/newsfirstlive-kannada/media/post_attachments/wp-content/uploads/2023/06/Metro.jpg)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗುತ್ತದೆ ಅನ್ನೋ ಮಾತು ಕೇಳಿ ಬರುತ್ತಲೇ ಇತ್ತು. ಇದೀಗ ನಮ್ಮ ಮೆಟ್ರೋ (BMRCL) ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ನಾಳೆಯಿಂದಲೇ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಆಗುತ್ತಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಜನರೇ ಎಚ್ಚರ.. ಈ ಬಾರಿ ಕಾಡಲಿದೆ ಬಿಸಿಲಿನ ತಾಪ; ಹವಾಮಾನ ಇಲಾಖೆ ವಾರ್ನಿಂಗ್ ಏನು?
ಮೆಟ್ರೋ ಪ್ರಯಾಣಿಕರಿಗೆ ನಿಜಕ್ಕೂ ಇದು ಶಾಕಿಂಗ್ ಸುದ್ದಿ. ಫೆಬ್ರವರಿ 9 ಅಂದ್ರೆ ಇದೇ ಭಾನುವಾರದಿಂದ ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದರ ಜಾರಿ ಆಗುತ್ತಿದೆ. ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ ಇದೇ ಫೆಬ್ರವರಿ 9/2025 ರಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ ಎನ್ನಲಾಗಿದೆ.
ಪ್ರಯಾಣ ದರ ಏರಿಕೆ ಕುರಿತ ಮಾಹಿತಿ:
ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ, ಇದೇ ಫೆಬ್ರವರಿ 9/2025 ರಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. pic.twitter.com/jFNMnePq7L— ನಮ್ಮ ಮೆಟ್ರೋ (@OfficialBMRCL)
ಪ್ರಯಾಣ ದರ ಏರಿಕೆ ಕುರಿತ ಮಾಹಿತಿ:
ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ, ಇದೇ ಫೆಬ್ರವರಿ 9/2025 ರಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. pic.twitter.com/jFNMnePq7L— ನಮ್ಮ ಮೆಟ್ರೋ (@OfficialBMRCL) February 8, 2025
">February 8, 2025
ನಾಳೆಯಿಂದ ಬೆಂಗಳೂರಲ್ಲಿ ನಮ್ಮ ಮೆಟ್ರೋ ದರ ಏರಿಕೆ ಆಗುತ್ತಿದ್ದು, ಪರಿಷ್ಕೃತ ದರ ಪಟ್ಟಿಯ ಮಾಹಿತಿ ಇಲ್ಲಿದೆ.
ಕಿ.ಮೀ - ಟಿಕೆಟ್ ದರ
0-2 KM - 10 ರೂಪಾಯಿ
2-4KM - 20 ರೂಪಾಯಿ
4-6KM - 30 ರೂಪಾಯಿ
6-8KM - 40 ರೂಪಾಯಿ
8-10KM - 50 ರೂಪಾಯಿ
10-15KM - 60 ರೂಪಾಯಿ
15-20KM - 70 ರೂಪಾಯಿ
20-25KM - 80 ರೂಪಾಯಿ
25-30KM - 90 ರೂಪಾಯಿ
ಈ ಹಿಂದಿನ ದರದಲ್ಲಿ ಮಿನಿಮಮ್ 10 ರೂಪಾಯಿ ಇಂದ ಮ್ಯಾಕ್ಸಿಮಮ್ 60 ರೂಪಾಯಿ ಇತ್ತು. ಇದೀಗ ಮಿನಿಮಮ್ 10 ರೂಪಾಯಿ ಇಂದ ಮ್ಯಾಕ್ಸಿಮಮ್ 90 ರೂಪಾಯಿ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ