newsfirstkannada.com

ಸಿಲಿಕಾನ್​ ಸಿಟಿಯಲ್ಲಿ ಧಾರಾಕಾರ ಮಳೆ.. ಆಲಿಕಲ್ಲು ಕೈಯಲ್ಲಿಡಿದು ಚಿಲ್ ಆದ ಜನ

Share :

Published May 6, 2024 at 6:53pm

  ಬೆಂಗಳೂರಿನ ಯಾವ ನಗರದಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದಿದೆ?

  ನಗರದಲ್ಲಿ ಧಾರಾಕಾರ ಮಳೆಯಿಂದ ಕೆಲವೆಡೆ ಟ್ರಾಫಿಕ್ ಜಾಮ್​

  ಕೊಂಚ ಬಿಡುವು ತೆಗೆದುಕೊಂಡು ಜೋರಾಗಿ ಸುರಿಯುತ್ತಿರೋ ಮಳೆ

ಬೆಂಗಳೂರು: ರಾಜಧಾನಿಗೆ ಕಳೆದ ಎರಡು ದಿನಗಳ ಹಿಂದಷ್ಟೇ ಎಂಟ್ರಿಕೊಟ್ಟಿದ ಮಳೆ ಬಿಡುವು ಕೊಟ್ಟು, ಇದೀಗ ಸದಾಶಿವನಗರ ಸುತ್ತಮುತ್ತ ಆಲಿ‌ಕಲ್ಲು‌ ಸಮೇತ ಧಾರಾಕಾರವಾಗಿ ಸುರಿಯುತ್ತಿದೆ. ಇನ್ನು ಕೆಲವರು ಆಲಿಕಲ್ಲುಗಳನ್ನು ಕೈ ಹಿಡಿದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಸಿಲಿಕಾನ್​ ಸಿಟಿಯ ಸದಾಶಿವನಗರದ ಸುತ್ತಮುತ್ತ ಆಲಿ‌ಕಲ್ಲು ಸಮೇತ ‌ಮಳೆ ಜೋರಾಗಿ ಉಯ್ಯುತ್ತಿದೆ. ಮಳೆಯ ನಡುವೆಯೇ ಕೆಲವರು ಆಲಿಕಲ್ಲುಗಳನ್ನು ಕೈ ಹಿಡಿದುಕೊಂಡು ನೋಡಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ನಗರದ ಕೆಲವು ಪ್ರದೇಶಗಳಲ್ಲಿ ವರುಣ ಆರ್ಭಟ ಮಾಡಿದ್ದನು. ಕೊಂಚ ಬಿಡುವು ತೆಗೆದುಕೊಂಡಿದ್ದ ಮಳೆ ಇದೀಗ ನಗರದ ಹಲವು ಪ್ರದೇಶಗಳಲ್ಲಿ ಧೋ ಎಂದು ಉಯ್ಯುತ್ತಿದೆ. ಇದರಿಂದ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗಿರುವುದು ಕಂಡು ಬಂದಿತು.

ಇದನ್ನೂ ಓದಿ: ನಟಿ ಅಮೂಲ್ಯಗೆ ಚಾನ್ಸ್​ ಕೊಡಿಸ್ತೀನಿ ಅಂತ ಮಂಚಕ್ಕೆ ಕರೆದ ಯುವಕ.. ಆಮೇಲೇನಾಯ್ತು?

ಇದನ್ನೂ ಓದಿ: ಭವಾನಿ ರೇವಣ್ಣಗೂ ಕಾದಿದೆಯಾ ಸಂಕಷ್ಟ.. JDS ಮುಖಂಡರ ಜೊತೆ​ ಮಹತ್ವದ ಚರ್ಚೆ

ದೀಪಾಂಜಲಿ ನಗರ, ಮತ್ತಿಕೆರೆ, ಯಶವಂತಪುರ, ಹೆಬ್ಬಾಳ, ಟೌನ್ ಹಾಲ್, ಸುಧಾಮನಗರ, ಸುಬ್ಬಯ್ಯ ಸರ್ಲ್, ಕಾರ್ಪೋರೆಷನ್, ರಾಜಾಜಿನಗರ, ಮೆಜೆಸ್ಟಿಕ್, ಜೆ.ಸಿ ನಗರ, ಟ್ಯಾನರಿ ರಸ್ತೆ, ಕಮ್ಯನಹಳ್ಳಿ, ರೇಸ್​ಕೋರ್ಸ್, ಕೆ.ಆರ್ ಮಾರ್ಕೆಟ್ ಸುತ್ತಮುತ್ತ ದಿಢೀರ್ ಎಂದು ಮಳೆ ಆಗಮನವಾಗಿದೆ. ಹೀಗಾಗಿ ಸಂಜೆ ಸಮಯದಲ್ಲಿ ಅಂಗಡಿ, ಆಫೀಸ್​ನಿಂದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಬೈಕ್​ ಸವಾರರು, ವಾಹನ ಚಾಲಕರು ಹೈರಾಣಾಗಿದ್ದಾರೆ. ಮಳೆ ಜೊತೆ ಜೊತೆಗೆ ಜೋರು ಗಾಳಿ ಕೂಡ ಬೀಸುತ್ತಿದೆ. ಹೀಗಾಗಿ ತಂಪಾದ ವಾತಾವರಣದಿಂದ ಜನ ಚಿಲ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿಯಲ್ಲಿ ಧಾರಾಕಾರ ಮಳೆ.. ಆಲಿಕಲ್ಲು ಕೈಯಲ್ಲಿಡಿದು ಚಿಲ್ ಆದ ಜನ

https://newsfirstlive.com/wp-content/uploads/2024/05/BNG_RAINS.jpg

Load More