ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ; ಪ್ರಯಾಣಿಕರ ಜೇಬಿಗೆ ಬೀಳಲಿದೆ ಭಾರೀ ಕತ್ತರಿ

author-image
Gopal Kulkarni
Updated On
ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ; ಪ್ರಯಾಣಿಕರ ಜೇಬಿಗೆ ಬೀಳಲಿದೆ ಭಾರೀ ಕತ್ತರಿ
Advertisment
  • ಗ್ಯಾರಂಟಿ ಹೊರೆ, ಮೆಟ್ರೊ ಪ್ರಯಾಣಿಕರ ಜೇಬಿಗೆ ಬರೆ!
  • ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ ಭ್ರಷ್ಟ ಸರ್ಕಾರ!
  • ಒಂದಲ್ಲ ಒಂದು ರೀತಿಯಲ್ಲಿ ಸುಲಿಗೆ ಅಂತ ದಳ ಆಕ್ರೋಶ

1. ಹಾಲಿನ ದರ, 2. ವಿದ್ಯುತ್ ದರ, 3. ಪೆಟ್ರೋಲ್‌–ಡೀಸೆಲ್‌ ದರ, 4. ಮುದ್ರಾಂಕ ಶುಲ್ಕ, 5. ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ.. ಈಗ ಮೆಟ್ರೋ ಸರದಿ.. ಬಸ್ ದರ ಏರಿಕೆ ಬೆನ್ನಲ್ಲೇ ಮೆಟ್ರೊ ಪ್ರಯಾಣ ದರವೂ ದುಬಾರಿ ಆಗ್ತಿದೆ.. ಇವತ್ತಿನಿಂದಲೇ ನಮ್ಮ ಮೆಟ್ರೋ ದರವೂ ಏರಿಕೆಯಾಗಿದೆ.. ಹಾಗಾದ್ರೆ, ಯಾವ ಸ್ಟೇಜ್​ಗೆ ಎಷ್ಟು ದರ ಏರಿಕೆ ಆಗಿದೆ ಗೊತ್ತಾ?

ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ, ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ದರದ ಶಾಕ್ ಕೊಟ್ಟಿದೆ. ಇಂದಿನಿಂದಲೇ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಿದೆ. ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದರ ಜಾರಿ ಆಗ್ತಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ.5ರಷ್ಟು ರಿಯಾಯಿತಿ ಮುಂದುವರಿಯುವ ಸಾಧ್ಯತೆ ಇದೆ..

ಬೆಂಗಳೂರಿಗೆ ಬಿಗ್ ಶಾಕ್​.. ಮೆಟ್ರೋ ದರ 46% ಏರಿಕೆ!

ಮೆಟ್ರೋ ಪ್ರಯಾಣ ದರ ಗರಿಷ್ಠ 90 ರೂ. ಕನಿಷ್ಠ 10 ರೂ. ಏರಿಕೆಯಾಗಿದೆ.. ಭಾನುವಾರ ಹಾಗೂ ರಾಷ್ಟ್ರೀಯ ರಜಾ ದಿನಗಳಲ್ಲಿ ಏಕರೂಪ ಸ್ಮಾರ್ಟ್ ಕಾರ್ಡಿಗೆ 10% ರಿಯಾಯಿತಿ ಪ್ರಕಟಿಸಲಾಗಿದೆ. ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ 90 ರೂಪಾಯಿ ಬ್ಯಾಲೆನ್ಸ್ ಕಡ್ಡಾಯ ಮಾಡಲಾಗಿದೆ..
: ಮೊದಲ 2 ಕಿಲೋ ಮೀಟರ್​ ಪ್ರಯಾಣಕ್ಕೆ ಮುಂಚೆ 10 ರೂಪಾಯಿ ಇತ್ತು.. ಈಗ್ಲೂ 10 ರೂಪಾಯಿ.. 2 ರಿಂದ 4 ಕಿಲೋ ಮೀಟರ್​ ಪ್ರಯಾಣಕ್ಕೆ ಮುಂದೆ 15 ರೂಪಾಯಿ ಇದ್ರೆ ಈಗ 20 ರೂಪಾಯಿ.. 4 ರಿಂದ 6 ಕಿಲೋ ಮೀಟರ್ ಟ್ರಾವೆಲ್ ಮಾಡಿದ್ರೆ 20 ಕೊಡ್ಬೇಕಿತ್ತು.. ಈಗ 30 ರೂಪಾಯಿ ಕೊಡಲೇಬೇಕು.. 6 ರಿಂದ 8 ಕಿಲೋ ಮೀಟರ್ ಪ್ರಯಾಣದ ರೇಟ್ 25 ರೂಪಾಯಿನಿಂದ 40 ಆದ್ರೆ, 8-10 ಕಿ.ಮೀಗೆ 35 ರೂಪಾಯಿಯಿಂದ ₹50 ಆಗಿದೆ.. ಇನ್ನು, 10ರಿಂದ 15 ಕಿಲೋ ಮೀಟರ್​ಗೆ 40 ರಿಂದ 60 ರೂಪಾಯಿ ಆಗಿದ್ರೆ, 15 ರಿಂದ 20 ಕಿಲೋ ಮೀಟರ್​ಗೆ 50 ರೂಪಾಯಿಯಿಂದ 70 ರೂಪಾಯಿ ಆಗಿದೆ.. ಅತ್ತ, 20 ರಿಂದ 25 ಕಿಲೋ ಮೀಟರ್​ಗೆ 60 ಇತ್ತು.. ಈಗ 80 ರೂಪಾಯಿ ಆಗಿದೆ. ಲಾಸ್ಟ್​.. 25 ರಿಂದ 30 ಕಿಲೋ ಮೀಟರ್​ 60 ರೂಪಾಯಿ ಇದ್ರೆ, 90 ರೂಪಾಯಿಗೆ ಜಂಪ್ ಆಗಿದೆ.

ಒಂದಲ್ಲ ಒಂದು ರೀತಿಯಲ್ಲಿ ಸುಲಿಗೆ ಅಂತ ದಳ ಆಕ್ರೋಶ

ಇನ್ನು, ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಸಿದ್ದು ಸರ್ಕಾರ ಮತ್ತೊಮ್ಮೆ ಬರೆ ಎಳೆದಿದೆ ಅಂತ ಜೆಡಿಎಸ್​​ ಕಿಡಿಕಾರಿದೆ. ಬಸ್‌ ದರ, ಹಾಲಿನ ದರ, ವಿದ್ಯುತ್ ದರ, ಪೆಟ್ರೋಲ್‌–ಡೀಸೆಲ್‌ ದರ, ಮುದ್ರಾಂಕ ಶುಲ್ಕ, ಜನನ ಮರಣ ಪ್ರಮಾಣ ಪತ್ರ ಶುಲ್ಕ, ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ. ಈಗ ಮೆಟ್ರೋ ಸರದಿ ಅಂತ ಕಿಡಿಕಾರಿದೆ.. ಖಜಾನೆ ತುಂಬಿಸಿಕೊಳ್ಳಲು ಲೂಟಿಕೋರ ಕಾಂಗ್ರೆಸ್‌, ಕರುನಾಡಿಗೆ ಶಾಪ ಅಂತ ಟೀಕಿಸಿದೆ.. ಇನ್ನು, ಬಿಜೆಪಿ ಸಂಸದ ಪಿಸಿ ಮೋಹನ್​ ಸಹ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಗೂಗಲ್’ ಮ್ಯಾಪ್‌ನಿಂದ ಭೀಕರ ಅಪಘಾತ.. ದೇವಸ್ಥಾನಕ್ಕೆ ಹೊರಟಿದ್ದ ವೈದ್ಯರಿಗೆ ಆಪತ್ತು; ಆಗಿದ್ದೇನು?

ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ.. 2017 ಜೂನ್​ನಲ್ಲಿ 10 ರಿಂದ 15% ದರ ಏರಿಕೆಯಾಗಿತ್ತು.. ಈಗ ರೇಟ್ ಹೈಕ್ ಮಾಡ್ಲಾಗಿದೆ.. ಗ್ಯಾರಂಟಿ ಭಾರ ಹೊರಲಾಗದೇ ಸರ್ಕಾರ ಬೇರೆ ಬೇರೆ ಮೂಲಗಳಿಂದ ಹಣ ಮಾಡುವ ಕಾಯಕದಲ್ಲಿ ನಿರತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment