newsfirstkannada.com

ಬೆಂಗಳೂರು ಫುಲ್ ಹೈ ಅಲರ್ಟ್‌.. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಹಿಂದೆ ದೊಡ್ಡ ಹುನ್ನಾರ?

Share :

Published March 2, 2024 at 3:52pm

Update March 2, 2024 at 4:34pm

    ಕೆಫೆಯಲ್ಲಿ ರವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋದವನ ಪ್ಲಾನ್ ಏನು?

    ಹೈ ಅಲರ್ಟ್ ಆಗಿ ಇರುವಂತೆ ಬೆಂಗಳೂರು ಪೊಲೀಸರಿಗೆ ಸೂಚನೆ

    ಅನುಮಾನಾಸ್ಪದ ವ್ಯಕ್ತಿ, ಬ್ಯಾಗ್‌ ಕಾಣಿಸಿದರೆ ಕೂಡಲೇ 112ಗೆ ಕರೆ ಮಾಡಿ

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಬ್ಲಾಸ್ಟ್‌ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ರವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋದವನ ವಿದ್ವಂಸಕ ಕೃತ್ಯ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಫೋಟಕ ಸುದ್ದಿ ಹೊರ ಬಿದ್ದ ಮೇಲೆ ಇಡೀ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ತನಿಖೆ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು ಪೊಲೀಸರಿಗೆ ಬೆಂಗಳೂರಲ್ಲಿ ಹೈಅಲರ್ಟ್ ಆಗಿ ಇರುವಂತೆ ಸೂಚನೆ ನೀಡಿದ್ದಾರೆ. ನಗರದ ಹಲವೆಡೆ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ರಾಮೇಶ್ವರಂ ಕೆಫೆಯಲ್ಲಿ ಸಣ್ಣ ಪ್ರಮಾಣದ ಸ್ಫೋಟಕಗಳನ್ನು ಬಳಸಿರೋದು ಪೊಲೀಸರಿಗೆ ಹಲವು ಅನುಮಾನಗನ್ನು ಮೂಡಿಸಿದೆ. ರಾಮೇಶ್ವರಂ ಕೆಫೆಯ ಬಾಂಬ್ ಬ್ಲ್ಯಾಸ್ಟ್ ಬೇರೆ ಕಡೆ ಗಮನ ಸೆಳೆಯೋ ಹುನ್ನಾರನಾ? ಪೊಲೀಸರ ಗಮನ ಒಂದೇ ಕಡೆ ಕೇಂದ್ರೀಕೃತವಾಗುವಂತೆ ಮಾಡುವ ಸಂಚು ರೂಪಿಸಲಾಗಿದ್ಯಾ ಅನ್ನೋ ಬಗ್ಗೆಯು ತನಿಖೆ ನಡೆಸಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಬ್ಲಾಸ್ಟ್‌ ಮಾಡಿರೋ ಬಾಂಬ್ ಕಡಿಮೆ ತೀವ್ರತೆಯಿಂದ ಕೂಡಿದೆ. ಆದರೂ ಇದಕ್ಕೆ ಶಂಕಿತನಿಗೆ ಪಕ್ಕಾ ಟ್ರೈನಿಂಗ್ ಕೊಟ್ಟು ಈ ಕೃತ್ಯ ನಡೆದಿದೆ. ಹೀಗಾಗಿ ಪೊಲೀಸರ ಗಮನ ಒಂದೇ ಕಡೆ ಇರುವಂತೆ ನೋಡಿಕೊಂಡು ದೊಡ್ಡ ಬ್ಲಾಸ್ಟ್‌ಗೆ ಹುನ್ನಾರ ಮಾಡಿದ್ದಾರಾ ಅನ್ನೋ ಅನುಮಾನಗಳೂ ಇದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೂ ಮಂಗಳೂರಿನಲ್ಲಿನ ಟ್ರಯಲ್ ಬಾಂಬ್ ಕೇಸ್​ಗೂ ಲಿಂಕ್ ಇದೆಯಾ?

ಕೂಡಲೇ 112ಗೆ ಕರೆ ಮಾಡಿ!
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬಳಿಕ ಪೊಲೀಸ್ ಇಲಾಖೆ ಬೆಂಗಳೂರು ನಾಗರಿಕರಲ್ಲಿ ಮನವಿ ಮಾಡಿಕೊಂಡಿದೆ. ಸೋಷಿಯಲ್ ಮೀಡಿಯಾ Xನಲ್ಲಿ ಟ್ವೀಟ್‌ ಮಾಡಿರುವ ಪೊಲೀಸರು ಆತ್ಮೀಯ ನಾಗರೀಕರೇ, ಆತಂಕ ಪಡುವ ಅಗತ್ಯವಿಲ್ಲ. ನೀವು ಯಾವುದೇ ಅನುಮಾನಾಸ್ಪದ ವ್ಯಕ್ತಿ, ವಸ್ತು ಅಥವಾ ಚಟುವಟಿಕೆಗಳನ್ನು ಗಮನಿಸಿದರೆ, ಕೂಡಲೇ ನಮ್ಮ 112 ಗೆ ಕರೆ ಮಾಡಿ. ನಾವು ನಿಮ್ಮನ್ನು ತ್ವರಿತವಾಗಿ ತಲುಪುತ್ತೇವೆ ಎಂದು ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಫುಲ್ ಹೈ ಅಲರ್ಟ್‌.. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಹಿಂದೆ ದೊಡ್ಡ ಹುನ್ನಾರ?

https://newsfirstlive.com/wp-content/uploads/2024/03/Bangalore-Security.jpg

Load More