newsfirstkannada.com

ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೂ ಶಿವಮೊಗ್ಗ ಟ್ರಯಲ್ ಸ್ಫೋಟ ಪ್ರಕರಣಕ್ಕೂ ಲಿಂಕ್ ಇದ್ಯಾ?

Share :

Published March 15, 2024 at 3:55pm

    ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್‌ನಲ್ಲಿ ಮುಂದುವರಿದ ವಿಚಾರಣೆ

    ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ NIA ವಶಕ್ಕೆ

    7 ದಿನಗಳ ಕಾಲ ಎನ್‌ಐಎ ಅಧಿಕಾರಿಗಳ ಕಸ್ಟಡಿಗೆ ಮಾಜ್ ಮುನೀರ್‌

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಓರ್ವ ಶಂಕಿತನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಾಡಿ ವಾರೆಂಟ್ ಆಧಾರದ ಮೇಲೆ ಮಾಜ್ ಮುನೀರ್​ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನು ಓದಿ: ರಾಮೇಶ್ವರಂ ಕೆಫೆಗೆ ಬಂದು ‘ಟೈಮರ್’ ಇಟ್ಟ ಟೋಪಿವಾಲಾ.. ಸಿಸಿಟಿವಿಯ ಮತ್ತಷ್ಟು ಸ್ಫೋಟಕ ದೃಶ್ಯ ಬಯಲು

ಈ ಮಾಜ್ ಮುನೀರ್ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್​​ನಲ್ಲಿ ಪ್ರಮುಖ ಬಂಧಿತ ಆರೋಪಿಯಾಗಿದ್ದ. ಟ್ರಯಲ್​​ ಬ್ಲಾಸ್ಟ್​​ ಕೇಸ್​ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಸದ್ಯ ಎನ್​ಐಎ ಅಧಿಕಾರಿಗಳು ಬಾಡಿ ವಾರೆಂಟ್ ಆಧಾರದ ಮೇಲೆ ಇತನ್ನನು 7 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಮಾಜ್ ಮುನೀರ್ ಶಿವಮೊಗ್ಗದ ತೀರ್ಥಹಳ್ಳಿ ನಿವಾಸಿ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ?

ಕಳೆದ ಮಾರ್ಚ್ 1ರಂದು ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿ ಬೆಳಗ್ಗೆ 10.43ಕ್ಕೆ ಬಿಎಂಟಿಸಿ ಬಸ್​ನಿಂದ ಇಳಿದಿದ್ದ. ಬಸ್​​ನಿಂದ ಇಳಿಯುತ್ತಿದ್ದಂತೆ ತಾನು ತಂದಿದ್ದ ಬ್ಯಾಗ್​ನಲ್ಲಿದ್ದ ಬಾಂಬ್​ಗೆ ಟೈಮರ್ ಫಿಕ್ಸ್ ಮಾಡಿದ್ದ. ಬಳಿಕ 11.34ಕ್ಕೆ ರಾಮೇಶ್ವರಂ ಕೆಫೆಯೊಳಗೆ ಶಂಕಿತ ಎಂಟ್ರಿ ಕೊಟ್ಟಿದ್ದ. ಇನ್ನೂ ಶಂಕಿತನು ಕೆಫೆಯೊಳಗೆ ಹೋಗುತ್ತಿದ್ದಾಗ ಕೈಯಲ್ಲಿ ಗ್ಲೌಸ್ ಧರಿಸಿಕೊಂಡು ಬಂದಿದ್ದ. ಬಳಿಕ 11.43ಕ್ಕೆ ಕೆಫೆಯಿಂದ ಹೊರಗಡೆ ಹೋಗಿದ್ದ. ಜಸ್ಟ್​ 10 ನಿಮಿಷದಲ್ಲಿ ಆರೋಪಿಯೂ ರವೆ ಇಡ್ಲಿ ತಿಂದು ಕೆಫೆಯಿಂದ ಎಸ್ಕೇಪ್​ ಆಗಿದ್ದ. ಶಂಕಿತನು ಕೆಫೆಯಿಂದ ಎಸ್ಕೇಪ್​ ಆದ ಬಳಿಕ 12 ಗಂಟೆ 55 ನಿಮಿಷಯಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಗೊಂಡಿತ್ತು. ಈ ಬಾಂಬ್​ ಸ್ಫೋಟದಿಂದ 9 ಜನ ಗಾಯಗೊಂಡಿದ್ದರು. ಸದ್ಯ ಈ ಕೇಸ್​ ಸಂಬಂಧ ಬಾಡಿ ವಾರೆಂಟ್ ಆಧಾರದ ಮೇಲೆ ಮಾಜ್ ಮುನೀರ್​ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೂ ಶಿವಮೊಗ್ಗ ಟ್ರಯಲ್ ಸ್ಫೋಟ ಪ್ರಕರಣಕ್ಕೂ ಲಿಂಕ್ ಇದ್ಯಾ?

https://newsfirstlive.com/wp-content/uploads/2024/03/rameshwaram-case.jpg

Load More