newsfirstkannada.com

ರಾಜ್ಯದ ಜನತೆಗೆ ಮತ್ತೆ​ ಶಾಕ್​​.. ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇ ಟೋಲ್​​ ಗರಿಷ್ಠ 200 ರೂ. ಹೆಚ್ಚಳ!

Share :

Published June 12, 2023 at 7:06pm

Update June 12, 2023 at 7:09pm

    ರಾಜ್ಯದ ಜನತೆಗೆ ಬಿಗ್​ ಶಾಕ್ ಕೊಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ!

    ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇ ಟೋಲ್​ ಹೆಚ್ಚಿಸಿ ಆದೇಶ

    ಗರಿಷ್ಠ 200 ರೂ. ಹೆಚ್ಚಿಸಿ ಆದೇಶಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ರಾಮನಗರ: ಮತ್ತೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಆದೇಶ ಹೊರಡಿಸಿದೆ. ಜೂನ್​​ 1ನೇ ತಾರೀಕಿನಿಂದ ಅನ್ವಯ ಆಗುವಂತೆ ಮೈಸೂರು-ಬೆಂಗಳೂರು ಎಕ್ಸ್​​ಪ್ರೆಸ್​​ ಹೈವೇಯ ಶುಲ್ಕವನ್ನು ಕನಿಷ್ಟ 30 ರೂ.ಗಳಿಂದ ಗರಿಷ್ಠ 305 ರೂ.ಗಳಷ್ಟು ಹೆಚ್ಚಿಸಿ ಎನ್ಎಚ್ಎಐ ಆದೇಶ ಹೊರಡಿಸಿದೆ. ಮುಂದಿನ ತಿಂಗಳಿಂದ ಈ ಶುಲ್ಕವೇ ಸಂಗ್ರಹ ಮಾಡಲಾಗುತ್ತಿದೆ. ಹೆದ್ದಾರಿ ಶುರುವಾದ ಎರಡೇ ತಿಂಗಳಲ್ಲಿ 2ನೇ ಬಾರಿಗೆ ಶುಲ್ಕ ಪರಿಷ್ಕಕರಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾರು/ವ್ಯಾನ್/ಜೀಪ್ ಗಳ ಒನ್ ವೇ ಶುಲ್ಕ 135 ರೂ.ಗಳಿಂದ 165 ರೂ. ಗಳಿಗೆ ಹೆಚ್ಚಿಸಲಾಗಿದೆ. ಇದಲ್ಲದೆ, ಲಘು ವಾಹನಗಳು/ಮಿನಿಬಸ್ ಗಳ ಒನ್ ವೇ ಸಂಚಾರದ ಶುಲ್ಕವನ್ನು 220 ರೂ.ಗಳಿಂದ 270 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಇನ್ನು, ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನಗಳ ಒನ್ ವೇ ಸಂಚಾರಕ್ಕೆ 460 ರೂ.ಗಳನ್ನು 565 ರೂ., ಮೂರರಿಂದ ಆರು ಆಕ್ಸೆಲ್ ಗಳಿರುವ ವಾಹನಗಳ ಮೇಲಿನ ಶುಲ್ಕ 500 ರೂ. ಗಳಿಂದ 615 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್‌/4-6 ಆಕ್ಸೆಲ್ ವಾಹನಗಳಿಗೆ ಒನ್ ವೇ ಟ್ರಾಫಿಕ್ ಶುಲ್ಕ 720 ರೂ. ಗಳಿಂದ 885 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಏಳು ಅಥವಾ ಅದಕ್ಕಿಂತ ಆ್ಯಕೆಲ್ಸ್ ಇರುವಂಥ ವಾಹನಗಳ ಒನ್ ವೇ ಗೆ ಇದ್ದ 880 ರೂ.ಗಳ ಶುಲ್ಕವನ್ನು 1,080 ರೂ.ಗಳಿಗೆ ಏರಿಕೆ ಮಾಡಿ ಆದೇಶಿಸಲಾಗಗಿದೆ.

ಈ ಹಿಂದೆ ಟೋಲ್​ ಸಂಗ್ರಹಿಸಲು ಆರಂಭವಾದ ಕೇವಲ 17 ದಿನಕ್ಕೇ ಶುಲ್ಕವನ್ನು ಪರಿಷ್ಕರಿಸಲಾಗಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಯಾಣಿಕರ ಹಗಲು ದರೋಡೆಗೆ ನಿಂತಿದೆ ಎಂದು ಜನ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ರಾಜ್ಯದ ಜನತೆಗೆ ಮತ್ತೆ​ ಶಾಕ್​​.. ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇ ಟೋಲ್​​ ಗರಿಷ್ಠ 200 ರೂ. ಹೆಚ್ಚಳ!

https://newsfirstlive.com/wp-content/uploads/2023/06/Toll.jpg

Load More