/newsfirstlive-kannada/media/post_attachments/wp-content/uploads/2024/04/BBMP-1.jpg)
ಬೆಂಗಳೂರು: ದಂಡ, ದಂಡ, ದಂಡ.. ಆಸ್ತಿ ತೆರಿಗೆ ಪಾವತಿಸದೇ ಇರುವವರ ಮೇಲೆ ಬಿಬಿಎಂಪಿ ದಂಡದ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಟ್ಯಾಕ್ಸ್ ಬಾಕಿ ಉಳಿಸಿಕೊಂಡವರಿಗೆ ಶೇಕಡಾ 100 ರಷ್ಟು ದಂಡ ಹಾಕುವ ನಿಯಮ ಇದೇ ಏಪ್ರಿಲ್ 1ರಿಂದ ಜಾರಿಗೆ ತರಲಾಗುತ್ತಿದೆ. ಏನಿದು ಹೊಸ ತೆರಿಗೆ ನಿಯಮ? ಯಾರೆಲ್ಲಾ ಎಷ್ಟು ತೆರಿಗೆ ಕಟ್ಟಬೇಕು. 100% ದಂಡ ಯಾರಿಗೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾರೆಲ್ಲಾ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೋ ಅವರಲ್ಲೇ ಎಚ್ಚರ ಆಗಲೇಬೇಕು. ಯಾಕಂದ್ರೆ ಬೆಂಗಳೂರಲ್ಲಿ ಇದೇ ಏಪ್ರಿಲ್ 1ರಿಂದ ಹೊಸ ತೆರಿಗೆ ನಿಯಮ ಜಾರಿಗೆ ಬರುತ್ತಿದೆ.
ಯಾರಿಗೆಲ್ಲಾ 100% ದಂಡ?
ಕಳೆದ ವರ್ಷ ಅಂದ್ರೆ 2024-25ರ ತೆರಿಗೆ ಬಾಕಿ ಉಳಿಸಿಕೊಂಡವರಿಗೆ 15% ಸರಳ ಬಡ್ಡಿ ಮಾತ್ರ ಇದೆ. ಆಸ್ತಿ ತೆರಿಗೆ ಪಾವತಿಸದೆ ಒಂದು ದಿನ ಕಳೆದ ಅವಧಿಗೆ ಶೇ.100 ರಷ್ಟು ದಂಡ ವಿಧಿಸುವುದಿಲ್ಲ. ಆಸ್ತಿ ತೆರಿಗೆ ಪಾವತಿಸದ ಸುಮಾರು 2 ವರ್ಷದ ನಂತರ ಮಾತ್ರ ಶೇ.100 ರಷ್ಟು ದಂಡ ವಿಧಿಸಲಾಗುತ್ತದೆ.
100% ದಂಡದ ಬಗ್ಗೆ ನಾವು ಇನ್ನೂ ಸರಳವಾಗಿ ನಿಮಗೆ ಹೇಳುತ್ತೇವೆ. ಉದಾಹರಣೆಗೆ 2024-25 ಆಸ್ತಿ ತೆರಿಗೆಯನ್ನು ನೀವು ಪಾವತಿಸದಿದ್ದರೆ ದಿನಾಂಕ 01.04.2025 ರಿಂದ ಶೇ.100ರಷ್ಟು ದಂಡ ಅನ್ವಯಿಸುವುದಿಲ್ಲ. ಎರಡು ವರ್ಷದ ನಂತರವೂ ತೆರಿಗೆ ಪಾವತಿಸದಿದ್ದರೆ ಅಂದ್ರೆ 01.04.2026 ರಿಂದ ಇದು ಅನ್ವಯವಾಗುವುದು. 2025-26ರ ಸಂಪೂರ್ಣ ಅವಧಿಯಲ್ಲಿ ಸುಸ್ತಿದಾರರಿಗೆ ಶೇ. 15 ರಷ್ಟು ಸರಳ ಬಡ್ಡಿಯನ್ನು ಮಾತ್ರ ವಿಧಿಸಲಾಗುತ್ತದೆ.
ಎಷ್ಟು ಆಸ್ತಿ ತೆರಿಗೆ ಬಾಕಿ ಇದೆ?
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷ 50 ಸಾವಿರ ನಾಗರಿಕರು ಇದುವರೆಗೂ ಆಸ್ತಿ ತೆರಿಗೆಯನ್ನೇ ಪಾವತಿಸಿಲ್ಲ. 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 5,210 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ ಈವರೆಗೆ 4,604 ಕೋಟಿ ರೂಪಾಯಿ ಅಂದ್ರೆ ಶೇಕಡಾ 88.36ರಷ್ಟು ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ.
ಸರ್ಕಾರಿ ಕಟ್ಟಡಗಳಿಗೆ OTS ಸೌಲಭ್ಯ!
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಕಟ್ಟಡಗಳು ಹಾಗೂ ಸರ್ಕಾರದ ಅಂಗ ಸಂಸ್ಥೆಗಳಿಂದಲೂ ತೆರಿಗೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸರ್ಕಾರಿ ಕಟ್ಟಡಗಳಿಗೆ ಓಟಿಎಸ್ ಸೌಲಭ್ಯ ಕೊಟ್ಟಿದೆ. 31ನೇ ಮಾರ್ಚ್ 2025ರವರೆಗೆ ಒಂದು ಬಾರಿಯ ಪರಿಹಾರ ಯೋಜನೆ (OTS) ಜಾರಿಗೆ ತರಲಾಗಿದೆ.
ಇದನ್ನೂ ಓದಿ: ಇದು ವಿಶ್ವದ ಕಟ್ಟಕಡೆಯ ದೇಶ.. ಇದರ ಆಚೆ ಭೂಮಿಯೇ ಮುಗಿದು ಹೋಗುತ್ತೆ? ಯಾವುದು ಆ ರಾಷ್ಟ್ರ?
ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಸರ್ಕಾರಿ ಅಂಗ ಸಂಸ್ಥೆಗಳು ಓಟಿಎಸ್ ಅಡಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಅವಕಾಶ ಇದೆ. ಓಟಿಎಸ್ ಸೌಲಭ್ಯ ಪಡೆಯದವರು ಏಪ್ರಿಲ್ 2025ರಿಂದ ಆಸ್ತಿ ತೆರಿಗೆಯು ದುಪ್ಪಟ್ಟು ಪಾವತಿಸಬೇಕಾಗಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ