ಕೆ.ಜಿ ಹಳ್ಳಿ ಗಲಭೆ ಪ್ರಕರಣ: ಮೂವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ NIA ವಿಶೇಷ ನ್ಯಾಯಾಲಯ

author-image
Bheemappa
Updated On
ಕೆ.ಜಿ ಹಳ್ಳಿ ಗಲಭೆ ಪ್ರಕರಣ: ಮೂವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ NIA ವಿಶೇಷ ನ್ಯಾಯಾಲಯ
Advertisment
  • ವಿಶೇಷ ನ್ಯಾಯಾಲಯ ಆರೋಪಿಗಳಿಗೆ ಎಷ್ಟು ದಂಡ ವಿಧಿಸಿದೆ?
  • ಪ್ರಚೋದನಕಾರಿ ಫೇಸ್‌ಬುಕ್ ಪೋಸ್ಟ್ ನಂತರ ಹಿಂಸಾಚಾರ
  • ಕೆಲವು ಆರೋಪಿಗಳು 2021ರ ಸೆಪ್ಟೆಂಬರ್​ನಲ್ಲಿ ಶರಣಾಗಿದ್ದರು

ಬೆಂಗಳೂರು: 2020 ರ ಬೆಂಗಳೂರು ಗಲಭೆ ಪ್ರಕರಣದ ಪ್ರಮುಖ ಬೆಳವಣಿಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​​ಐಎ) ವಿಶೇಷ ನ್ಯಾಯಾಲಯವು ಮೂವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 36 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದು ರಾಷ್ಟ್ರೀಯ ತನಿಖಾ ಸಂಸ್ಥೆಯ ಗೆಲುವಾಗಿದೆ.

ಅಪರಾಧಿಗಳಾದ ಸೈಯದ್ ಆಸಿಫ್ (46), ಸೈಯದ್ ಇಕ್ರಮುದ್ದೀನ್ ಅಲಿಯಾಸ್ ಸೈಯದ್ ನವೀದ್ (44) ಮತ್ತು ಮೊಹಮ್ಮದ್ ಅತಿಫ್ (26) ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ಗಳು, ಕರ್ನಾಟಕ ಆಸ್ತಿ ವಿನಾಶ ಮತ್ತು ನಷ್ಟ ತಡೆ ಕಾಯ್ದೆ (ಕೆಪಿಡಿಎಲ್​​ಪಿ) ಮತ್ತು ಕಾನೂನುಬಾಹಿರ ಚಟುವಟಿಕೆಗಳು ಹಾಗೂ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಇವರ ಮೇಲೆ ಇತ್ತು.

ಇದನ್ನೂ ಓದಿ: ಭೀಮನ ಅಮಾವಾಸ್ಯೆ ದಿನವೇ ಗಂಡ- ಹೆಂಡತಿ ಗಲಾಟೆ.. ಮಗಳ ಜೀವ ತೆಗೆದ ತಾಯಿ

publive-image

ಕೊರೊನಾ ದಿನಗಳಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ 2020 ಆಗಸ್ಟ್ 11 ರಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣೆ, ಮನೆಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾತ್ಮಕ ಗುಂಪು ದಾಳಿಗೆ ಸಂಬಂಧಿಸಿದೆ. ಶಾಸಕರ ಸೋದರಳಿಯ ಮಾಡಿದ ಪ್ರಚೋದನಕಾರಿ ಫೇಸ್‌ಬುಕ್ ಪೋಸ್ಟ್ ನಂತರ ಹಿಂಸಾಚಾರ ನಡೆದಿತ್ತು. ಗಲಭೆಯಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಮೂವರು ಜೀವ ಕಳೆದುಕೊಂಡಿದ್ದರು.

ಎ4 ಆರೋಪಿ ಹಬೀಬ್​ ಉರ್ ರಹಮಾನ್, ಎ5 ಪೀರ್ ಪಾಷ, ಜಿಯಾ ಉರ್ ಉರ್ ರಹಮಾನ್, ಇಮ್ರಾನ್ ಅಹಮದ್ 2021ರ ಸೆಪ್ಟೆಂಬರ್​ನಲ್ಲಿ ಪೊಲೀಸರಿಗೆ ಸೆರೆಂಡರ್ ಆಗಿದ್ದರು. ಉಳಿದ 135 ಆರೋಪಿಗಳ ವಿರುದ್ಧ ವಿಚಾರಣೆಯನ್ನು ಮುಂದೂಡಲಾಗಿದೆ.

ನಿಷೇಧಿತ ಪಿಎಫ್‌ಐ, ಎಸ್‌ಡಿಪಿಐ ನಡುವೆ ಸಂಪರ್ಕ

ಎನ್‌ಐಎ ಈ ಹಿಂದೆ ಆರೋಪಿಗಳು ಮತ್ತು ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ರಾಜಕೀಯ ವಿಭಾಗ ಎಸ್‌ಡಿಪಿಐ ನಡುವೆ ಸಂಪರ್ಕ ಪತ್ತೆ ಹಚ್ಚಿತ್ತು. ಕೋಮು ಗಲಭೆ ಪ್ರಚೋದಿಸಲು ಮತ್ತು ರಾಜ್ಯ ಯಂತ್ರೋಪಕರಣಗಳ ಮೇಲೆ ದಾಳಿ ಮಾಡಲು ಪಿಎಫ್‌ಐ ಸದಸ್ಯರು ಹಿಂಸಾಚಾರವನ್ನು ಹೇಗೆ ಸಂಘಟಿಸಿದರು ಎಂಬುದನ್ನು ಎನ್‌ಐಎ ಸಂಸ್ಥೆ ವಿವರಿಸಿತ್ತು. 2022 ರಲ್ಲಿ ಪಿಎಫ್‌ಐ ಅನ್ನು ನಿಷೇಧಿಸುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರದಲ್ಲಿ ಈ ತನಿಖೆ ಪ್ರಮುಖ ಪಾತ್ರ ವಹಿಸಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment