/newsfirstlive-kannada/media/post_attachments/wp-content/uploads/2024/11/Green-metro.jpg)
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಮತ್ತೊಂದು ಸಿಹಿ ಸುದ್ದಿ ನೀಡಿದೆ. ಮುಂದಿನ ಸೋಮವಾರ ಅಂದ್ರೆ ಜನವರಿ 13ರಿಂದ ಮೆಟ್ರೋ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ವೀಕೆಂಡ್ ಅಂತ ಊರಿಗೆ ಹೋಗಿ ಬೆಂಗಳೂರಿಗೆ ವಾಪಸ್ ಆಗುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.
ಇನ್ಮುಂದೆ ಪ್ರತಿ ಸೋಮವಾರದಂದು ಮೆಟ್ರೋ ಸಂಚಾರ ಬೆಳಗ್ಗೆ 4.15ರಿಂದ ಆರಂಭವಾಗಲಿದೆ. ಇಷ್ಟು ದಿನ ಸೋಮವಾರ ಬೆಳ್ಳಗೆ 5ಗಂಟೆಗೆ ಮೊದಲ ರೈಲು ಸಂಚಾರ ಆರಂಭವಾಗುತ್ತಾ ಇತ್ತು. ಶನಿವಾರ, ಭಾನುವಾರದ ವೀಕೆಂಡ್‌ನಲ್ಲಿ ಸಿಟಿ ಹೊರಗೆ ಹೋಗುವ ಪ್ರಯಾಣಿಕರು ಸೋಮವಾರ ಬೆಳಗಿನ ಜಾವ ಆಟೋ, ಬಸ್‌ಗಳ ಕಡೆ ಮುಖ ಮಾಡುತ್ತಿದ್ದರು.
ಸೋಮವಾರ ಬೆಳಗಿನ ಜಾವ ಸಿಲಿಕಾನ್ ಸಿಟಿ ವಾಪಸ್ ಆಗುವ ಪ್ರಯಾಣಿಕರಿಗಾಗಿ ಮೆಟ್ರೋ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ಮೆಟ್ರೋ ಪ್ರಯಾಣಿಕರು ಬೆಳಗ್ಗೆ 4.15ಕ್ಕೆ ಮೆಟ್ರೋ ಸೇವೆ ಬಳಸಬಹುದು. ನಗರಕ್ಕೆ ಹಿಂತಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರದಲ್ಲಿ ಈ ಬದಲಾವಣೆ ಮಾಡಲಾಗಿದೆ. ಇದೇ ಜನವರಿ 13ರ ಸೋಮವಾರದಿಂದ ಈ ಸೇವೆ ಜಾರಿಗೆ ಬರಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯುವತಿ ಖಾಸಗಿ ಅಂಗ ಫೋಟೋ ತೆಗೆದ ಕಾಮುಕ ಅರೆಸ್ಟ್
ಸೋಮವಾರದಂದು ಮಾತ್ರ ಮೆಟ್ರೋ ಸೇವೆ!
ನಮ್ಮ ಮೆಟ್ರೋ ಸಮಯ ಬದಲಾವಣೆಯ ಬಗ್ಗೆ BMRCL ಮಾಧ್ಯಮ ಪ್ರಕಟಣೆ ಹೊರಡಿಸಿದೆ. ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸುವ ಸಲುವಾಗಿ ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮಾತ್ರ ಮೆಟ್ರೋ ಸೇವೆಯನ್ನು ದಿನಾಂಕ 13ನೇ ಜನವರಿ 2025 ರಿಂದ ಜಾರಿಗೆ ಬರುವಂತೆ ಈಗಿರುವ ಮುಂಜಾನೆ 05:00ಕ್ಕೆ ಬದಲಾಗಿ 04:15 ರಿಂದ ಪ್ರಾರಂಭಿಸಲಿದೆ.
ಮತ್ತೆಲ್ಲಾ ದಿನಗಳಂದು ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾರ್ವಜನಿಕರು ತಮ್ಮ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕೋರಿದೆ. ಸಾರ್ವಜನಿಕರು ಮತ್ತು ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾಹಿತಿ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ