Advertisment

Bengaluru: ಒಂದಲ್ಲಾ.. ಎರಡಲ್ಲಾ.. ಮಹಾ ಮಳೆಗೆ ನೆಲಕಚ್ಚಿದ 206 ಮರಗಳು! ಬಿಬಿಎಂಪಿಗೆ ದೊಡ್ಡ ಸವಾಲು

author-image
AS Harshith
Updated On
Bengaluru: ಒಂದಲ್ಲಾ.. ಎರಡಲ್ಲಾ.. ಮಹಾ ಮಳೆಗೆ ನೆಲಕಚ್ಚಿದ 206 ಮರಗಳು! ಬಿಬಿಎಂಪಿಗೆ ದೊಡ್ಡ ಸವಾಲು
Advertisment
  • ಬೆಂಗಳೂರಲ್ಲಿ ಭಾನುವಾರದ ಮಹಾಮಳೆ.. ಸಂಕಷ್ಟದ ಸರಮಾಲೆ
  • ವರುಣಾರ್ಭಟಕ್ಕೆ ಬೆಚ್ಚಿ ಬಿದ್ದ ಬೆಂಗಳೂರು.. ಧರೆಗುರುಳಿದ ಮರಗಳು
  • ಮಳೆಯಿಂದಾಗಿ ನೂರೆಂಟು ಸಮಸ್ಯೆ.. BBMP ಕಂಟ್ರೋಲ್ ರೂಂ ಕರೆ

ಬೆಂಗಳೂರು: ಭಾನುವಾರ ಸುರಿದ ಮಹಾ ಮಳೆ ಬೆಂಗಳೂರೇ ಬೆಚ್ಚಿಬಿದ್ದಿದೆ. ರಸ್ತೆಗಳೆಲ್ಲಾ ನದಿಯಂತಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದವು. ವಾಹನ ಸವಾರರು ಅತ್ತ ವಾಹನ ಚಲಾಯಿಸಲಾಗದೆ, ಇತ್ತ ಮನೆ ಸೇರಲಾಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಇದರ ಜೊತೆಗೆ ಮಹಾ ನಗರದಲ್ಲಿ ಇನ್ನೂರಕ್ಕೂ ಹೆಚ್ಚು ಮರಗಳು ನೆಲಕಪ್ಪಳಿಸಿ ಸಂಕಷ್ಟ ತಂದೊಡ್ಡಿವೆ.

Advertisment

ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಸುರಿದ ಮಳೆಗೆ ಒಂದಲ್ಲಾ, ಎರಡಲ್ಲಾ, ಇನ್ನೂರಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಬಿಬಿಎಂಪಿ ವ್ಯಾಪ್ತಿಯ 8 ವಯಲಗಳಲ್ಲಿ 206 ಮರ ನೆಲಕಚ್ಚಿವೆ. 38 ಸ್ಥಳಗಳಲ್ಲಿ ಮಳೆ ನೀರು ನಿಂತಿದ್ದು, ಈ ಬಗ್ಗೆ ಪಾಲಿಕೆಗೆ ದೂರು ದಾಖಲಾಗಿವೆ.

publive-image

ಎಲ್ಲೆಲ್ಲಿ ಎಷ್ಟೆಷ್ಟು ಮರಗಳು ಬಿದ್ದಿವೆ?

ಬೊಮ್ಮನಹಳ್ಳಿ -14
ದಾಸರಹಳ್ಳಿ -7
ಬೆಂಗಳೂರು ಪೂರ್ವ -22
ಮಹದೇವಪುರ -2
RR ನಗರ -7
ದಕ್ಷಿಣ- 99
ಪಶ್ಚಿಮ - 36
ಯಲಹಂಕಾ -19

ಬಿಬಿಎಂಪಿಗೆ ದೊಡ್ಡ ಚಾಲೆಂಜ್

ಇನ್ನು ನಿನ್ನೆ ಮಳೆ ಸುರಿದ ಎರಡು ತಾಸುಗಳಿಂದ ಬಿಬಿಎಂಪಿ ಕಂಟ್ರೋಲ್ ರೂಂ ಗೆ ನಗರದ ಬೇರೆ ಬೇರೆ ವಲಯದಿಂದ 250 ಕ್ಕೂ ಹೆಚ್ಚು ಕರೆಗಳು ಬಂದಿವೆ. ಇಂದು ನಗರದಾದ್ಯಂತ ಬಿದ್ದಿರೋ ಮರಗಳನ್ನ ತೆರವುಗೊಳಿಸೋದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳಿಗೆ ದೊಡ್ಡ ಚಾಲೆಂಜ್ ಆಗಿದೆ. ಒಂದೆಡೆ ಮಳೆ ಮತ್ತೊಂದೆಡೆ‌ ಮರಗಳು ಧರೆಗೆ ಉರುಳಿರುವುದರಿಂದ ನಗರದ ಬಹುತೇಕ ಕಡೆ ಸಂಚಾರಕ್ಕೆ ತೊಂದರೆಯುಂಟು ಮಾಡಿತ್ತು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment