newsfirstkannada.com

ಕೋಟ್ಯಾಂತರ ರೂಪಾಯಿ ಆಸ್ತಿ.. ವೃದ್ಧೆಯನ್ನು ಕೊಂದು 6 ಪೀಸ್​ ಮಾಡಿ ಎಸೆದ ಹಂತಕ ಶ್ವಾನದ ಕೈಗೆ ಸಿಕ್ಕಿಬಿದ್ದ!  

Share :

Published February 25, 2024 at 10:47pm

Update February 25, 2024 at 10:48pm

    ಬೆಂಗಳೂರಲ್ಲೊಂದು ಭೀಕರ ಹತ್ಯೆ ಪ್ರಕರಣ

    ವೃದ್ಧೆಯನ್ನು ಕೊಂದು ಆರು ಪೀಸ್​ ಮಾಡಿದ ಹಂತಕ

    ಸಿಸಿಟಿವಿಯಲ್ಲಿ ಸೆರೆಯಾಯ್ತು ಕೊಲೆಗಾರ ಚಿತ್ರಣ

ವೃದ್ದೆಯ ದೇಹವನ್ನ ಆರು ಭಾಗವಾಗಿ ಪೀಸ್ ಪೀಸ್ ಮಾಡಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಿಸರ್ಗ ಬಡಾವಣೆ ಬಳಿ ಬೆಳಕಿಗೆ ಬಂದಿದೆ. ವೃದ್ದೆ ಸುಶೀಲಮ್ಮ ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಸುಶೀಲಮ್ಮನನ್ನು ಹಂತಕ ಭೀಕರವಾಗಿ ಕೊಲೆಗೈದಿದ್ದಾನೆ. ಆರು ಭಾಗವಾಗಿ ಭೀಕರವಾಗಿ ಕತ್ತರಿಸಿ ಸಣ್ಣ ಡ್ರಮ್ ನಲ್ಲಿ ಇಟ್ಟು ತೆರಳಿದ್ದಾನೆ. ಸದ್ಯ ವೃದ್ದೆಯ ಮೃತದೇಹ ಪತ್ತೆಯಾದ್ರು ಕೈ ಕಾಲು ಸಿಕ್ಕಿಲ್ಲ.

ಹಂತಕರು ನಿನ್ನೆ ತಡರಾತ್ರಿ ವೃದ್ದೆಯ ಮೃತದೇಹವನ್ನ ಆಕೆಯ ಮನೆ ಮುಂಭಾಗದ ಗಲ್ಲಿಯಲ್ಲಿ ಇಟ್ಟು ಹೋಗಿದ್ದಾನೆ. ನಿಸರ್ಗ ಬಡಾವಣೆಯ ಪಾಳು ಬಿದ್ದ ಮನೆ ಪಕ್ಕದ ಗಲ್ಲಿಯಲ್ಲಿ ಇಟ್ಟು ಹಂತಕರು ತೆರಳಿದ್ದಾನೆ. ಸ್ಥಳೀಯರು ಕಸಹಾಕುವ ಜಾಗದಲ್ಲಿ ಮೃತದೇಹವನ್ನ ಡ್ರಮ್ ನಲ್ಲಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ ವೃದ್ದೆಯ ನಾಪತ್ತೆಯಾಗಿರುವ ಉಳಿದ ದೇಹದ ಭಾಗಕ್ಕಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

ಓರ್ವ ಪೊಲಿಸ್​ ವಶಕ್ಕೆ

ಕೊಲೆ ಸಂಬಂಧ ಪೊಲೀಸರು ಓರ್ವನನ್ನ ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ಸ್ಥಳದ ಕೂದಲೆಳೆ ದೂರದಲ್ಲೆ ವಾಸವಿರೋ ವ್ಯಕ್ತಿಯನ್ನ ಕೆ.ಆರ್ ಪುರಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಯ ಸುಳಿವು ಕೊಟ್ಟ ಶ್ವಾನ

ಪೊಲೀಸರು ಕೊಲೆಯಾದ ಸ್ಥಳಕ್ಕೆ ಡಾಗ್ ಸ್ಕ್ವಾಡ್ ಕರೆಸಿದ್ದಾರೆ. ಈ ವೇಳೆ ರಕ್ತದ ಕಲೆ ಆಧರಿಸಿ ಸ್ಥಳೀಯ ಮನೆಯೊಂದಕ್ಕೆ ಶ್ವಾನ ಪೊಲೀಸರನ್ನ ಕರೆದೊಯ್ದಿದೆ. ಈ ಹಿನ್ನಲೆ ಓರ್ವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ವಶಕ್ಕೆ ಪಡೆದಿರೋ ವ್ಯಕ್ತಿ ಮೃತ ಸುಶೀಲಮ್ಮ ಕುಟುಂಬಕ್ಕೆ ಚಿರಪರಿಚಿತ ಹಾಗೂ ಅತ್ಯಾಪ್ತ ಎಂದು ತಿಳಿದುಬಂದಿದೆ.

ಕೆ.ಆರ್ ಪುರಂ ಪೊಲೀಸರು ವಶದಲ್ಲಿರುವ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಆತ ಈ ಹಿಂದೆ ಉನ್ನತ ಹುದ್ದೆಯಲ್ಲಿದ್ದು ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದನು. ಸದ್ಯ ಸ್ಥಳೀಯವಾಗಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದನು. ಸದ್ಯ ಪೊಲೀಸರಿಗೆ ಈತನ ಮೇಲೆ ಅನುಮಾನವಿದ್ದು, ಇವನೇ ಹಂತಕನಾ? ಅಥವಾ ಹಂತಕನಿಗೆ ಸಹಾಯ ಮಾಡಿದ್ನಾ ವಿಚಾರಣೆ ನಡೆಸುತ್ತಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಹಂತಕನ ಸಂಪೂರ್ಣ ಚಿತ್ರಣ

ಸುಶೀಲಮ್ಮನನ್ನು ಕೊಲೆಗೈದ ನಂತರ ಮೃತದೇಹವನ್ನ ಬಿಸಾಡಲು ಹಂತಕ ಪರದಾಡಿದ್ದಾನೆ. ಅದಕ್ಕಾಗಿ ಖರ್ತನಾಕ್ ಪ್ಲಾನ್ ಮಾಡಿದ್ದನು. ಮೊದಲು ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಸಣ್ಣದಾದ ಡ್ರಮ್ ನಲ್ಲಿ ಕಸ ತುಂಬುವ ರೀತಿ ಮೃತದೇಹವನ್ನ ಕವರ್ ನಲ್ಲಿ ಹಾಕಿದ್ದಾನೆ. ಬಳಿಕ ಕೆ.ಆರ್.ಪುರಂ ಬಳಿಯ ಕೆರೆಗೆ ಮೃತದೇಹ ಹಾಕಲು ಹಂತಕ ಪ್ಲಾನ್ ಮಾಡಿದ್ದಾನೆ. ಆದರೆ ಇಡೀ ರಾತ್ರಿ ಏನು ಮಾಡಬೇಕೆಂದು ಗೊತ್ತಾಗತ್ತೆ ಮನೆ ಒಳಗೆ ಹೊರಗಿನ ರಸ್ತೆಗೆ ಬಂದು ಓಡಾಡಿದ್ದಾನೆ. ಜನರ ಒಡಾಟದ ಬಗ್ಗೆ ಗಮನಿಸಿದ್ದಾನೆ. ಬಳಿಕ ತಡರಾತ್ರಿ ಮೃತದೇಹವನ್ನ ನಿಸರ್ಗ ಬಡಾವಣೆಯ ಪಾಳುಬಿದ್ದಿರೋ ಮನೆಬಳಿ ಇಟ್ಟಿದ್ದಾನೆ. ಮೃತದೇಹ ಹೊರಗೆ ತರುವ ಮುನ್ನಾ ರಸ್ತೆಯಲ್ಲಿನ ಬೀದಿ ದೀಪವನ್ನ ಆರಿಸಿದ್ದಾನೆ.

ಆಸ್ತಿ ವಿಚಾರಕ್ಕಾಗಿ ನಡೀತಾ ವೃದ್ದೆ ಕೊಲೆ..!?

ಕೊಲೆಯಾದ ವೃದ್ದೆ ಸುಶೀಲಮ್ಮ ಹೆಸರಲ್ಲಿದೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಇದ್ದು, ಉತ್ತರಹಳ್ಳಿ ಹಾಗೂ ಯಲಹಂಕದಲ್ಲಿ ವೃದ್ದೆ ಸುಶೀಲಮ್ಮ ಹೆಸರಲ್ಲಿ ಪ್ರಾಪರ್ಟಿ ಇದೆ. ಕೆಲ ಆಸ್ತಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೋರ್ಟ್‌ ನಲ್ಲಿ ವ್ಯಾಜ್ಯ ಇತ್ಯರ್ಥವಾಗಿತ್ತು. ಸದ್ಯದಲ್ಲೆ ದೊಡ್ಡದಾದ ಅಮೌಂಟ್ ಬರಲಿದೆ ಎಂದು ಸ್ಥಳೀಯರು ಹಾಗೂ ಪರಿಚಿತರ ಬಳಿ ಮೃತ ವೃದ್ದೆ ಹೇಳಿದ್ದಳಂತೆ.

ಇನ್ನು ವೃದ್ದೆ ಸುಶೀಲಮ್ಮ ಕೋಟಿಗಟ್ಟಲೆ ಆಸ್ತಿಯಿದ್ರು ಮಕ್ಕಳಿಂದ ದೂರವಿದ್ದಳು. ನಿಸರ್ಗ ಬಡಾವಣೆಯಲ್ಲೇ‌ ಮೃತ ಸುಶೀಲಮ್ಮರ ಮಗ ಹಾಗೂ ಮಗಳು ಪ್ರತ್ಯೇಕವಾಗಿ ವಾಸವಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟ್ಯಾಂತರ ರೂಪಾಯಿ ಆಸ್ತಿ.. ವೃದ್ಧೆಯನ್ನು ಕೊಂದು 6 ಪೀಸ್​ ಮಾಡಿ ಎಸೆದ ಹಂತಕ ಶ್ವಾನದ ಕೈಗೆ ಸಿಕ್ಕಿಬಿದ್ದ!  

https://newsfirstlive.com/wp-content/uploads/2024/02/Murder.jpg

Load More