Advertisment

ನಮ್ಮ ಮೆಟ್ರೋದಲ್ಲಿ ಯುವತಿಯರ ಖಾಸಗಿ ವಿಡಿಯೋ ತೆಗೆದು ಅಪ್ಲೋಡ್; ವಿಕೃತ ಕಾಮಿಯ ಕಳ್ಳಾಟ!

author-image
admin
Updated On
ನಮ್ಮ ಮೆಟ್ರೋದಲ್ಲಿ ಯುವತಿಯರ ಖಾಸಗಿ ವಿಡಿಯೋ ತೆಗೆದು ಅಪ್ಲೋಡ್; ವಿಕೃತ ಕಾಮಿಯ ಕಳ್ಳಾಟ!
Advertisment
  • ಮೆಟ್ರೋದಲ್ಲಿ ಯುವತಿಯರ ಖಾಸಗಿ ಭಾಗದ ವಿಡಿಯೋಗಳು ಸೆರೆ
  • ಯುವತಿಯರನ್ನ ಹಿಂದೆಯಿಂದ ಫಾಲೋ ಮಾಡಿಕೊಂಡು ಹೋಗಿ ಚಿತ್ರೀಕರಣ
  • ಫೈಂಡಿಂಗ್‌ ಬ್ಯೂಟಿ ಫುಲ್‌ ಗರ್ಲ್ಸ್ ಆನ್ ನಮ್ಮ ಬೆಂಗಳೂರು ಎಂದು ಪೋಸ್ಟ್!

ನಮ್ಮ ಮೆಟ್ರೋ ಬೆಂಗಳೂರು ಜನರ ಜೀವನಾಡಿಯಾಗಿದೆ. ಪ್ರತಿನಿತ್ಯ ಮೆಟ್ರೋದಲ್ಲೇ ಸಿಲಿಕಾನ್ ಸಿಟಿಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಇಂತಹ ಬೆಂಗಳೂರು ನಮ್ಮ ಮೆಟ್ರೋದಲ್ಲಿ ನೀಚ ಕೃತ್ಯವೊಂದು ಬಯಲಾಗಿದೆ.

Advertisment

ವಿಕೃತ ಕಾಮಿ, ಕಿಡಿಗೇಡಿಗಳು ನಮ್ಮ ಮೆಟ್ರೋದಲ್ಲಿ ಯುವತಿಯರ ಖಾಸಗಿ ಭಾಗದ ವಿಡಿಯೋಗಳನ್ನ ಚಿತ್ರೀಕರಿಸಿ ವಿಕೃತಿ ಮೆರೆದಿದ್ದಾರೆ. ಯುವತಿಯರ ವಿಡಿಯೋ ತೆಗೆಯುವುದರ ಜೊತೆಗೆ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಸಹ ಮಾಡಿದ್ದಾರೆ.

publive-image

ಮೆಟ್ರೋದಲ್ಲಿ ಸಂಚಾರ ಮಾಡಿರುವ ವ್ಯಕ್ತಿ ಈ ವಿಡಿಯೋಗಳನ್ನ ಯುವತಿಯರಿಗೆ ತಿಳಿಯದ ಹಾಗೆ ಸೆರೆ ಹಿಡಿದಿದ್ದಾನೆ. ಬಳಿಕ ಇನ್​ಸ್ಟಾಗ್ರಾಂನ ಮೆಟ್ರೋ ಚಿಕ್ಸ್​​​ ಪೇಜ್​ನಲ್ಲಿ ಯುವತಿಯರ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ನಮ್ಮ ಮೆಟ್ರೋದ ಈ ವಿಕೃತ ಕಾಮಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಎಫ್​ಐಆರ್​​ ದಾಖಲಾಗಿದೆ.

publive-image

ಕಿಡಿಗೇಡಿ ಮೆಟ್ರೋದಲ್ಲಿ ನಿಂತಿರುವ ಯುವತಿಯರು, ಮೆಟ್ರೋ ನಿಲ್ದಾಣದಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಯರನ್ನ ಹಿಂದೆಯಿಂದ ಫಾಲೋ ಮಾಡಿಕೊಂಡು ಹೋಗಿ ವಿಡಿಯೋ ಮಾಡಿದ್ದಾನೆ. ಖಾಸಗಿ ಅಂಗಳನ್ನೇ ಗುರಿಯಾಗಿಸಿಕೊಂಡು ಫೋಟೋ/ವಿಡಿಯೋ ತೆಗೆದಿದ್ದಾನೆ.

Advertisment

ಇದನ್ನೂ ಓದಿ: KannadaFirst.. ಕನ್ನಡ ಮಾತಾಡಲ್ಲ ಎಂದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಸ್‌ಫರ್‌; ಕೊನೆಗೂ ಕನ್ನಡಿಗರ ಹೋರಾಟಕ್ಕೆ ಸಿಕ್ತು ಜಯ 

ಬೆಂಗಳೂರು ಮೆಟ್ರೋ ಕ್ಲಿಕ್ಸ್ ಪೇಜ್ ಅನ್ನೋ ಐದೂವರೆ ಸಾವಿರದಷ್ಟು ಫಾಲೋವರ್ ಇರೋ ಇನ್ಸ್‌ಸ್ಟಾ ಅಕೌಂಟ್‌ನಲ್ಲಿ 10ಕ್ಕೂ ಹೆಚ್ಚು ಯುವತಿಯರ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಫೈಂಡಿಂಗ್‌ ಬ್ಯೂಟಿ ಫುಲ್‌ ಗರ್ಲ್ಸ್ ಆನ್ ನಮ್ಮ ಬೆಂಗಳೂರು ಎಂದು ಕಿಡಿಗೇಡಿ ಪೋಸ್ಟ್ ಮಾಡಿದ್ದ. ವಿಕೃತ ಕಾಮಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ.

publive-image

ಈ ಕಿಡಿಗೇಡಿಯ ಕೃತ್ಯ ಕಂಡು ಯುವತಿಯರು ಆಕ್ರೋಶ ಹೊರ ಹಾಕಿದ್ದು, ಬೆಂಗಳೂರು ಮೆಟ್ರೋ ಕ್ಲಿಕ್ಸ್ ಪೇಜ್ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಕಿಡಿಗೇಡಿಯನ್ನು ಪತ್ತೆ ಹಚ್ಚಿ ಬಂಧಿಸುವ ಭರವಸೆ ನೀಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment