/newsfirstlive-kannada/media/post_attachments/wp-content/uploads/2024/06/darshan-and-vinay.jpg)
ಬೆಂಗಳೂರು: ನಟಿ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಕೇಸಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಈ ಕೇಸಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಮಾತಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಇದೊಂದು ಹೇಯ ಕೃತ್ಯ, ಎಲ್ಲರಿಗೂ ಶಿಕ್ಷೆಯಾಗಲಿದೆ ಎಂದಿದ್ದಾರೆ.
10 ಜನರನ್ನ ಸಾಕ್ಷಿಯಾಗಿ ಪರಿಗಣಿಸಲು ಮುಂದಾದ ಪೊಲೀಸರು
ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರು ಬರೊಬ್ಬರಿ 27 ಮಂದಿಯನ್ನ ಇದುವರೆಗೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ 10 ಜನರನ್ನ ಸಾಕ್ಷಿಯಾಗಿನ್ನಾಗಿ ಪರಿಗಣಿಸಲು ಮುಂದಾಗಿದ್ದಾರೆ. ನಟ ದರ್ಶನ್ ಪಟ್ಟಣಗೆರೆ ಶೆಡ್ಗೆ ಹೋಗೋದಕ್ಕೂ ಮುನ್ನ, ಸ್ಟೋನಿ ಬ್ರೋಕ್ ರೆಸ್ಟೋರೆಂಟ್ನಲ್ಲಿ ವಿವಿಧ ಕಲಾವಿದ ಜೊತೆ ಪಾರ್ಟಿ ನಡೆಸಿದ್ದರು. ಅದರಲ್ಲಿ ಹಾಸ್ಯಸಟ ಚಿಕ್ಕಣ್ಣ ಕೂಡ ಪಾಲ್ಗೊಂಡಿದ್ದರು. ಹೀಗಾಗಿ ಪೊಲೀಸರು ಹಾಸ್ಯನಟ ಚಿಕ್ಕಣ್ಣರನ್ನು ವಿಚಾರಣೆ ನಡೆಸಿದ್ದಾರೆ. ಇನ್ನು ಶೆಡ್ನ ಮಾಲೀಕ ಜಯಣ್ಣರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಸದ್ಯ ಈ ಇಬ್ಬರನ್ನೂ ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಡಿಸಿಪಿ ಗಿರೀಶ್ ಹೆಗಲಿಗೆ ಪ್ರಕರಣದ ಸಂಪೂರ್ಣ ಮೇಲುಸ್ತುವಾರಿ
ಪೊಲೀಸರು ಸ್ವಲ್ಪ ಮೈರೆತಿದ್ದರೂ, ರೇಣುಕಾಸ್ವಾಮಿ ಕೊಲೆ ಪ್ರಕರಣ, ಹತ್ತರಲ್ಲಿ ಹನ್ನೊಂದು ಆಗೋತ್ತಿತ್ತು. ಆದ್ರೆ ಪೊಲೀಸರ ಖಡಕ್ ತನಿಖೆಯಿಂದ ರೇಣುಕಾಸ್ವಾಮಿ ಕೊಲೆ ಹಿಂದಿನ ಅಸಲಿ ರಹಸ್ಯಗಳ ಹೊರಗೆ ಬರುತ್ತಿವೆ. ಈ ಮಧ್ಯೆ ಆರಂಭದಲ್ಲಿ ತನಿಖೆ ನಡೆಸುತ್ತಿದ್ದ ಡಿಸಿಪಿ ಗಿರೀಶ್ ಅವರನ್ನು ಬದಲಾವಣೆ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದ್ರೀಗ ಇಡೀ ಪ್ರಕರಣದ ಮೇಲುಸ್ತುವಾರಿಯನ್ನೇ ಡಿಸಿಪಿ ಗಿರೀಶ್ ಅವರಿಗೆ ಒಪ್ಪಿಸಲಾಗಿದೆ. ಪ್ರಕರಣ ತನಿಖಾ ಹಂತದಲ್ಲಿ ಇರೋದ್ರಿಂದ ವಿಚಾರ ಬಹಿರಂಗ ಪಡಿಸಲು ಆಯುಕ್ತರು ನಿರಾಕರಿಸಿದ್ದಾರೆ. ಆದ್ರೆ ಇದೊಂದು ಹೇಯ ಕೃತ್ಯ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿದಲ್ಲಿ ಪೊಲೀಸರು ತನಿಖೆ ಮಾಡ್ತಿದ್ದಾರೆ ಎಂದಿದ್ದಾರೆ.
ಒಟ್ಟಾರೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರ ಧೈರ್ಯ ಮತ್ತು ಕಾರ್ಯವನ್ನು ಮೆಚ್ಚಲೇಬೇಕು. ಆದಷ್ಟು ಬೇಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಗಳನ್ನು ಕಲೆ ಹಾಕಿ, ಈ ಡೇಂಜರಸ್ ಗ್ಯಾಂಗ್ಗೆ ಪರಪ್ಪನ ಅಗ್ರಹಾರದ ದಾರಿಯನ್ನ ತೋರಿಸಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ