‘ನಾನೊಬ್ಬ ಸೆಲೆಬ್ರಿಟಿ, ನನಗೆ ಗನ್​ ಬೇಕೇ ಬೇಕು’- ಪೊಲೀಸ್ರ ಮುಂದೆ ನಟ ದರ್ಶನ್​​ ಡಿಮ್ಯಾಂಡ್

author-image
Ganesh Nachikethu
Updated On
ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಬಿರಿಯಾನಿ ಊಟ; ಕೊಲೆ ಕೇಸ್‌ ವಿಚಾರಣೆ ಎಲ್ಲಿಗೆ ಬಂತು?
Advertisment
  • ಕಮಿಷನರ್​ ಆದೇಶ ಬೆನ್ನಲ್ಲೇ ದಾಸನ ಗನ್ ಲೈಸೆನ್ಸ್‌ ರದ್ದು
  • ವಿಜಯಲಕ್ಷ್ಮೀ ಮನೆಗೆ ತರೆಳಿ ಪೊಲೀಸರಿಂದ​ ಗನ್ ಸೀಜ್​
  • ಜರ್ಮನ್ ಮೇಡ್, ಫ್ಯಾಬ್ರಿಕ್ ಕಂಪನಿಯ ಪಿಸ್ತೂಲ್ ವಶ!

ಬೆಂಗಳೂರು: ಇಂದು ನಟ ದರ್ಶನ್​ಗೆ ಶಾಕಿಂಗ್​ ವಿಚಾರ. ಕೊಲೆ ಕಂಟಕ ಹೊತ್ತು ಕಾರಾಗೃಹ ದಾಟಿ ಹೊರಬಂದಿದ್ದ ಕಾಟೇರ ಈಗ ಫಾರ್ಮ್​ಹೌಸ್​, ಹೆಂಡತಿ, ಮಗ ಅಂತಾ ಫುಲ್ ಫ್ರೀ. ಆದ್ರಿವತ್ತು ಏಕಾಏಕಿ ಮನೆಗೆ ಎಂಟ್ರಿ ಕೊಟ್ಟಿದ್ದ ಆರ್​.ಆರ್​ ನಗರ ಪೊಲೀಸರು, ನಟ ದರ್ಶನ್​ ಬಳಿಯಿದ್ದ ಎರಡು ಪಿಸ್ತೂಲ್​​ಗಳನ್ನ ಸೀಜ್​ ಮಾಡಿದ್ದಾರೆ. ಜತೆಗೆ ಅವರ ಗನ್‌ ಲೈಸೆನ್ಸ್​ ರದ್ದು ಪಡಿಸಿದ್ದಾರೆ.

2024ರಲ್ಲಿ ಕೊಲೆ ಆರೋಪ, ಕಾರಾಗೃಹ, ಬಳ್ಳಾರಿ ಕಥೆ, ಬೆನ್ನು ನೋವು, ಆಸ್ಪತ್ರೆ, ಕೊನೆಗೆ ಜಾಮೀನು.. ಹೀಗೆ ಈ ಅರ್ಧ ವರ್ಷ ದರ್ಶನ್​​ ಪಾಲಿಗೆ ಅಕ್ಷರಷಃ ಸಿಂಹಸ್ವಪ್ನವೇ ಸರಿ. ಸದ್ಯಕ್ಕೆ ಸೆರೆವಾಸ.. ವನವಾಸ ಅನುಭವಿಸಿದ್ದ ಕಾಟೇರ ರಿಲೀಫ್ ಮೂಡ್​ನಲ್ಲಿದ್ರು. ಆದ್ರೆ, ಇದೀಗ ನಟ ದರ್ಶನ್​ಗೆ ಮತ್ತೊಂದು ಶಾಕ್ ಎದುರಾಗಿದೆ.

ಕಮಿಷನರ್​ ಅದೇಶ.. ನಟ ದರ್ಶನ್ ಗನ್ ಲೈಸೆನ್ಸ್‌ ರದ್ದು

ನಟ ದರ್ಶನ್​ಗೆ ಖುದ್ದು ಪೊಲೀಸರೇ ಶಾಕ್ ಕೊಟ್ಟಿದ್ದಾರೆ. ದರ್ಶನ್‌ಗೆ ನೀಡಲಾಗಿದ್ದ ಗನ್‌ ಲೈಸೆನ್ಸ್‌ ಅನ್ನ ರದ್ದು ಪಡಿಸಿರೋ ಪೊಲೀಸರು, ಅವರ ಬಳಿ ಇದ್ದ ಗನ್‌ನ ಸೀಜ್‌ ಮಾಡಿಕೊಂಡಿದ್ದಾರೆ. ಮೊದಲು ನೋಟಿಸ್​ ಕೊಟ್ಟು ಗನ್ ಕೊಡಿ ಅಂತ ಕೇಳಿದ್ದ ಪೊಲೀಸರು.. ಇವತ್ತು ಏಕಾಏಕಿ ಮನೆಗೆ ಹೋಗಿ ಗನ್ ಸೀಜ್ ಮಾಡ್ಬಿಟ್ಟಿದ್ದಾರೆ. ಕಮಿಷನರ್ ಆದೇಶ ಬೆನ್ನಲ್ಲೆ ಚೆನ್ನಮ್ಮನಕೆರೆಯಲ್ಲಿರೋ ವಿಜಯಲಕ್ಷ್ಮೀ ಫ್ಲ್ಯಾಟ್​ಗೆ ತೆರಳಿದ್ದ ಆರ್​.ಆರ್​ ನಗರ ಪೊಲೀಸರು 2 ಗನ್​ಗಳನ್ನ​ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ನ್ಯೂಸ್​ಫಸ್ಟ್​ಗೆ ಪೊಲೀಸ್​ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ದರ್ಶನ್ ಬಳಸ್ತಿದ್ದ ಜರ್ಮನ್ ಮೇಡ್ ಪಿಸ್ತೂಲ್ ಹಾಗೂ ಫ್ಯಾಬ್ರಿಕ್ ಕಂಪನಿಯ ಪಿಸ್ತೂಲ್​ಗಳನ್ನ 5 ಸಜೀವ ಗುಂಡುಗಳ ಸಮೇತ ಸೀಜ್ ಮಾಡಲಾಗಿದೆ. ಅಷ್ಟಕ್ಕೂ ಈ ಹಿಂದೆಯೇ ಲೈಸೆನ್ಸ್ ರದ್ದು ಮಾರಿ ದರ್ಶನ್​ಗೆ ನೋಟಿಸ್​ ಜಾರಿ ಮಾಡಿದ್ರು. ಇಷ್ಟಾದ್ರು ಗನ್ ಸರೆಂಡರ್ ಮಾಡಲು ದರ್ಶನ್ ಹಿಂದೇಟು ಹಾಕಿದ್ರು.

‘ನನಗೆ ಗನ್ ಬೇಕು’ ಎಂದಿದ್ದ ನಟ

ನಾನೊಬ್ಬ ನಟನಾಗಿರೋದ್ರಿಂದ ನನಗೆ ಗನ್ ಅವಶ್ಯಕತೆ ತುಂಬಾ ಇದೆ. ನಾನು ಹೋದ ಕಡೆ.. ಬಂದ ಕಡೆ ಸಾಕಷ್ಟು ಜನ ಸೇರಿರ್ತಾರೆ. ನನ್ನ ಆತ್ಮ ರಕ್ಷಣೆಗಾಗಿ ಗನ್ ಬೇಕು ಎಂದಿದ್ರು ದರ್ಶನ್.. ಹೀಗಂತ ಪೊಲೀಸರ ನೋಟಿಸ್​ಗೆ ಉತ್ತರ ನೀಡಿ ದಾಸ ಮನವಿ ಮಾಡಿದ್ರು.

ಇನ್ನು, ದರ್ಶನ್ ಕೊಟ್ಟ ಉತ್ತರದ ಬಗ್ಗೆ ಪರಿಶೀಲನೆ ನಡೆಸಿದ್ದ ಪೊಲೀಸರು.. ಒಂದು ತೀರ್ಮಾನಕ್ಕೆ ಬಂದ್ರು. ಕೊಲೆ ಕೇಸ್​ನಲ್ಲಿ ಎ2 ಆಗಿರುವ ನಟ ದರ್ಶನ್​, ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇದೆ. ಆರೋಪ ಮುಕ್ತವಾಗೋವರೆಗೂ ದರ್ಶನ್ ಗನ್ ಬಳಸುವಂತಿಲ್ಲ. ಅಷ್ಟಲ್ಲದೇ, ಆರ್​.ಆರ್​ ನಗರ ಪೊಲೀಸರಿಗೆ 2 ಗನ್ ಸರೆಂಡರ್ ಮಾಡಲು ಸೂಚನೆ ನೀಡಲಾಗಿತ್ತು. ಆದ್ರೆ, ದರ್ಶನ್ ಕೊಟ್ಟ ಕಾರಣಗಳನ್ನ ಪರಿಗಣಿಸದ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಲೈಸೆನ್ಸ್​ನ ತಾತ್ಕಾಲಿಕವಾಗಿ ಅಮಾನತು ಮಾಡಿದ್ರು. ಇದೀಗ ನೇರವಾಗಿ ಹೋಗಿ ದರ್ಶನ್​ಗೆ ಸೇರಿದ್ದ ಎರಡು ಗನ್​ಗಳನ್ನ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.

ಎರಡೂ ಬಾರಿ ನೋಟಿಸ್​ ಕೊಟ್ರು ದರ್ಶನ್​ ಗನ್ ಕೊಟ್ಟಿರಲಿಲ್ಲ. ನಾನು ಸೆಲೆಬ್ರೆಟಿ ಗನ್ ಬೇಕೆ ಬೇಕು ಅಂದಿದ್ರು.. ಆದ್ರೀಗ, ಕಾಟೇರನ ಮನವಿಗಳಿಗೆ ಬಗ್ಗದ ಪೊಲೀಸರು ಸೀದಾ ಮನೆಗೆ ಹೋಗಿ, ಎರಡೂ ಪಿಸ್ತೂಲ್​​ಗಳನ್ನ ಗುಂಡುಗಳ ಸಮೇತ ಸೀಜ್ ಮಾಡಿ ತಂದಿದ್ದಾರೆ.

ಇದನ್ನೂ ಓದಿ:ಭಾರತದ ಗೆಲುವಿಗಾಗಿ ಮಹಾ ಕಾಳಿ ಮೊರೆ ಹೋದ ಗೌತಮ್​​ ಗಂಭೀರ್‌; ದೇವಿಗೆ ವಿಶೇಷ ಪೂಜೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment