ಹೆಣ್ಮಕ್ಕಳೇ ಹುಷಾರ್, ಬೆಂಗಳೂರಲ್ಲಿ ಇಂಥವರೂ ಇರುತ್ತಾರೆ ಎಚ್ಚರ..! ಅಸಲಿಗೆ ಈತ ಮಾಡಿದ್ದೇನು..?

author-image
Ganesh
Updated On
ಹೆಣ್ಮಕ್ಕಳೇ ಹುಷಾರ್, ಬೆಂಗಳೂರಲ್ಲಿ ಇಂಥವರೂ ಇರುತ್ತಾರೆ ಎಚ್ಚರ..! ಅಸಲಿಗೆ ಈತ ಮಾಡಿದ್ದೇನು..?
Advertisment
  • ಸಿಟಿಯಲ್ಲಿ ಓಡಾಡುವ ಮಹಿಳೆಯರೇ ಈತನ ಟಾರ್ಗೆಟ್
  • ಕೊನೆಗೂ ಸಿಕ್ಕಿಬಿದ್ದ 26 ವರ್ಷದ ಭಲೇ ಕಿಲಾಡಿ ನನ್ಮಗ
  • ಬನಶಂಕರಿ ಠಾಣೆ ಪೊಲೀಸರಿಂದ ತೀವ್ರ ವಿಚಾರಣೆ

ಬೆಂಗಳೂರಿನ ಸಿಟಿಗಳಲ್ಲಿ ಓಡಾಡುವ ಮಹಿಳೆಯರ ಫೋಟೋ ಹಾಗೂ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದ 26 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುರುದೀಪ್ ಸಿಂಗ್ ಬಂಧಿತ ಆರೋಪಿ.

ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಬೆದರಿಕೆ ಹಾಕಿದ ಬೆನ್​​ ಸ್ಟೋಕ್ಸ್..!

ನಗರದ ಪ್ರಮುಖ ಸ್ಥಳಗಳಾದ ಚರ್ಚ್​ ಸ್ಟ್ರೀಟ್​, ಕೋರಮಂಗಲ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎನ್ನಲಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರ ಅನುಮತಿ ಪಡೆಯದೇ ವಿಡಿಯೋ ಹಾಗೂ ಫೋಟೋಗಳನ್ನು ಚಿತ್ರೀಕರಿಸಿ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಮಾಡುತ್ತಿದ್ದ. ಅದರಂತೆ ಯುವತಿ ಒಬ್ಬರ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ನಂತರ ಆ ಯುವತಿಗೆ ಅಪರಿಚಿತರಿಂದ ಅಸಭ್ಯ ಮೆಸೇಜ್​​ಗಳು ಬರಲು ಆರಂಭಿಸಿವೆ. ಗಾಬರಿಯಾದ ಅವರು ಸೋಶಿಯಲ್ ಮೀಡಿಯಾದಲ್ಲಿ ಏನಾಗಿದೆ ಅಂತಾ ಹುಡುಕಾಟ ನಡೆಸಿದಾಗ ಸತ್ಯ ಗೊತ್ತಾಗಿದೆ.

ಯುವತಿಯ ಆರೋಪ ಏನು..?

ತಮಗೆ ಆಗುತ್ತಿರುವ ತೊಂದರೆಯನ್ನು ಯುವತಿ ಸೋಶಿಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವ್ಯಕ್ತಿ ಚರ್ಚ್​​ ಸ್ಟ್ರೀನ್​ನಲ್ಲಿರುವ ಅವ್ಯವಸ್ಥೆಗಳನ್ನು ಚಿತ್ರೀಕರಿಸುವಂತೆ ನಾಟಕವಾಡಿ ಓಡಾಡುತ್ತಾನೆ. ಆದರೆ, ಆತ ಸಿಟಿಯಲ್ಲಿನ ಸಮಸ್ಯೆಗಳನ್ನು ಚಿತ್ರೀಕರಿಸುತ್ತಿದ್ದಾನೆ ಅಂದುಕೊಂಡರೆ ತಪ್ಪಾಗುತ್ತದೆ. ಆತ ಹೆಣ್ಮಕ್ಕಳನ್ನು ಹಿಂಬಾಲಿಸಿ ವಿಡಿಯೋ ಮಾಡಿಕೊಳ್ಳುತ್ತಾನೆ. ನಂತರ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾನೆ. ಈ ರೀತಿಯ ಅನುಭವ ನನಗೂ ಆಗಿದೆ. ಅನೇಕ ಹೆಣ್ಮಕ್ಕಳ ವಿಡಿಯೋಗಳನ್ನು ಈತ ಇದೇ ರೀತಿ ಚಿತ್ರೀಕರಿಸಿರಬಹುದು. ಆತನಿಗೆ ನಾನು ವಿಡಿಯೋ ರಿಮೂವ್ ಮಾಡುವಂತೆ ಕೇಳಿಕೊಂಡೆ, ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈತ ಹೆಚ್ಚು ವೀವ್ಸ್​ ಪಡೆಯಲು ಮಾಡುತ್ತಿರುವ ಮಾರ್ಗ ಇದಲ್ಲ. ಈ ವ್ಯಕ್ತಿ ನಿಜವಾಗಿಯೂ ಸಿಕ್ಕಿ ಬೀಳುತ್ತಾನೆ ಎಂದು ಭಾವಿಸುತ್ತೇನೆ ಅಂತಾ ಬೆಂಗಳೂರು ಸಿಟಿ ಪೊಲೀಸ್ ಹಾಗೂ ಸೈಬರ್ ಕ್ರೈಂ ಅಧಿಕಾರಿಗಳ ಗಮನಕ್ಕೆ ತಂದಿದ್ದಳು.

ಸೋಶಿಯಲ್ ಮೀಡಿಯಾದಲ್ಲಿ ಯುವತಿ ಹಂಚಿಕೊಂಡಿದ್ದ ನೋವನ್ನು ಗಂಭಿರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಂದ್ಹಾಗೆ ಬಂಧಿತ ಆರೋಪಿ ಹ್ಯಾಂಡಲ್​ ಮಾಡುತ್ತಿದ್ದ ಎನ್ನಲಾಗುತ್ತಿರುವ ಇನ್​ಸ್ಟಾಗ್ರಾಮ್​ನಲ್ಲಿ 10 ಸಾವಿರಕ್ಕಿಂತಲೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ಬನಶಂಕರಿ ಪೊಲೀಸ್ ಠಾಣೆಯ ಅಧಿಕಾರಿಗಳು ವಿಚಾರಣೆ ನಡೆಸ್ತಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಯು ಕೆಆರ್​ ಪುರಂ ನಿವಾಸಿಯಾಗಿದ್ದು, ಸಹೋದರನ ಜೊತೆ ವಾಸವಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಕ್ರಿಕೆಟ್ ಕಾಶಿಯಲ್ಲಿ ಗೆಲುವು ಸುಲಭ ಇಲ್ಲ.. ಟೀಂ ಇಂಡಿಯಾಗೆ ಇದೆ 5 ಸವಾಲುಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment