/newsfirstlive-kannada/media/post_attachments/wp-content/uploads/2025/05/Bengaluru-Rain-2.jpg)
ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರಿ ಮಳೆಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಬಿಟಿಎಂ ಲೇಔಟ್‌ನ ಎರಡನೇ ಹಂತದ ಎನ್.ಎಸ್ ಪಾಳ್ಯದಲ್ಲಿ ಇಂದು ಸಂಜೆ ಈ ದಾರುಣ ಘಟನೆ ನಡೆದಿದೆ. 63 ವರ್ಷದ ಮನಮೋಹನ್ ಕಾಮತ್ , 12 ವರ್ಷದ ದಿನೇಶ್ ಮೃತರು.
ಮನಮೋಹನ್ ಕಾಮತ್ ಹಾಗೂ ದಿನೇಶ್ ಎನ್.ಎಸ್ ಪಾಳ್ಯದ ಮಧುವನ್ ಅಪಾರ್ಟ್ಮೆಂಟ್‌ನಲ್ಲಿ ಇದ್ದರು. ಮಳೆ ನೀರಿನಿಂದ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ನಲ್ಲಿ ಕಂಪ್ಲೀಟ್ ಜಲಾವೃತ ಆಗಿತ್ತು. ಸಂಜೆ 6.30ಕ್ಕೆ ಇಬ್ಬರು ಮೋಟಾರ್ ಮೂಲಕ ಮಳೆ ನೀರು ತೆರವು ಮಾಡಲು ಹೋಗಿದ್ದರು.
/newsfirstlive-kannada/media/post_attachments/wp-content/uploads/2025/05/Bengaluru-Rain-1.jpg)
ಮೋಟಾರ್ ಮೂಲಕ ಮಳೆ ನೀರು ತೆರವು ಮಾಡುವಾಗ ಎಲೆಕ್ಟ್ರಿಕ್ ಶಾಕ್ ಹೊಡೆದು 63 ವರ್ಷದ ಮನಮೋಹನ್ ಕಾಮತ್, 12 ವರ್ಷದ ದಿನೇಶ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಮಳೆಯ ಆರ್ಭಟ; ಮೃತ ಮಹಿಳೆಗೆ ₹5 ಲಕ್ಷ ಪರಿಹಾರ ಘೋಷಣೆ
ಮಂಗಳೂರು ಮೂಲದ ಮನಮೋಹನ್ ಕಾಮತ್ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಇದ್ದರು. ನೇಪಾಳ ಮೂಲದ ಭರತ್ ಅವರ ಮಗ ದಿನೇಶ್ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದರು.
ಘಟನಾ ಸ್ಥಳಕ್ಕೆ ಮೈಕೋ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾರ್ಟ್‌ಮೆಂಟ್‌ಗೆ ಪವರ್ ಕಟ್ ಮಾಡಲಾಗದ್ದು, ಬ್ಯಾರಿಕೇಡ್ ಕೂಡ ಹಾಕಲಾಗಿದೆ. ಇಬ್ಬರ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us