ವಿನಯ್ ಗೌಡ, ರಜತ್ ಮೇಲೆ ಕಮಿಷನರ್ ಗರಂ.. ಮತ್ತೊಂದು ಕೇಸ್​ ದಾಖಲಾಗಿರುವ ಬಗ್ಗೆ ಮಾಹಿತಿ..!

author-image
Veena Gangani
Updated On
ವಿನಯ್ ಗೌಡ, ರಜತ್ ಮೇಲೆ ಕಮಿಷನರ್ ಗರಂ.. ಮತ್ತೊಂದು ಕೇಸ್​ ದಾಖಲಾಗಿರುವ ಬಗ್ಗೆ ಮಾಹಿತಿ..!
Advertisment
  • ಮಚ್ಚು ಹಿಡಿದು ರೀಲ್ಸ್ ಬಗ್ಗೆ ಪೊಲೀಸ್ ಆಯುಕ್ತ ಹೇಳಿದ್ದೇನು?
  • ಮಚ್ಚು ಹಿಡಿದು ರೀಲ್ಸ್​ ಮಾಡಿದ್ದ ವಿನಯ್​ ಗೌಡ, ರಜತ್​ ಕಿಶನ್​
  • ಪೊಲೀಸ್ ದಿಕ್ಕನ್ನ ತಪ್ಪಿಸುತ್ತಿದ್ದಾರಾ ಬಿಗ್​​ಬಾಸ್​ ಮಾಜಿ ಸ್ಪರ್ಧಿಗಳು?

ಬೆಂಗಳೂರು: ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ ಗೌಡ ಹಾಗೂ ರಜತ್​ ಕಿಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಚ್ಚು ಹಿಡಿದು ರೀಲ್ಸ್ ಮಾಡಿದ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಶ್ರದ್ಧಾ ಮಾದರಿಯ ಹತ್ಯೆ; ಮುದ್ದಾದ ಹೆಂಡತಿಯ ಕೊಂದು ಸೂಟ್‌ಕೇಸ್‌ಗೆ ತುಂಬಿದ ಟೆಕ್ಕಿ..

publive-image

ಈ ಬಗ್ಗೆ ಮಾತಾಡಿದ ಅವರು, ರೀಲ್ಸ್ ಮಾಡಿದ ಒರಿಜಿನಲ್ ಮಚ್ಚು ಈವರೆಗೂ ಹ್ಯಾಂಡ್ ಓವರ್ ಮಾಡಿಲ್ಲ. ಅಸಲಿ ಮಚ್ಚು ಹಾಗೂ ಫೈಬರ್ ಮಚ್ಚಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಅಲ್ಲದೆ ಈವರೆಗೂ ಅಸಲಿ ಲಾಂಗ್ ಬಗ್ಗೆ ಮಾಹಿತಿ ನೀಡಿಲ್ಲ. ಪೊಲೀಸರ ತನಿಖೆಯ ದಿಕ್ಕನ್ನ ತಪ್ಪಿಸುವ ಯತ್ನವನ್ನ ಇಬ್ಬರೂ ಆರೋಪಿಗಳು ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಸಹ ಪ್ರಕರಣ ದಾಖಲಿಸಲಾಗಿದೆ. ಸಂಜೆ ವೇಳೆಗೆ ಕಸ್ಟಡಿಗೆ ಬೇಕಾ ಬೇಡ್ವಾ ಅಂತಾ ತನಿಖಾಧಿಕಾರಿಗಳು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

publive-image

ಏನಿದು ಪ್ರಕರಣ?

ರೀಲ್ಸ್​ ಮಾಡುವ ಬರದಲ್ಲಿ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಮಚ್ಚು ಹಿಡಿದುಕೊಂಡು ವಿಡಿಯೋ ಶೂಟ್​ ಮಾಡಿದ್ದರು. ಹೀಗಾಗಿ ಈ ಇಬ್ಬರ ಮೇಲೆ ​ಶಸ್ತ್ರಾಸ್ತ್ರ ಕಾಯ್ದೆಯಡಿ FIR ​ದಾಖಲಾಗಿತ್ತು. ಇದಾದ ಬಳಿಕ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದ್ರೆ, ವಿನಯ್​ ಗೌಡ ಹಾಗೂ ರಜತ್​ ಕಿಶನ್ ಫೈಬರ್​ ಮಚ್ಚು ನೀಡಿ ಯಾಮಾರಿಸಿದ್ದರು. ಹೀಗಾಗಿ ಪೊಲೀಸರು ಆ ರಿಯಲ್ ಮಚ್ಚಿಗಾಗು ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment