/newsfirstlive-kannada/media/post_attachments/wp-content/uploads/2024/04/Scooter.jpg)
ಬೆಂಗಳೂರು: ಯಾರ ಕೈಯಲ್ಲೂ ತಪ್ಪಿಸಿದ್ರೂ ಸಂಚಾರಿ ಪೊಲೀಸರ ಕೈಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಯಾಕಂದ್ರೆ ಇಲ್ಲೊಬ್ಬಳು ಕಿಲಾಡಿ ಲೇಡಿ ಒಂದಲಲ್ಲಾ, ಎರಡಲ್ಲಾ, ಬರೋಬ್ಬರಿ 270 ಬಾರಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದ್ದಾಳೆ. ಆ ಮೂಲಕ ಯುವಕರಿಗೆ ಸೆಡ್ಡುವಂತೆ ಮಾಡಿದ್ದಾಳೆ.
ಅಚ್ಚರಿ ಸಂಗತಿ ಎಂದರೆ ಈ ಕಿಲಾಡಿ ಲೇಡಿಯ ಸ್ಕೂಟರ್​​ ಬೆಲೆ 25 ಸಾವಿರ ರೂಪಾಯಿ. ಆದರೆ ಆಕೆ ಕಟ್ಟಬೇಕಾದ ದಂಡ ₹1,36,000 ಲಕ್ಷ ರೂಪಾಯಿ. ಸಿಗ್ನಲ್ ಜಂಪ್, ಒನ್ ವೇಗಳಲ್ಲಿ ನುಗ್ಗಿ ಇತರರಿಗೆ ತೊಂದರೆ ನೀಡುವ ಈ ಲೇಡಿ ಈಗ ಸಂಚಾರಿ ಪೊಲೀಸರ ಕಣ್ಣಿಗೆ ಕೊನೆಗೂ ಸೆರೆಸಿಕ್ಕಿದ್ದಾಳೆ.
/newsfirstlive-kannada/media/post_attachments/wp-content/uploads/2024/04/Traffic-lady-1.jpg)
ಇದನ್ನೂ ಓದಿ: ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ಟ್ರ್ಯಾಕ್ಟರ್​​ಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ.. ರೈತ ಸ್ಥಳದಲ್ಲೇ ಸಾವು
ಸದಾ ರೂಲ್ಸ್​ ಬ್ರೇಕ್​ ಮಾಡಿ ಸಂಚಾರಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಮಹಿಳೆ ಸುಧಾಮನಗರದಲ್ಲಿ ಕಾಣಿಸಿಕೊಂಡಿದ್ದಾಳೆ. ಕೂಡಲೇ ಆಕೆಯ ವಾಹನದ ಫೋಟೋವನ್ನ ಪೊಲೀಸರು Xನಲ್ಲಿ ಹಂಚಿಕೊಂಡಿದ್ದಲ್ಲದೆ, ಟ್ಯಾಗ್​ ಮಾಡಿದ್ದಾರೆ. ಜೊತೆಗೆ ದಂಡ ವಸೂಲಿಗೆ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us