/newsfirstlive-kannada/media/post_attachments/wp-content/uploads/2024/10/Bengaluru-2.jpg)
ಬೆಂಗಳೂರಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂತಹದರಲ್ಲಿ ಕನ್ನಡ ಎಂದರೆ ಎನ್ನಡಾ ಎಂದು ಹೇಳುವವರೇ ಜಾಸ್ತಿ. ಕನ್ನಡ ಗೊತ್ತಿದ್ದರೂ ಮಾತನಾಡದ ಮಂದಿ ಒಂದೆಡೆಯಾದರೆ, ಬೇರೆ ಊರಿನಿಂದ ಬದುಕು ಕಟ್ಟಲು ಬೆಂಗಳೂರಿಗೆ ಬಂದವರು ಇಲ್ಲಿದ್ದಾರೆ. ಹೀಗಿರುವಾಗ ಬದುಕಿನ ಬಂಡಿ ಸಾಗಿಸುವ ಆಟೋ ಚಾಲಕನೊಬ್ಬ ಕನ್ನಡ ಪ್ರೇಮವನ್ನು ಎತ್ತಿ ಹಿಡಿದಿದ್ದಾನೆ. ತನ್ನ ಆಟೋದಲ್ಲಿ ಪ್ರಯಾಣಿಸುವವರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿದ್ದಾನೆ.
ಆಟೋ ಕನ್ನಡಿಗ
ಬೆಂಗಳೂರು ರಸ್ತೆಯಲ್ಲಿ ಪ್ರಯಾಣಿಕರ ಸೇವೆ ಮಾಡುವ ಈ ಚಾಲಕ ‘ಆಟೋ ಕನ್ನಡಿಗ’ ಹೆಸರಿನಲ್ಲಿ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿದ್ದಾನೆ. ‘ಆಟೋ ಕನ್ನಡಿಗನೊಂದಿಗೆ ಕನ್ನಡ ಕಲಿಯಿರಿ’ ಎಂದು ರಿಕ್ಷಾದಲ್ಲಿ ಬೋರ್ಡ್ ಹಾಕಿದ್ದಾನೆ. ಅದರ ಮೂಲಕ ಪ್ರಯಾಣಿಕರು ಆಟೋ ಚಾಲಕನೊಂದಿಗೆ ಸುಲಭವಾಗಿ ಕನ್ನಡದಲ್ಲಿ ಮಾತನಾಡುವ ಉದ್ದೇಶವನ್ನಿಟ್ಟುಕೊಂಡಿದ್ದಾನೆ.
ಪ್ರಯಾಣಿಕರು ಆಟೋ ಕನ್ನಡಿಗನೊಂದಿಗೆ ಕನ್ನಡದಲ್ಲೇ ಸಂವಹನ ನಡೆಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಆಟೋದಲ್ಲಿ ನೇತು ಹಾಕಿರುವ ಬೋರ್ಡ್ನಲ್ಲಿ ಇಂಗ್ಲೀಷ್ ವಾಕ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಆಟೋ ಪ್ರಯಾಣದ ವೇಳೆ ಸುಲಭವಾಗಿ ಕನ್ನಡ ಮಾತನಾಡಲು ಮತ್ತು ವ್ಯವಹರಿಸಲು ತರ್ಜುಮೆ ಮಾಡಿದ ವಾಕ್ಯವನ್ನು ಸಹಾಯಕ್ಕೆ ಬರುತ್ತದೆ. ಪ್ರಯಾಣಿಕರು ಈ ವಾಕ್ಯಗಳನ್ನು ಬಳಸುವ ಮೂಲಕ ರಿಕ್ಷಾ ಚಾಲಕನೊಂದಿಗೆ ಕನ್ನಡದಲ್ಲಿ ಮಾತನಾಡುವ ಉದ್ದೇಶವನ್ನು ಆಟೋ ಕನ್ನಡಿಗ ಹೊಂದಿದ್ದಾನೆ.
ಇದನ್ನೂ ಓದಿ: ಹೋಂಡಾ ಪರಿಚಯಿಸಿದೆ CB300F; ಜಾಸ್ತಿ ಪೆಟ್ರೋಲ್ ಬಳಸದೆಯೇ ಓಡುತ್ತೆ ಈ ಬೈಕ್!
ಎಕ್ಸ್ ಬಳಕೆದಾರರೊಬ್ಬರು ಆಟೋದಲ್ಲಿ ಕಂಡು ಬಂದ ‘ಆಟೋ ಕನ್ನಡಿಗ’ನ ಕನ್ನಡ ಪ್ರೇಮದ ಕುರಿತು ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅನೇಕರು ಈ ಕುರಿತಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬರು ‘ಇದು ಕನ್ನಡವನ್ನು ಕಲಿಯಲು ವೇಗವಾದ, ಸುಲಭವ ಮಾರ್ಗವಾಗಿದೆ ಎಂದು ಕಾಣುತ್ತದೆ’ ಎಂದಿದ್ದಾರೆ.
very handy pic.twitter.com/RqC6lTpwuq
— Vatsalya (@vatsalyatandon)
very handy pic.twitter.com/RqC6lTpwuq
— Vatsalya (@vatsalyatandon) October 21, 2024
">October 21, 2024
ಇದನ್ನೂ ಓದಿ: ಮೋದಿ, ರಷ್ಯಾ ಪ್ರವಾಸಕ್ಕು ಮುನ್ನ ಮಹತ್ವದ ಬೆಳವಣಿಗೆ; ಗಡಿಯಲ್ಲಿ ಸೇನೆ ಹಿಂತೆಗೆತಕ್ಕೆ ಭಾರತ-ಚೀನಾ ಒಪ್ಪಿಗೆ
ಮತ್ತೊಬ್ಬರು ‘ಪ್ರತಿಭೆ’ ಎಂದು ಕಾಮೆಂಟ್ ಬರೆದಿದ್ದಾರೆ. ಮಗದೊಬ್ಬರು ‘ನಮಸ್ಕಾರ ಸಾರ್’ ಎಂದು ಬರೆದಿದ್ದಾರೆ. ಇನ್ನು ಕೆಲವರು ‘ಎಲ್ಲಿ ಇದ್ದೀರಾ?’, ‘ಯುಪಿಐ ಇದೆಯಾ ಅಥವಾ ಖ್ಯಾಶ್ ಆ?’ ಎಂದು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಟೋ ಚಾಲಕನ ಕನ್ನಡ ಪ್ರೇಮ ಮುನ್ನೆಲೆಗೆ ಬಂದಿದೆ. ಯಾವುದೋ ಊರಿನಿಂದ ಬಂದವರಿಗೆ ಕನ್ನಡ ಕಲಿಸುವ ಈ ‘ಆಟೋ ಕನ್ನಡಿಗ’ ಮಹಾತ್ಕಾರ್ಯಕ್ಕೆ ಭೇಶ್ ಎನ್ನಲೇಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ