Bengaluru: ಮೂರೇ ದಿನಕ್ಕೆ 77ಕ್ಕೂ ಹೆಚ್ಚು ಪಟಾಕಿ ಕೇಸ್​ ದಾಖಲು! ಗಾಯಗೊಂಡ ಮಕ್ಕಳ ಸಂಖ್ಯೆ ಎಷ್ಟು ಗೊತ್ತಾ?

author-image
AS Harshith
Updated On
Bengaluru: ಮೂರೇ ದಿನಕ್ಕೆ 77ಕ್ಕೂ ಹೆಚ್ಚು ಪಟಾಕಿ ಕೇಸ್​ ದಾಖಲು! ಗಾಯಗೊಂಡ ಮಕ್ಕಳ ಸಂಖ್ಯೆ ಎಷ್ಟು ಗೊತ್ತಾ?
Advertisment
  • ದೀಪಾವಳಿ ಸಂಭ್ರಮ... ಹೆಚ್ಚಾಯ್ತು ಪಟಾಕಿ ಅವಘಡ
  • ಬಿಜಿಲಿ, ಲಕ್ಷ್ಮೀ, ಫ್ಲವರ್ ಪಾಟ್, ಬಾಂಬ್​ ಸಿಡಿದು ಗಾಯ
  • ಪಟಾಕಿ ಸಿಡಿಸದೇ ಇದ್ರು 20 ಮಂದಿಗೆ ಗಾಯವಾಗಿದೆ

ದೀಪಾವಳಿ ಹಬ್ಬ ಒಂದ್ಕಡೆ ಸಂಭ್ರಮ ಹೆಚ್ಚಿಸಿದ್ರೆ, ಮತ್ತೊಂದ್ಕಡೆ ಪಟಾಕಿ ಅವಘಡಗಳ ಸಂಖ್ಯೆಯನ್ನೂ ಏರಿಕೆ ಮಾಡಿದೆ. ಅಕ್ಟೋಬರ್​ 31ರಿಂದ ನವೆಂಬರ್​ 2 ಅಂದ್ರೆ ಇಂದಿನ ವರೆಗೆ ಬರೋಬ್ಬರಿ 77ಕ್ಕೂ ಹೆಚ್ಚು ಕೇಸ್​ ದಾಖಲಾಗಿದೆ. ನಿನ್ನೆಯಷ್ಟೇ ಪಟಾಕಿ ಅವಘಡದಿಂದ ಮಿಂಟೋ ಆಸ್ಪತ್ರೆಗೆ ದಾಖಲಾಗೋರ ಸಂಖ್ಯೆ 22ಕ್ಕೆ ಏರಿಕೆಯಾಗಿತ್ತು ಅಂತ ವೈದ್ಯರು ಮಾಹಿತಿ ನೀಡಿದ್ರು. ಆದ್ರೀಗ ಪಟಾಕಿ ಅವಘಡದಿಂದ ಮಿಂಟೋ ಆಸ್ಪತ್ರೆಗೆ ದಾಖಲಾಗೋರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. 14 ಜನರಿಗೆ ಗಂಭೀರಗಾಯಗಳಾಗಿದ್ದು, 15 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆ ಪೈಕಿ 17 ಮಕ್ಕಳು, 12 ವಯಸ್ಕರಾಗಿದ್ದು, ನಾಲ್ವರಿಗೆ ಕಣ್ಣಿನ ಆಪರೇಷನ್​ ಮಾಡಲಾಗಿದೆ ಅಂತಾರೆ ವೈದ್ಯರು.

ಇತ್ತ ಅಕ್ಟೋಬರ್​ 31ರಿಂದ ನವೆಂಬರ್​ 2 ರವರೆಗೆ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡ 39 ಪ್ರಕರಣಗಳು ದಾಖಲಾಗಿದೆ. 23 ಮಕ್ಕಳು ಪಟಾಕಿಯಿಂದ ಗಾಯಗೊಂಡ್ರೆ, ಈ ಪೈಕಿ ಪಟಾಕಿ ಸಿಡಿಸದೇ ಇದ್ರು 20 ಮಂದಿಗೆ ಗಾಯಗಳಾಗಿವೆ. ಮೂವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಅಂತ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 44 ದಿನ ವೈದ್ಯರ ನಿಗಾದಲ್ಲಿ ದರ್ಶನ್​​; ಕಾಟೇರನ ಆರೋಗ್ಯದ ಸ್ಥಿತಿ ಹೇಗಿದೆ ಗೊತ್ತಾ?

publive-image

ಢಂ ಢಮಾರ್‌ನಿಂದ ಹೆಚ್ಚಾಯ್ತು ವಾಯು ಮಾಲಿನ್ಯ

ಈಗಾಗಲೇ ವಾಹನಗಳ ದಟ್ಟಣೆಗಳಿಂದ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಆದರೀಗ ದೀಪಾವಳಿ, ಪಟಾಕಿ ಹಾವಳಿಯಿಂದ ವಾಯು ಮಾಲಿನ್ಯ ದುಪ್ಪಟ್ಟಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ ಶೇಕಡಾ 90ರಷ್ಟು ಪ್ರದೇಶಗಳಲ್ಲಿ 100ರ ಗಡಿದಾಟುವ ಮೂಲಕ ನಗರದಲ್ಲಿ ಕಳಪೆ ಮಟ್ಟಕ್ಕೆ ಬಂದಿದೆ. ಹಾಗಿದ್ರೆ ಎಲ್ಲೆಲ್ಲಿ ಎಷ್ಟಿದೆ ಗಾಳಿ ಗುಣಮಟ್ಟ ಅನ್ನೋದನ್ನ ನೋಡೋದಾದ್ರೆ?

BTM ಲೇಔಟ್‌ 155 AQI, ಬಾಪೂಜಿನಗರ 120 AQI
ಸಿಟಿ ರೈಲು ನಿಲ್ದಾಣ 155 AQI, ಹೆಬ್ಬಾಳ 122 AQI
ಹೊಂಬೇಗೌಡ ನಗರ 106 AQI, ಜಯನಗರ 118 AQI
ಕಸ್ತೂರಿ ನಗರ 140 AQI, ಮೈಲಸಂದ್ರದಲ್ಲಿ 129 AQI
ಶಿವಪುರ-ಪೀಣ್ಯ 139 AQI, ಸಿಲ್ಕ್‌ ಬೋರ್ಡ್‌ 120 AQI
ಶನಿವಾರ ಮತ್ತಷ್ಟು ಹೆಚ್ಚಳವಾಗಲಿದೆ

ಇದನ್ನೂ ಓದಿ: ಮದುವೆಗಾಗಿ IPS ನಾಟಕ; ತಾನೇ ತೋಡಿದ ಹಳ್ಳಕ್ಕೆ ಯುವಕ ಬಿದ್ದಿದ್ದು ಹೇಗೆ?

ದೀಪಾವಳಿ ಅಂದ್ರೆ ಹಣತೆಗೆ ದೀಪ ಬೆಳಕಿ ಸಂಭ್ರಮಿಸೋ ಹಬ್ಬ ಆದ್ರೆ ಪಟಾಕಿ ಹಚ್ಚಿ ಒಂದ್ಕಡೆ ಕಣ್ಣಿನ ನೋವಿನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾಗ್ತಿದೆ. ಮತ್ತೋಂದ್ಕಡೆ ರಾಜಧಾನಿಯಲ್ಲಿ ಪ್ರಾಣವಾಯು ಅತೀ ಕಳಪೆ ಮಟ್ಟಕ್ಕೆ ತಲುಪಿದ್ದು, ಅನಾರೋಗ್ಯಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment