Advertisment

ಹೊಳೆಯಂತಾದ ಬೆಂಗಳೂರು.. ಒಂದಾ, ಎರಡಾ, ಸಾಲು ಸಾಲು ಅವಾಂತರಗಳ ನಡುವೆ ಸಂಕಷ್ಟದಲ್ಲಿ ಜನರು

author-image
AS Harshith
Updated On
ಬೆಂಗಳೂರು ರಸ್ತೆಗಳಲ್ಲಿ ಮೀನುಗಳು! ಬಲೆ ಹಾಕಿದ ಜನ; ರಣ ಮಳೆಯ ಅನಾಹುತದ 10 ಫೋಟೋಗಳು..!
Advertisment
  • ವರುಣನ ಆರ್ಭಟಕ್ಕೆ ಹಗಲು-ರಾತ್ರಿ ಕಾಟಕ್ಕೆ ಸುಸ್ತೋ ಸುಸ್ತು
  • ಜಯರಾಮ ವೃತ್ತದ ಬಳಿ ರಸ್ತೆ ಜಲಾವೃತ.. ಕಾರು ಶೋ ರೂಮ್​ಗೂ ನೀರು
  • ತೋಟಗಳಿಗೆ ನೀರು, ಬೆಳೆಗಳು ನಾಶ.. ರಾಶಿ ರಾಶಿ ಹೂವುಗಳು ನೀರು ಪಾಲು

ಮಳೆ.. ಮಳೆ.. ಮಳೆ.. ಬೆಂಗಳೂರಿನಲ್ಲಿ ಸದ್ಯ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆಯ ಆರ್ಭಟಕ್ಕೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ಸೂರ್ಯ ಹುಟ್ಟೋವಾಗ ಶುರುವಾದ ಮಳೆ ಸೂರ್ಯ ಮುಳುಗಿ ಚಂದ್ರ ಬಂದ್ರೂ ಕಡಿಮೆಯಾಗ್ತಿಲ್ಲ. ರಾತ್ರಿ ಇಡೀ ಸುರಿದ ಮಳೆ ಹಲವೆಡೆ ರಗಳೆಗೆ ಕಾರಣವಾಗಿದೆ.

Advertisment

ನಿರಂತರವಾಗಿ ಮಳೆಯ ಅಬ್ಬರ.. ಬೆಂಗಳೂರಿಗರು ತತ್ತರ

ಬೆಂಗಳೂರಲ್ಲಿ ನಿನ್ನೆ ಬೆಳಗ್ಗೆಯಿಂದ ಆರಂಭವಾದ ಮಳೆ ಸಂಜೆವರೆಗೂ ಸುರಿತು. ರಾತ್ರಿಯೂ ಕಡಿಮೆಯಾಗಲಿಲ್ಲ. ಅಬ್ಬರಿಸಿ ಬೊಬ್ಬಿರಿದಿದೆ. ಹೀಗೆ ನಿರಂತರವಾಗಿ ಸಿಲಿಕಾನ್ ಸಿಟಿಯಲ್ಲಿ ಸಂಚಾರ ಮಾಡ್ತಿರೋ ವರುಣ ಸಾಕಷ್ಟು ಅವಾಂತರಕ್ಕೂ ಕಾರಣವಾಗಿದ್ದಾನೆ.

publive-image

ರಸ್ತೆ ಜಲಾವೃತ.. ಕಾರು ಶೋ ರೂಮ್​ಗೂ ನೀರು

ರಾತ್ರಿ ಮಳೆಗೆ ಮೈಸೂರು ರಸ್ತೆಯ ಜಯರಾಮ ವೃತ್ತದ ಬಳಿ ಭಾರೀ ಪ್ರಮಾಣದ ನೀರು ತುಂಬಿ, ಅಕ್ಕಪಕ್ಕದ ಕಾರು ಶೋ ರೂಂಗಳಿಗೂ ಮಳೆನೀರು ನುಗ್ಗಿತ್ತು.

publive-image

2 ಅಡಿಗಳಷ್ಟು ನೀರು.. ವಾಹನ ಸವಾರರ ಪರದಾಟ

ಸಿಲ್ಕ್ ಬೋರ್ಡ್ ಟು ಬೊಮ್ಮನಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಮಳೆ ನೀರಿನಿಂದ ಅವಾಂತರವೇ ಸೃಷ್ಟಿಯಾಗಿತ್ತು. ಒಂದರಿಂದ 2 ಅಡಿಗಳಷ್ಟು ನಿಂತ ನೀರಿನಲ್ಲಿ ವಾಹನ ಸವಾರರು ಪರದಾಟ ನಡೆಸಿದ್ರು.

Advertisment

ಮುಖ್ಯ ರಸ್ತೆಗೆ ನೀರು.. ಸಂಪರ್ಕ ಬಂದ್

ಸತತ ಮಳೆಯಿಂದಾಗಿ ಯಶವಂತಪುರ ವ್ಯಾಪ್ತಿಯ ಸಾಯಿಬಾಬಾ ದೇವಸ್ಥಾನದಿಂದ ಹುಣಸೇಮರದ ಪಾಳ್ಯ ಸಂಪರ್ಕಿಸುವ ಮುಖ್ಯ ರಸ್ತೆ ಜಲಾವೃತವಾಗಿತ್ತು. ಪರಿಣಾಮ, ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಡಿತವಾಗಿದೆ.

ಇದನ್ನೂ ಓದಿ: ರಾತ್ರಿ ಅಷ್ಟೇ ಅಲ್ಲ, ಬೆಳ್ಳಂಬೆಳಗ್ಗೆ ಬೆಂಗಳರೂಲ್ಲಿ ಧಾರಾಕಾರ ಮಳೆ.. ಭಾರೀ ತೊಂದರೆ

ಧಾರಾಕಾರ ಮಳೆ.. ಕೆರೆಯಂತಾದ ರಸ್ತೆ

ರಾತ್ರಿ ಸುರಿದ ಮಳೆಗೆ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಹಾಗೂ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ‌ ರಸ್ತೆ ಸಂಪೂರ್ಣ ನೀರುಮಯವಾಗಿತ್ತು. ಸುರಿಯುತ್ತಿದ್ದ ಮಳೆಯಲ್ಲೇ ವಾಹನ ಸವಾರರು ಕಷ್ಟಪಟ್ಟು ವಾಹನ ಚಲಾಯಿಸಿದ್ರು.

Advertisment

ಇದನ್ನೂ ಓದಿ: ವಿದ್ಯಾರ್ಥಿಗಳಲ್ಲಿ ಭಾರೀ ಆತಂಕ; ಆಸ್ತಿ ಖರೀದಿ ಮಾಡೋರಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

ಮನೆಗೆ ನೀರು.. ನಿವಾಸಿಗಳಿಗೆ ಜಲ‌ದಿಗ್ಬಂಧನ

ನಿನ್ನೆ ರಾತ್ರಿಯ ಮಳೆಗೆ ಬ್ಯಾಟರಾಯನಪುರದ‌ ಮನೆಗಳಿಗೆ ನೀರು ನುಗ್ಗಿ ಕುಟುಂಬಸ್ಥರು ಪರದಾಡಿದ್ದಾರೆ.. ಎರಡು ಅಡಿಯಷ್ಟು ನಿಂತ ಮಳೆ ನೀರಲ್ಲೇ ನಿವಾಸಿಗಳು ದಿನ ಕಳೆಯುವಂತಾಗಿದೆ. ಇನ್ನು ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ.

publive-image

ರಾತ್ರಿ ಸುರಿದ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸಣ್ಣಬೋಕಿಕೆರೆ, ಗೊಲ್ಲರಹಳ್ಳಿಯಲ್ಲಿ ಹೊಲಗಳು ಜಲಾವೃತವಾಗಿವೆ.

Advertisment

ತೋಟಗಳಿಗೆ ನೀರು.. ಬೆಳೆಗಳು ನಾಶ

ಧಾರಾಕಾರ ಮಳೆಗೆ ಶಿವಮೊಗ್ಗದ ಏರ್ಪೋರ್ಟ್ ಬಳಿಯ ಕಾಚಿನಕಟ್ಟೆಯ ಅಡಕೆ ತೋಟಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ.

publive-image

ನೀರಿನಲ್ಲಿ ಮುಳುಗಿದ ರಾಶಿ ರಾಶಿ ಹೂವು

ವರುಣಾರ್ಭಟದ ಪರಿಣಾಮ ಚಿಕ್ಕಬಳ್ಳಾಪುರ ನಗರ ಹೊರವಲಯದ ಹೂವಿನ ಮಾರುಕಟ್ಟೆಯಲ್ಲಿ ನೀರು ನಿಂತು ಕೆರೆಯಂತಾಗಿತ್ತು.. ಮಳೆಯಿಂದಾಗಿ ಹೂವಿಗೆ ಬೇಡಿಕೆ ಇಲ್ಲದ ಕಾರಣ ಹೂವು ನೀರುಪಾಲಾಗುವಂತಾಯ್ತು.

ಒಟ್ಟಾರೆ ರಾಜ್ಯದಲ್ಲಿ ವರುಣ ಬಿಟ್ಟು ಬಿಡದೆ ಸುರಿಯುತ್ತಿದ್ದು ಜನರು ಹೈರಾಣಾಗಿದ್ದಾರೆ. ಯಾವಾಗಪ್ಪ ಮಳೆ ನಿಲ್ಲುತ್ತೆ ಅಂತ ಬೇಡಿಕೊಳ್ಳೋ ಸ್ಥಿತಿ ನಿರ್ಮಾಣವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment