/newsfirstlive-kannada/media/post_attachments/wp-content/uploads/2024/06/DARSHAN_PAVITRA-1.jpg)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಹಾಗೂ ಏಳು ಜನರಿಗೆ ಕರ್ನಾಟಕ ಹೈಕೋರ್ಟ್​ ಜಾಮೀನು ನೀಡಿದೆ. ಪ್ರಕರಣದ ಎಲ್ಲಾ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಆಚೆ ಇದ್ದಾರೆ. ಈಗ ಹೈಕೋರ್ಟ್​ ನೀಡಿರುವ ಜಾಮೀನು ರದ್ದು ಕೋರಿ ಈಗ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಕೆಯಾಗಿದ್ದು. ದರ್ಶನ್​ಗೆ ಮತ್ತೆ ಸಂಕಷ್ಟ ಆರಂಭವಾದಂತಿದೆ.
ಇದನ್ನೂ ಓದಿ:ಮೈಸೂರಲ್ಲಿ ಮಹತ್ವದ ನಿರ್ಧಾರಕ್ಕೆ ಬಂದ ನಟ ದರ್ಶನ್.. ಏನದು..?
ದರ್ಶನ್ ಸೇರಿ ಏಳು ಆರೋಪಿಗಳ ಜಾಮೀನು ರದ್ದು ಕೋರಿ ಈಗಾಗಲೇ ಪೊಲೀಸರುಸುಪ್ರೀಂಕೋರ್ಟ್ ವಕೀಲ ಅನಿಲ್ ಸಿ ನಿಶಾನಿಯವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್​, ನಾಗರಾಜು, ಅನುಕುಮಾರ್ ಜಗದೀಶ್ ಇವರ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ಇದನ್ನೂ ಓದಿ: ಗಂಡನ ಫ್ರೆಂಡ್ ಜೊತೆ ಲವ್ವಿಡವ್ವಿ.. ಇಬ್ಬರು ಮಕ್ಕಳ ತಾಯಿ ಪರಾರಿ; ಇದು ವಿಚಿತ್ರ ಪ್ರೇಮ ಕಹಾನಿ!
ಕಳೆದ ಡಿಸೆಂಬರ್​ 13 ರಂದು ಕರ್ನಾಟಕ ಹೈಕೋರ್ಟ್​ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈ ಏಳು ಆರೋಪಿಗಳು ಜಾಮೀನು ಪಡೆದಿದ್ದರು. ಸದ್ಯ ಈ ಏಳು ಆರೋಪಿಗಳಿಗೆ ಮತ್ತೆ ಕಾನೂನಿನ ಸಂಕಷ್ಟ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us