/newsfirstlive-kannada/media/post_attachments/wp-content/uploads/2024/08/darshan7.jpg)
ಬೆಂಗಳೂರು: ಕೊಲೆ ಕೇಸ್​ನಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರ ಬಂದಿರೋ ನಟ ದರ್ಶನ್​​ಗೆ ಮತ್ತೊಂದು ಆಘಾತ ಎದುರಾಗಿದೆ. ನಟ ದರ್ಶನ್​​ ಗನ್ ಸೀಜ್ ಆಗಿದೆ.
ಕಮಿಷನರ್ ದಯಾನಂದ್ ಅವರ ಆದೇಶದ ಬೆನ್ನಲ್ಲೇ ದರ್ಶನ್ ಗನ್ ಸೀಜ್ ಮಾಡಲಾಗಿದೆ. ಇಂದು ಖುದ್ದು ಪೊಲೀಸರು ದರ್ಶನ್ ಮನೆಗೆ ತೆರಳಿ ಗನ್ ಸೀಜ್ ಮಾಡಿದ್ದಾರೆ. ಚೆನ್ನಮ್ಮನಕೆರೆಯ ವಿಜಯಲಕ್ಷ್ಮಿ ಫ್ಲ್ಯಾಟ್‌ನಲ್ಲಿದ್ದ ದರ್ಶನ್ ಗನ್ ಸೀಜ್ ಆಗಿದೆ ಎಂದು ನ್ಯೂಸ್​ಫಸ್ಟ್​​ಗೆ ಪೊಲೀಸ್​ ಮೂಲಗಳಿಂದಲೇ ಮಾಹಿತಿ ಸಿಕ್ಕಿದೆ.
ಮೊದಲು ತಾತ್ಕಾಲಿಕವಾಗಿ ಗನ್ ಪರವಾನಗಿ ರದ್ದು ಮಾಡಲಾಗಿತ್ತು. ಪರವಾನಗಿ ರದ್ದು ಮಾಡಿದ್ದ ಬೆನ್ನಲ್ಲೆ ದರ್ಶನ್‌ಗೆ ರಾಜರಾಜೇಶ್ವರಿ ನಗರ ಪೊಲೀಸ್ರು ನೋಟಿಸ್​ ಜಾರಿ ಮಾಡಿದ್ರು. ನೋಟಿಸ್ ಜಾರಿ ಮಾಡಿದ್ರೂ ಗನ್​ ಪೊಲೀಸರಿಗೆ ನೀಡಲು ನಟ ದರ್ಶನ್​​ ಹಿಂದೇಟು ಹಾಕಿದ್ದರು.
ನಟ ದರ್ಶನ್​​​ ಜರ್ಮನ್​ ಮೇಡ್​ ಗನ್​​ ಬಳಸುತ್ತಿದ್ದರು. ಕಾರ್ಲ್ ವಾಲ್ತೇರ್ ವಾಫೆನ್ ಫ್ಯಾಬ್ರಿಕ್ ಕಂಪನಿ ಗನ್​​ ಇದಾಗಿದ್ದು, ಜತೆಗೆ 5 ಸಜೀವ ಗುಂಡುಗಳು ಸೀಜ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us