಹೀಗೆ ಜನರಿಗೆ ದೇವರ ಹೆಸರು ಹೇಳಿ ಭಯ ಹುಟ್ಟಿಸಿ ಹಣ ವಸೂಲಿ ಮಾಡೋದನ್ನ ಇವರು ದಂಧೆ ಮಾಡ್ಕೊಂಡಿದ್ದಾರೆ.

ಹೌದು ಏನಮ್ಮ ಹೀಗೆಲ್ಲ ಹಣ ವಸೂಲಿ ಮಾಡ್ತಿಯಲ್ಲ ಅಂದ್ರೆ. ಈ ಹುಡುಗಿ ಹೇಳೋ ಕಥೆನೇ ಬೇರೆ. ನಮ್ಮ ಅಮ್ಮನಿಗೆ ಹುಷಾರಿಲ್ಲ. ಹರಕೆ ಹೊತ್ಕೊಂಡಿದೀವಿ ಅಂತ ಕತೆ ಕಟ್ಟಿದ್ದಾರೆ. ನಮ್ಮ ಪ್ರತಿನಿಧಿ ಪದೇ ಪದೇ ಏನಿದು ಹರಕೆ ಅಂತ ಕೇಳಿದ್ರೆ ಇವರ ಬಾಯಿಂದ ಉತ್ತರಾನೇ ಬರ್ತಿಲ್ಲ.

ಪ್ರತಿನಿಧಿ: ಏನ್ ಮಾಡ್ತಿದ್ಯಾ?
ಜೋಗ್ತಿಯಮ್ಮ: ನಾನು ಶಾಲೆಗೆ ಹೋಗ್ತಿದ್ದೀನಿ, ಎಂಟನೇ ಕ್ಲಾಸ್ ಓದ್ತಿದ್ದೀನಿ.. ನಮ್ಮೂರಲ್ಲಿ..
ಪ್ರತಿನಿಧಿ: ಮತ್ತೆ ಇಲ್ಲಿ ಏನಕ್ಕೆ ಬಂದೆ?
ಜೋಗ್ತಿಯಮ್ಮ: ರಜೆ ಕೊಟ್ಟಿದ್ದಾರೆ.. ನಮ್ಮ ಅಮ್ಮನಿಗೆ ಆರಾಮ ಇಲ್ಲ ಅದಕ್ಕೆ ಮಾಡಿದ್ದು..
ಪ್ರತಿನಿಧಿ: ಈಗ ಭಕ್ತರ ಹತ್ರ ಬಂದು, ಅಮ್ಮನವರ ತೋರಿಸಿ ಕೊಟ್ಟಷ್ಟು, ಇಸ್ಕೋಬೇಕಲ್ವಾ?
ಜೋಗ್ತಿಯಮ್ಮ: ತಡಿ ಅಕ್ಕ ನಾನೇನು ಭಕ್ತಿ ಅಂತ ಇಸ್ಕೊಂಡಿಲ್ಲ.. 20 ರೂಪಾಯಿ ಕೊಟ್ರಾ.. ನಾನು ಹರಕೆ ಹೊತ್ಕೊಂಡಿದೀನಿ.. ಒಂದು ಕೆಲಸ ಆಗ್ಬೇಕು ಅಂತಂದ್ರೆ, ಜೀವಕ್ಕಿಂತ ಹೆಚ್ಚಿಂದಲ್ಲ. ಜನ್ಮಕ್ಕಿಂತ ಹೆಚ್ಚಿಂದಲ್ಲ.

ಜನರು ಕೊಟ್ಟಷ್ಟು ಹಣ ಇಸ್ಕೊಳದೇ ಜಾಸ್ತಿ ಹಣಕ್ಕೆ ಯಾಕೆ ಡಿಮ್ಯಾಂಡ್ ಮಾಡ್ತಿರಾ ಅಂದ್ರೆ ಈ ಹುಡುಗಿ ಜೀವ ಜನ್ಮ ಅಂತೆಲ್ಲ ಮಾತಾಡ್ತಾಳೆ. ಇವ್ರ ಮಾತಿಗೆ ಮರುಳಾಗಿಬಿಟ್ಟರೆ ನಾಮ ಗ್ಯಾರಂಟಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವರ ಹೆಸರಲ್ಲಿ ಹಣ ವಸೂಲಿ.. ₹10, ₹20 ನಡಿಯೋಲ್ಲ.. ಇವ್ರ ಡಿಮ್ಯಾಂಡ್​​ ಕೇಳಿದ್ರೆ ನೀವೂ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/03/Jogtiyamma-1.jpg

Load More