newsfirstkannada.com

ತಂಗಿ ಚುಡಾಯಿಸಿದ್ಕೆ ಕಲ್ಲಿನಿಂದ ಜಜ್ಜಿ ಕೊಲೆ.. ಆರೋಪಿ ‘ಕಾಲು’ ಬಂಧನಕ್ಕೆ ಸುಳಿವು ಕೊಟ್ಟಿದ್ದು ಒಂದು ನಂಬರ್..!

Share :

Published January 24, 2024 at 3:01pm

  ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್

  ಬೆಂಗಳೂರು ನಗರ ರೈಲ್ವೆ ಪೊಲೀಸರಿಂದ ಕಾರ್ಯಾಚರಣೆ

  ಕಲ್ಲಿನ ಮೇಲೆ ರಕ್ತದ ಕಲೆಗಳಿದ್ದವು, ಜೇಬಿನಲ್ಲಿತ್ತು ನಂಬರ್

ಬೆಂಗಳೂರು ನಗರ ರೈಲ್ವೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕೊಲೆ ಪ್ರಕರಣ ಒಂದರ ರಹಸ್ಯವನ್ನು ಭೇದಿಸಿದ್ದಾರೆ.

ಜನವರಿ 21 ರಂದು ರಾಮನಗರ ರೈಲ್ವೆ ನಿಲ್ದಾಣದ ಬಳಿ ಶವವೊಂದು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ರೈಲ್ವೇ ಪೊಲೀಸರು, ಮೃತ ವ್ಯಕ್ತಿ ಗುರುತು ಪತ್ತೆಗೆ ಮುಂದಾಗುತ್ತಾರೆ. ಕೊನೆಗೆ ಕೊಲೆಯಾಗಿರೋದು ಅಬಾರ್ಜ್ ಪಾಷಾ ಅನ್ನೋದು ಬಹಿರಂಗ ಆಗುತ್ತದೆ. ಇದೀಗ ಕೊಲೆ ಆರೋಪಿಗಳಾದ ಸೈಯದ್ ಇಲಿಯಾಸ್, ಜಹೀರ್ ಅಲಿಯಾಸ್ ಕಾಲುನನ್ನು ಬಂಧಿಸಿದ್ದಾರೆ. ಇವರಿಬ್ಬರು ಅರ್ಬಾಜ್ ತಲೆ ಮೇಲೆ ಕಾಂಕ್ರಿಟ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು.

ಯಾಕೆ ಕೊಲೆ..?

ಪ್ರಕರಣದ ಬಗ್ಗೆ ರೈಲ್ವೆ ಎಸ್​ಪಿ ಸೌಮ್ಯಲತಾ ಮಾಹಿತಿ ನೀಡಿ.. 21ನೇ ತಾರೀಖಿನಂದು ಒಂದು ಅಪರಿಚಿತ ಶವ ಪತ್ತೆಯಾಗಿತ್ತು. ಶವದ ಪಕ್ಕದಲ್ಲಿ ಒಂದು ಕಾಂಕ್ರಿಟ್ ಕಲ್ಲಿನ ಮೇಲೆ ರಕ್ತದ ಕಲೆಗಳಿದ್ದವು. ಮೃತ ವ್ಯಕ್ತಿಯ ಜೇಬಿನಲ್ಲಿ ಒಂದು ನಂಬರ್ ಸಿಕ್ಕಿತ್ತು, ಅದರ ಆಧಾರದ ಮೇಲೆ ಲಿಂಕ್ ಸಿಕ್ಕಿತ್ತು.

ಬಂಧಿತ ಜಹೀರ್ ಅಲಿಯಾಸ್ ಕಾಲು ತಂಗಿಯನ್ನು ಅರ್ಬಾಜ್ ಆಗಾಗ ಹಿಂಬಾಲಿಸಿ ಚುಡಾಯಿಸುತ್ತಿದ್ದ. ಮಾತ್ರವಲ್ಲ ಆರೋಪಿ ಕಾಲು ತಾಯಿಯ ಬಗ್ಗೆಯೂ ಅರ್ಬಾಜ್ ಕೆಟ್ಟದಾಗಿ ಮಾತನಾಡುತ್ತಿದ್ದ. ತಂಗಿ ಹಾಗೂ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರಿಂದ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದರು. ನಂತರ ಶವವನ್ನು ಸುಡೋದಕ್ಕೆ ಪ್ಲಾನ್ ಮಾಡಿ ಮತ್ತೆ ಸ್ಥಳಕ್ಕೆ ಬಂದಿದ್ದರು. ಬರುವಾಗ ಪೆಟ್ರೋಲ್ ಜೊತೆಗೆ ತಂದಿದ್ದರು, ಆಗ ಪೊಲೀಸರು ಅಲ್ಲಿಯೇ ಇದ್ದರು. ಹಾಗಾಗಿ ಅಲ್ಲಿಂದ ಸೈಯದ್ ಇಲಿಯಾಸ್, ಜಹೀರ್ ಕಾಲ್ಕಿತ್ತಿದ್ದರು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂಗಿ ಚುಡಾಯಿಸಿದ್ಕೆ ಕಲ್ಲಿನಿಂದ ಜಜ್ಜಿ ಕೊಲೆ.. ಆರೋಪಿ ‘ಕಾಲು’ ಬಂಧನಕ್ಕೆ ಸುಳಿವು ಕೊಟ್ಟಿದ್ದು ಒಂದು ನಂಬರ್..!

https://newsfirstlive.com/wp-content/uploads/2024/01/BNG-MURDER.jpg

Load More