/newsfirstlive-kannada/media/post_attachments/wp-content/uploads/2025/07/RAMYA-CASE.jpg)
ಬೆಂಗಳೂರು: ನಟಿ ರಮ್ಯಾ ಅಶ್ಲೀಲ ಕಾಮೆಂಟ್ ಹಾಗೂ ಮೆಸೇಜ್ ವಿರುದ್ಧ ದೂರು ನೀಡಿದ ಬೆನ್ನಲ್ಲೇ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ರಮ್ಯಾ ಅವರು ಒಟ್ಟು 43 ಅಕೌಂಟ್ಸ್ ಉಲ್ಲೇಖಿಸಿ ಕಮಿಷನರ್ಗೆ ದೂರು ನೀಡಿದ್ದಾರೆ.
ದೂರು ದಾಖಲಾಗ್ತಿದ್ದಂತೆ ಸೈಬರ್ ಕ್ರೈಂ ಪೊಲೀಸರು ಎಫ್ಐಆರ್ ಮಾಡಿ ತನಿಖೆ ಚುರುಕುಗೊಳಿಸಿದ್ದಾರೆ. ಅಶ್ಲೀಲ ಕಾಮೆಂಟ್ ಬಂದ ಅಕೌಂಟ್ಸ್ ಪೈಕಿ ಬಹುತೇಕ ಫೇಕ್ ಅನ್ನೋದು ತಿಳಿದುಬಂದಿದೆ. ಯುವತಿಯರ ಫೋಟೋ ಬಳಸಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಲಾಗಿದೆ. ಅಕೌಂಟ್ಸ್ ಪರಿಶೀಲನೆಯ ವೇಳೆ ಫೇಕ್ ಅಕೌಂಟ್ಸ್ ಬೆಳಕಿಗೆ ಬಂದಿದೆ. ಹೀಗಾಗಿ ಸಂದೇಶ ಕಳುಹಿಸಿದವರ IP ಅಡ್ರೆಸ್ ಪತ್ತೆಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
‘43’ ಅಕೌಂಟ್ಸ್ ಬೆನ್ನತ್ತಿ..
- ನಟಿ ರಮ್ಯಾ ದೂರು ಪರಿಶೀಲಿಸಿರುವ ಸೈಬರ್ ಕ್ರೈಂ ಪೊಲೀಸರು
- ದೂರಿನಲ್ಲಿ ಒಟ್ಟು 43 ಅಕೌಂಟ್ಸ್ಗಳ ಉಲ್ಲೇಖ ಮಾಡಿರೋ ರಮ್ಯಾ
- ಉಲ್ಲೇಖ ಮಾಡಿದ ಅಕೌಂಟ್ಸ್ಗಳ ಪೈಕಿ ಬಹುತೇಕವುಗಳು ಫೇಕ್
- ಬೇರೆಯವರ ಫೋಟೋ, VPN ಸಾಫ್ಟ್‌ವೇರ್ ಬಳಸಿ ನಕಲಿ ಅಕೌಂಟ್ಸ್
- ಸಂದೇಶ ಬಂದ ಫೇಕ್ ಅಕೌಂಟ್ಸ್ ಬ್ಲಾಕ್ ಮಾಡಿಸಿರೋ ಪೊಲೀಸರು
- ಐಟಿ ಆ್ಯಕ್ಸ್ನಡಿ ನೋಟಿಸ್ ನೀಡಲು ಸೈಬರ್ ಕ್ರೈಂ ಪೊಲೀಸರ ಸಿದ್ಧತೆ
- ಸಂದೇಶ ಕಳಿಸಿದವರ IP ಅಡ್ರೆಸ್ ಪತ್ತೆಯಾದಲ್ಲಿ ಮುಂದಿನ ಕ್ರಮ
- ನೋಟಿಸ್ ಕೊಟ್ಟು ವಿಚಾರಣೆ ನಡೆಸಲಿರುವ ಸೈಬರ್ ಕ್ರೈಂ ಪೊಲೀಸರು
ತನಿಖೆ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್.. ಪ್ರಕರಣವನ್ನು ಸಿಸಿಬಿಗೆ ನೀಡಲಾಗಿದೆ. ನಿನ್ನೆ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಲಾಗ್ತಿದೆ. ಓರ್ವ ಎಸಿಪಿ ಅಧಿಕಾರಿ ನೇತೃತ್ವದಲ್ಲಿ ಕೇಸ್ ಮಾನಿಟರ್ ಮಾಡಲಾಗ್ತಿದೆ. ಸಿಸಿಬಿ ಜಂಟಿ ಆಯುಕ್ತರು ಪ್ರಕರಣದ ತನಿಖೆ ನೋಡಿಕೊಳ್ತಾರೆ ಅಂತಾ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಮರವೇರಿ ಕೂತ ಸ್ವಾಮೀಜಿ.. 101 ದಿನ ಅಲ್ಲೇ ವಾಸ.. ಯಾಕಿರಬಹುದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ