ಮುಂಜಾನೆಯಿಂದಲೇ ವರುಣನ ದಾಂಧಲೆ
ಬೆಂಗಳೂರಿನ ಒಂದೊಂದು ರಸ್ತೆಯ ಕತೆ ಹೀಗಿದೆ
ಅಂಡರ್ ಪಾಸ್ ಜಲಾವೃತ, ಬಸ್ ಇಲ್ಲದೆ ಪರದಾಟ
ಬೆಂಗಳೂರಲ್ಲಿ ಮುಂಜಾನೆಯಿಂದಲೇ ವರುಣ ಅಬ್ಬರಿಸುತ್ತಿದ್ದಾನೆ. ಬಿಟ್ಟು ಬಿಡದೆ ಸುರಿಯುತ್ತಿದ್ದಾನೆ. ಮಳೆಯಿಂದಾಗಿ ಶಾಲೆ-ಕಾಲೇಜು, ಕೆಲಸಕ್ಕೆ ಹೋಗುವವರು ಸಮಸ್ಯೆ ಎದುರಿಸುವಂತಾಗಿದೆ.
ಅಂಡರ್ ಪಾಸ್ ಜಲಾವೃತ
ಮುಂಜಾನೆಯಿಂದ ಸುರಿಯುವ ಮಳೆಯಿಂದ ರಸ್ತೆಯಲ್ಲೆಲ್ಲಾ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದ್ದಾರೆ. ಅಂಡರ್ಪಾಸ್ಗಳು ಜಲಾವೃತಗೊಂಡಿದ್ದು, ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.
ಮೆಜೆಸ್ಟಿಕ್, ಉತ್ತರಹಳ್ಳಿಯಲ್ಲಿ ಟ್ರಾಫಿಕ್ ಜಾಮ್
ಮೆಜೆಸ್ಟಿಕ್ ಸುತ್ತಮುತ್ತ ಮಳೆಗೆ ಸವಾರರು ಹೈರಾಣಗಿದ್ದಾರೆ. ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಅತ್ತ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದೆ. ಬರೋಬ್ಬರಿ 2 ಕಿಲೋಮೀಟರ್ವರೆಗೂ ಟ್ರಾಫಿಕ್ ಜಾಮ್ ಆಗಿದ್ದು, ಶಾಲಾ- ಕಾಲೇಜುಗಳಿಗೆ ಮತ್ತು ಕಚೇರಿಗೆ ತೆರಳಲು ಪರದಾಡಿದ್ದಾರೆ.
ಇದನ್ನೂ ಓದಿ: Bengaluru: ಬೆಳಗ್ಗೆಯಿಂದ ಸುರಿಯುತ್ತಿರೋ ಮಳೆ.. ನೆಲಕ್ಕುರುಳಿದ ಮರ, ಹೊಳೆಯಂತಾದ ರಸ್ತೆ
ನೆಲಕ್ಕುರುಳಿದ ಮರ
ಮಳೆಯಿಂದಾಗಿ HMT ಲೇಔಟ್ನಲ್ಲಿ ಬೃಹದಾಕಾರದ ಮರ ಧರೆಗುರುಳಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಮರ ನೆಲಕ್ಕುರುಳಿದ್ದು, ಮರ ಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. 3 ತಿಂಗಳ ಹಿಂದೆ ಮರ ತೆರವು ಮಾಡುವಂತೆ ಬಿಬಿಎಂಪಿಗೆ ದೂರು ನೀಡಿದ್ದರು ಕ್ಯಾರೆ ಎಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮಳೆಯಿಂದಾಗಿ ಸಾಲು ಸಾಲು ಸಮಸ್ಯೆ
ಗೊರಗುಂಟೆಪಾಳ್ಯ ಸುತ್ತಮುತ್ತ ಕೂಡ ಮಳೆಯಿಂದಾಗಿ ಸಮಸ್ಯೆ ಉಂಟಾಗಿದೆ. ಕೆಲಸ-ಕಾರ್ಯಗಳಿಗೆ ಹೋಗಲಾಗದೇ ಜನರ ಪರದಾಡಿದ್ದಾರೆ. ಮಳೆಯಿಂದಾಗಿ ಸಿಲ್ಕ್ ಬೋರ್ಡ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಯಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದೆ. ವಾಹನ ಸವಾರರ ಪರದಾಡಿದ್ದಾರೆ.
ರಸ್ತೆಯಲ್ಲಿ ನಿಂತ ನೀರು
ವಿಂಡ್ಸನ್ ಮ್ಯಾನರ್ ಅಂಡರ್ಪಾಸ್ ಬಳಿ ಅವಾಂತರ ಸೃಷ್ಟಿಯಾಗಿದೆ. ಜಲಾವೃತವಾದ ರಸ್ತೆಯಲ್ಲೇ ವಾಹನ ಸವಾರರು ಓಡಾಡುತ್ತಿದ್ದಾರೆ. ಮಳೆಯಿಂದಾಗಿ ರಸ್ತೆಯಲ್ಲಿ ಕ್ರಮೇಣವಾಗಿ ನೀರು ಹೆಚ್ಚಳವಾಗುತ್ತಿದ್ದು, ಹೊಂಡ-ಗುಂಡಿ ಕಾಣದೆ ವಾಹನ ಸವಾರರು ಹೈರಾಣಾಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಆಟಗಾರನೋ? ಅತಿಥಿಯೋ? ಕನ್ಫ್ಯೂಶನ್ನಲ್ಲಿ ಧನ್ರಾಜ್ ಕಣ್ಣೀರು
ಪ್ಯಾಲೇಸ್ ರಸ್ತೆಯ ಕತೆಯೇನು?
ಪ್ಯಾಲೇಸ್ ರಸ್ತೆಯಲ್ಲಿ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಶಾಂತಿನಗರ ಡಬಲ್ ರೋಡ್ನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಸಮರ್ಪಕ ಕಾಮಗಾರಿಯಿಲ್ಲದೆ ರಸ್ತೆಯಲ್ಲಿ ನೀರು ನಿಂತಿದೆ.
ಬಸ್ ಇಲ್ಲದೆ ಪರದಾಟ
ಒಂದೆಡೆ ಮಳೆ ಮತ್ತೊಂದೆಡೆ ಬಸ್ ಇಲ್ಲದೆ ಪ್ರಯಾಣಿಕರು ಹೈರಾಣಾಗಿದ್ದಾರೆ. ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಸ್ಗಾಗಿ ಪರದಾಟ ನಡೆಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಬಸ್ಗಾಗಿ ಕಾದಿದ್ದಾರೆ. ಕೆಂಗೇರಿ ಬಸ್ ಟರ್ಮಿನಲ್ನಲ್ಲಿ ಇದೇ ವಿಚಾರವಾಗಿ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಬಸ್ ವ್ಯವಸ್ಥೆ ಮಾಡದ ಡಿಪೋ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ.
ಚನ್ನಸಂದ್ರ, RR ನಗರದ ರಸ್ತೆ, ಸದಾಶಿವನಗರ, ಮೇಕ್ರಿ ಸರ್ಕಲ್, ಟೌನ್ ಹಾಲ್ ವ್ಯಾಪ್ತಿಯಲ್ಲಿ ಮಳೆ ಸಿಂಚನವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ