newsfirstkannada.com

ಬಾಯ್ ​ಫ್ರೆಂಡ್​​ಗೆ ದುಬಾರಿ ಗಿಫ್ಟ್​ ಕೊಡಿಸಲು ಮನೆ ಮಾಲಕಿಯನ್ನೇ ಕೊಂದ ಸುಂದರಿ.. ಸಿಕ್ಕಿಬಿದ್ದಿದ್ದೇ ರೋಚಕ!

Share :

Published May 15, 2024 at 9:20pm

Update May 15, 2024 at 9:03pm

  ಗಂಡ ಹೊರಗಡೆ ಹೋಗುತ್ತಿದ್ದಂತೆ.. ಪಾಪಿ ಮೋನಿಕಾ ಪ್ಲಾನ್ ಎಕ್ಸಿಕ್ಯೂಟ್

  ದಿವ್ಯಾ ಒಬ್ಬಳೆ ಇದ್ದಾಳೆ ಅನ್ನೋದು ಗೊತ್ತಾಯ್ತೋ ಮುಂದೆ ನಡೆದಿದ್ದೆ ಬೇರೆ

  ದಿವ್ಯಾ ಕಾಲ್ ರಿಸಿವ್ ಮಾಡದೇ ಇದ್ದಾಗ ಗಂಡ ಗುರುಮೂರ್ತಿಗೆ ಅನುಮಾನ

ಅತಿಯಾಸೆ ಗತಿಗೇಡು ಅನ್ನೋ ಮಾತಿದೆ. ಇಂಥಾ ಅತಿಯಾಸೆಯಿಂದಲೇ ಮೋನಿಕಾ ದುಷ್ಕೃತ್ಯಕ್ಕೆ ಕೈ ಹಾಕಿದ್ಳು. ಮಾಡಿದುಣ್ಣೋ ಮಾರಾಯ ಅನ್ನೋಹಾಗೆ ಮಾಡಿದ ತಪ್ಪಿಗೆ ಜೈಲು ಸೇರಿದ್ದಾಳೆ. ಆದ್ರೆ ಮನೆ ಮಾಲಕಿಯನ್ನೆ ಕೊಂದು ಈ ಮೋನಿಕಾ ಪರಾರಿಯಾಗಿದ್ದೂ ಒಂದು ರೋಚಕವಾದ್ರೆ, ಇವಳನ್ನ ಪೊಲೀಸರು ಲಾಕ್ ಮಾಡಿದ್ದು ಮತ್ತೊಂದು ಇಂಟರ್​ಸ್ಟಿಂಗ್ ಕಹಾನಿ. ಅಷ್ಟಕ್ಕೂ ಈ ರೀಲ್ಸ್ ರಾಣಿ ಮೋನಿಕಾ ಖಾಕಿ ಕೈಗೆ ತಗ್ಲಾಕೊಂಡಿದ್ದು ಹೇಗೆ ಅನ್ನೋ ಕುತೂಹಲಕಾರಿ ಡಿಟೇಲ್ಸ್ ಮಾಹಿತಿ ಇಲ್ಲಿದೆ.

ರೀಲ್ಸ್ ರಾಣಿ ಮೋನಿಕಾ.. ಈಕೆ ಮಾಡೋ ರೀಲ್ಸ್​ಗೆ ನೆಟ್ಟಗೆ ಒಂದು ನೂರು ಜನ ಕೂಡ ಫಾಲೋವ್ ಮಾಡ್ತೀಲ್ಲ.. ಇನ್​ಸ್ಟಾದಲ್ಲಿ ರೀಲ್ಸ್ ಗೀಳು ಹಚ್ಚಿಕೊಂಡಿದ್ದ ಮೋನಿಕಾಗೆ ಐಷಾರಾಮಿಯಾಗಿ ಬದುಕಬೇಕು ಅನ್ನೋ ದುರಾಸೆಯಿತ್ತು.. ಜೀವನದಲ್ಲಿ ಚೆನ್ನಾಗಿರಬೇಕು ಅಂತ ಆಸೆ ಪಡೋದು ನಿಜ.. ಹಾಗಂತ ಇನ್ನೊಬ್ಬರ ಜೀವ ತೆಗೆದು ನಾವು ಶೋಕಿ ಮಾಡೋದು ಯಾವ ನ್ಯಾಯ ಹೇಳಿ. ಈ ಮೋನಿಕಾಗೂ ಚೆನ್ನಾಗಿ ಬಟ್ಟೆ ಹಾಕೋಬೇಕು.. ಜೀವನವನ್ನ ಶ್ರೀಮಂತಿಕೆಯಿಂದ ಬದುಕಬೇಕು ಅನ್ನೋ ಅತಿಯಾಸೆ.. ಹಾಸಿಗೆ ಇದಷ್ಟು ಕಾಲು ಚಾಚೋದು ಬಿಟ್ಟು.. ಸಿಗದೇ ಇರೋ ಶ್ರೀಮಂತಿಕೆಯನ್ನ ಆಸೆ ಪಟ್ಟಿದ್ಳು. ಅದಕ್ಕೆ ಅಂತಲೇ ಸಿಕ್ಕಾಪಟ್ಟೆ ಸಾಲ ಮಾಡಿ ಶೋಕಿ ಮಾಡಿದ್ಳು. ಆದ್ರೆ ಇದೇ ಶೋಕಿಯೇ ಈಗ ಮೋನಿಕಾಳನ್ನ ಕಂಬಿ ಹಿಂದೆ ಬಂಧಿಯಾಗುವಂತೆ ಮಾಡಿದೆ.

ಹಂತಕಿ ಮೋನಿಕಾ

ಕೈ ಸಾಲ ತೀರಿಸಲು ಮನೆ ಮಾಲಕಿಯನ್ನೆ ಹತ್ಯೆ ಮಾಡಿದ ಕಿರಾತಕಿ!

ಜಸ್ಟ್ 24 ವರ್ಷ.. ಕೋಲಾರದಿಂದ ಬೆಂಗಳೂರಿಗೆ ಹೊಟ್ಟೆಪಾಡಿಗೆ ಅಂತ ಬಂದಿದ್ದ ಮೋನಿಕಾ ಕೆಂಗೇರಿಯ ಕೋನಸಂದ್ರದಲ್ಲಿರೂ ಗುರುಮೂರ್ತಿ ಅನ್ನೋರ ಮನೆಗೆ ಬಾಡಿಗೆ ಬಂದಿದ್ಳು. ಕಳೆದ 4 ತಿಂಗಳ ಹಿಂದೆ ಬಾಡಿಗೆ ಮನೆಗೆ ಬಂದಿದ್ದ ಮೋನಿಕಾ ಈ ರೀಲ್ಸ್ ಶೋಕಿಗೆ ಬಿದ್ದಿದ್ಳು. ಇನ್ನೊಂದೆಡೆ ಬೆಂಗಳೂರು ಜೀವನದ ಬಗ್ಗೆ ಹೇಳಬೇಕಾ. ಇಲ್ಲಿ ದುಡಿಯೋಕೆ ಅಂತ ಬಂದವರಿಗೆ ಇಲ್ಲಿರೋ ಜನರ ಲೈಫ್​ಸ್ಟೈಲ್ ನೋಡಿ ಅವರಿಗೂ ಹಾಗೇ ಬದುಕಬೇಕು ಅನ್ನೋ ಆಸೆ ಬರೋದು ಸಹಜ. ಹೀಗಾಗಿ ಮೋನಿಕಾ ಕೂಡ ಒಂದೊಳ್ಳೆ ರಿಚ್ಚ್ ಲೈಫ್​ನ್ನ ಲೀಡ್ ಮಾಡ್ಬೇಕು ಅಂದುಕೊಂಡಿದ್ಳು. ಆದ್ರೆ ಹಣ ಬೇಕಲ್ವಾ ಆಗ ಈಕೆ ಕಣ್ಣಿಗೆ ಬಿದ್ದಿದ್ದು ಮೋನಿಕಾಗೆ ಮನೆ ಬಾಡಿಗೆ ಕೊಟ್ಟಿದ್ದ ಗುರುಮೂರ್ತಿ ಪತ್ನಿ ದಿವ್ಯಾ.

ದಿವ್ಯಾ ಬಂಗಾರದ ಮೇಲೆ ಮೋನಿಕಾ ಕಣ್ಣು..!

ಹಣ, ಲಾಲಸೆ.. ಅತಿಯಾಸೆ ಅನ್ನೋದು ಮನುಷ್ಯನನ್ನ ರಾಕ್ಷಸನನ್ನಾಗಿ ಮಾಡುತ್ತೆ ಅಂತ.. ಇಂಥಾ ದುರಾಸೆಗೆ ಬಿದ್ದಿದ್ದ ಮೋನಿಕಾ ಕೂಡ ಬುದ್ಧಿ ಕಳೆದಕೊಂಡಿದ್ಳು. ಇದ್ರ ಮಧ್ಯೆ ಈ ಮೋನಿಕಾಗೆ ಒಬ್ಬ ಬಾಯ್​ಫ್ರೆಂಡ್ ಕೂಡ ಇದ್ದ. ಅವನಿಗೂ ಟಾಟಾ ಎಸ್ ವಾಹನ ಕೊಡಿಸೋದಕ್ಕೆ ಮೋನಿಕಾಗೆ ಹಣ ಬೇಕಾಗಿತ್ತು. ಇನ್ನೊಂದೆಡೆ ಶೋಕಿಗಾಗಿ ಮಾಡಿದ ಸಾಲ ಮೋನಿಕಾ ಕುತ್ತಿಗೆಗೆ ಬಂದಿತ್ತು. ಹೀಗಾಗಿ ಹೇಗಾದ್ರು ಮಾಡಿ ಸಾಲ ತೀರಿಸಬೇಕು ಅಂತ ಅಂದುಕೊಂಡಿದ್ದ ಮೋನಿಕಾ ಹಣಕ್ಕಾಗಿ ದುಷ್ಕೃತ್ಯಕ್ಕೆ ಕೈ ಹಾಕಿದ್ಳು. ಇಂತಾ ಟೈಮ್​ನಲ್ಲಿ ಮನೆ ಮಾಲಕಿ ದಿವ್ಯ ಮೈಮೇಲಿದ್ದ ಒಡವೆ ಮೋನಿಕಾ ಕಣ್ಣಿಗೆ ಬಿದ್ದಿದೆ. ಆ ಒಡವೆಯನ್ನ ಎಗರಿಸೋಕೆ ಪ್ಲಾನ್ ಮಾಡಿದ್ದ ಮೋನಿಕಾ ದಿವ್ಯಾಳ ಉಸಿರನ್ನೆ ನಿಲ್ಲಿಸಿ ಬಿಟ್ಟಿದ್ದಾಳೆ.

ದಿವ್ಯಾ ಬಂಗಾರದ ಮೇಲೆ ಕಣ್ಣು ಹಾಕಿದ್ದ ಮೋನಿಕಾ ಆಕೆ ಹತ್ಯೆ ಮಾಡೋದಕ್ಕೆ ಅಂತ ಮೇ 10ರಂದು ಮುಹೂರ್ತ ಫಿಕ್ಸ್ ಮಾಡಿದ್ಳು. ಪ್ಲಾನ್ ಪ್ರಕಾರ ಮೋನಿಕಾ ಮನೆ ಓನರ್ ಗುರುಮೂರ್ತಿ ಎಂದಿನಂತೆ ಕೆಲಸಕ್ಕೆ ಅಂತ ಆಚೆ ಹೋಗಿದ್ದಾರೆ. ಅತ್ತ ದಿವ್ಯಾ ಅತ್ತೆ, ಮಾವ ಕೂಡ ಕೆಲಸಕ್ಕೆ ಹೊರಗಡೆ ಹೋಗಿದ್ದಾರೆ. ಈ ವೇಳೆ ದಿವ್ಯಾ ಮತ್ತು ಆಕೆ ಮಗು ಇಬ್ಬರು ಮನೆಯಲ್ಲಿದ್ರು. ಇತ್ತ ಕಿರಾತಕಿ ಮೋನಿಕಾ ಇದೇ ಸಮಯಕ್ಕಾಗಿ ಹೊಂಚು ಹಾಕಿ ಸಂಚು ಮಾಡಿದ್ಳು. ಅದ್ಯಾವಾಗ ದಿವ್ಯಾ ಒಬ್ಬಳೆ ಇದ್ದಾಳೆ ಅನ್ನೋದು ಮೋನಿಕಾಗೆ ಗೊತ್ತಾಯ್ತೋ ಮುಂದೆ ನಡೆದಿದ್ದು ಯಾರೂ ಊಹಿಸಲಾಗದ ಘನಘೋರ ದುರಂತ.

ಗುರುಮೂರ್ತಿ ಮನೆಯಿಂದ ಹೊರಗಡೆ ಹೋಗ್ತಿದ್ದಂತೆ.. ಪಾಪಿ ಮೋನಿಕಾ ಪ್ಲಾನ್ ಎಕ್ಸಿಕ್ಯೂಟ್ ಮಾಡಿದ್ದಾಳೆ. ದಿವ್ಯಾ ಒಂಟಿಯಾಗಿರೋದನ್ನ ಗಮನಿಸಿ ಆಕೆ ಹಿಂದಿನಿಂದ ಬಂದು ಕುತ್ತಿಗೆಯನ್ನ ಬಿಗಿದು ದಿವ್ಯಾ ಉಸಿರು ನಿಲ್ಲಿಸಿದ್ದಾಳೆ. ತನ್ನ ಶೋಕಿಗಾಗಿ ಅಮಾಯಕಳೊಬ್ಬಳ ಜೀವವನ್ನ ಬಲಿ ಪಡೆದು ಬಿಟ್ಟಿದ್ದಾಳೆ.

ಕೊಲೆಯಾದ ಮಹಿಳೆ

10-12 ಬಾರಿ ಫೋನ್ ಮಾಡಿದ್ದ ಗಂಡ

ದಿವ್ಯಾ ಉಸಿರು ನಿಂತಿರೋದನ್ನ ಕನ್ಫರ್ಮ ಮಾಡಿಕೊಂಡ ಬಳಿಕ ಮೋನಿಕ ದಿವ್ಯಾ ಮೈಮೇಲಿದ್ದ ಒಂದಲ್ಲ ಎರಡಲ್ಲ ಬರೋಬ್ಬರಿ 36 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿಬಿಟ್ಟಿರ್ತಾಳೆ. ಆದ್ರೆ ಇತ್ತ ದಿವ್ಯಾ ಗಂಡ 10-12 ಬಾರಿ ಫೋನ್ ಮಾಡಿರ್ತಾರೆ. ಅಷ್ಟೊಂದು ಫೋನ್ ಮಾಡ್ದಾಗ ದಿವ್ಯಾ ಕಾಲ್ ರಿಸಿವ್ ಮಾಡ್ದೇ ಇದ್ದಾಗ ಗುರುಮೂರ್ತಿಗೆ ಅನುಮಾನ ಬಂದಿದೆ. ಏನೋ ಆಗಿರಬಹುದು ಅನ್ನೋ ಆತಂಕದಲ್ಲೇ ಗುರುಮೂರ್ತಿ ಮನೆಗೆ ಓಡಿ ಬಂದಿದ್ದಾರೆ.ಮನೆಗೆ ಬಂದು ನೋಡ್ದಾಗ ಪತ್ನಿ ಸಾವನ್ನಪ್ಪಿರೋದು ಗೊತ್ತಾಗಿದೆ.

ನೋಡೋಕೆ ಚಿನಕುರಳಿ, ಈಕೆ ಮೈಂಡ್ ಮಾತ್ರ ಪಕ್ಕಾ ಕ್ರಿಮಿನಲ್

ನೋಡೋಕೆ ಚಿನಕುರಳಿ ಇದ್ರೂ ಈಕೆ ಮೈಂಡ್ ಮಾತ್ರ ಪಕ್ಕಾ ಕ್ರಿಮಿನಲ್ ತರಹ ಕೆಲಸ ಮಾಡಿತ್ತು.. ಮನೆ ಮಾಲಕಿ ದಿವ್ಯಾಳನ್ನ ಕೊಲೆ ಮಾಡಿದ್ದ ಬಳಿಕ ಆಕೆ ಮೈಮೇಲಿದ್ದ ಒಡವೆಯನ್ನ ಕದ್ದು ಅಲ್ಲಿಂದ ಪರಾರಿಯಾಗಿದ್ಳು. ಆದ್ರೆ ಮನೆಗೆ ಬಂದ ಗುರುಮೂರ್ತಿ ಮೋನಿಕಾಗೆ ಕಾಲ್ ಮಾಡಿ ಕೇಳ್ದಾಗ ತನಗೇನು ಗೊತ್ತೆ ಇಲ್ಲ ಅಂತ ನಾಟಕವಾಡಿದ್ದಾಳೆ. ಈ ವೇಳೆ ಸಾವನ್ನಪ್ಪಿದ್ದ ದಿವ್ಯಾ ಕುತ್ತಿಗೆಯ ಮೇಲೆ ಗಾಯದ ಗುರುತು ಇರೋದು ಗುರುಮೂರ್ತಿ ಕಣ್ಣಿಗೆ ಬಿದ್ದಿದೆ. ಆಗ್ಲೇ ನೋಡಿ ಈ ಕಿರಾತಕಿ ಮೋನಿಕಾಳ ಖತರ್ನಾಕ್ ಕೆಲಸ ಗೊತ್ತಾಗಿದ್ದು.

ಒಡವೆ ಅಂಗಡಿಯಿಂದ ಸಿಕ್ತು ಹಂತಕಿಯ ಸುಳಿವು!

ದಿವ್ಯಾಳನ್ನ ಹತ್ಯೆ ಮಾಡಿ ಪರಾರಿಯಾಗಿದ್ದ ಮೋನಿಕಾ ಇದೇ ಕೆಂಗೇರಿಯ ಒಡವೆ ಅಂಗಡಿಯೊಂದ್ರಲ್ಲಿ ಕದ್ದಿದ್ದ ಆಭರಣವನ್ನ ಮಾರಿ ಬಂದ ಹಣವನ್ನು ಪ್ರಿಯಕರನಿಗೆ ಕೊಟ್ಟಿದ್ಳು. ಆಮೇಲೆ ಏನೂ ಗೊತ್ತಿಲ್ದೇ ಇರೋರ ತರಹ ಮೋನಿಕಾ ವಾಪಸ್ ಮನೆಗೆ ಬಂದಿದ್ಳು. ಆಗ ಪೊಲೀಸರು ಬಂದು ಕೇಳ್ದಾಗಲೂ ಈ ಮೋನಿಕಾ ನಂದು 60 ಸಾವಿರ ಹಣ ಕಳ್ಳತನವಾಗಿದೆ ಎಂದಿದ್ದಾಳೆ. ಆದ್ರೆ ಗುರುಮೂರ್ತಿಗೆ ಕೇಳ್ದಾಗ ಕಳೆದ ತಿಂಗಳ ಬಾಡಿಗೆ ಸಹಿತ ಕೊಟ್ಟಿಲ್ಲ ಎಲ್ಲಿಂದ ಹಣ ಕಳ್ಳತನವಾಗುತ್ತೆ ಎಂದಿದ್ದಾರೆ. ಪೊಲೀಸರು ಮೋನಿಕಾಳನ್ನ ಪೊಲೀಸ್ ಸ್ಟೈಲ್​ನಲ್ಲಿ ವಿಚಾರಣೆ ಮಾಡ್ದಾಗ ಕೊಲೆ ಸತ್ಯವನ್ನ ಬಾಯ್​ಬಿಟ್ಟಿದ್ದಾಳೆ.

ಪೊಲೀಸರು ಕಸ್ಟಡಿಗೆ ಪಡೆದು ವಿಚಾರಿಸಿದಾಗ ಹಣದ ಆಸೆಗಾಗಿ ಕತ್ತು ಹಿಸುಕಿ ಕೊಂದಿರೋ ವಿಚಾರವನ್ನ ಮೋನಿಕಾ ಹೇಳಿದ್ದಾಳೆ. ಅತಿಯಾಸೆ ಗತಿಗೇಡು ಅನ್ನೋ ಹಾಗೆ ಶೋಕಿ ಜೀವನದ ಆಸೆಗೆ ಬಿದ್ದ ಹುಡುಗಿ ಈಗ ಮಾಡಿದ ತಪ್ಪಿಗೆ ಪಶ್ಚತ್ತಾಪದ ಕಣ್ಣೀರು ಸುರಿಸ್ತಿದ್ದಾಳೆ. ತಪ್ಪು ದಾರಿ ಹಿಡಿಯೋ ಮುನ್ನವೇ ಒಳ್ಳೆ ಆಲೋಚನೆ ಮಾಡಿದ್ರೆ ಇವತ್ತು ಮೋನಿಕಾಗೆ ಈ ಪರಿಸ್ಥಿತಿ ಬರ್ತಿರಲಿಲ್ಲ. ಮಾಡಿದುಣ್ಣೋ ಮಾರಾಯ ಅನ್ನೋದಕ್ಕೆ ಮೋನಿಕಾ ಪ್ರಕರಣ ಬೆಸ್ಟ್ ಎಕ್ಸಾಂಪಲ್.

ಮೋನಿಕಾ ತಪ್ಪು ದಾರಿ ಹಿಡ್ದಾಗ ಆಕೆ ಪ್ರಿಯಕರನಾದ್ರೂ ಒಳ್ಳೆ ಬುದ್ಧಿ ಹೇಳಬಹುದಿತ್ತು. ಅತಿಯಾಸೆಯಲ್ಲಿ ಮೋನಿಕಾ ಬುದ್ಧಿಗೆ ಮಂಕು ಬಡಿದಿತ್ತು. ಹಣದ ಆಸೆಗೆ ಅಮಾಯಕಳ ಜೀವ ತೆಗೆದು ಈಗ ಜೈಲು ಸೇರಿದ್ದಾಳೆ. ಆದ್ರೆ ಹೆಂಡತಿಯನ್ನ ಕಳೆದುಕೊಂಡ ಗಂಡ, ತಾಯಿಯನ್ನ ಕಳೆದುಕೊಂಡ ಆ ಮಗುವಿನ ನೋವು ಮಾತ್ರ ಹೇಳಿತೀರದ್ದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಯ್ ​ಫ್ರೆಂಡ್​​ಗೆ ದುಬಾರಿ ಗಿಫ್ಟ್​ ಕೊಡಿಸಲು ಮನೆ ಮಾಲಕಿಯನ್ನೇ ಕೊಂದ ಸುಂದರಿ.. ಸಿಕ್ಕಿಬಿದ್ದಿದ್ದೇ ರೋಚಕ!

https://newsfirstlive.com/wp-content/uploads/2024/05/BNG_MURDER_MONIKA_3.jpg

Load More