newsfirstkannada.com

ರಾಮೇಶ್ವರಂ ಕೆಫೆ ಕೇಸ್​​; RSS ಮುಖಂಡನ ಕೊಲೆ ಪ್ರಕರಣದ ಆರೋಪಿ ಕಸ್ಟಡಿಗೆ, ತೀವ್ರ​ ವಿಚಾರಣೆ ​

Share :

Published March 21, 2024 at 7:17am

Update March 21, 2024 at 7:18am

    ತಮಿಳುನಾಡು, ಕೇರಳದ ಹೈಪ್ರೊಫೈಲ್ ಆರೋಪಿಗಳು ಕಸ್ಟಡಿಗೆ

    ತಮಿಳುನಾಡಿನಲ್ಲಿ ನಾಲ್ವರು, ಕೇರಳದಲ್ಲಿ ಓರ್ವ, ಒಟ್ಟು ಐವರು ವಶಕ್ಕೆ

    2022ರಲ್ಲಿ ಕೊಯಮತ್ತೂರಿನ ಕಾರು ಬಾಂಬ್ ಸ್ಫೋಟದ ಆರೋಪಿಗಳು

ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಬ್ಲಾಸ್ಟ್​ ಆಗಿ ಇವತ್ತಿಗೆ 20 ದಿನವಾದ್ರೂ ಇನ್ನೂ ಆರೋಪಿ ಪತ್ತೆ ಆಗಿಲ್ಲ. ಬಾಂಬರ್​ ಜಾಡು ಹಿಡಿದು ಹೊರಟ ಎನ್​ಐಎ ತಂಡ ರಾಜ್ಯದ ನಾನಾ ಮೂಲೆಗಳಲ್ಲಿ ಜಾಲಾಡುತ್ತಿದೆ. ಈ ನಡುವೆ ಎನ್​ಐಎ ತಂಡ ತನಿಖೆಯ ಹಾದಿ ಬದಲಿಸಿದ್ದು, ಇದೀಗ ತಮಿಳುನಾಡು.. ಕೇರಳದ ಕಡೆ ಹೊರಟಿದೆ.

ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್​ನಲ್ಲಿ ಎನ್​ಐಎ ತನಿಖೆ ಚುರುಕು
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಸಂಚಲನ ಮೂಡಿಸಿದೆ. ಆರೋಪಿಯ ಸೆರೆ ಹಿಡಿಯಲು ಎನ್​ಐಎ ತನಿಖಾ ತಂಡ ದಶದಿಕ್ಕುಗಳಲ್ಲೂ ಬಲೆ ಬೀಸಿದೆ. ಒಂದಲ್ಲಾ, ಎರಡಲ್ಲಾ.. 110 ಆಯಾಮಗಳಲ್ಲಿ ತನಿಖೆ ಚುರುಕು ಮಾಡಿರೋ ಎನ್​ಐಎ ಇದೀಗ ನೆರೆ ರಾಜ್ಯ ತಮಿಳುನಾಡು.. ಕೇರಳದಲ್ಲೂ ತನಿಖೆಗೆ ಇಳಿದಿದೆ. ಹೈ-ಪ್ರೊಫೈಲ್​ ಕೇಸ್​ನ ಆರೋಪಿಗಳನ್ನು ಸದ್ಯ ಕಸ್ಟಡಿಗೆ ಕೇಳಿದೆ.

ಬೆಂಗಳೂರಿನಲ್ಲಿ ಮಾರ್ಚ್ 1ರಂದು ಬ್ರೂಕ್ ಫೀಲ್ಡ್​ನ ರಾಮೇಶ್ವರ ಕೆಫೆ ಸ್ಫೋಟ‌ ಸಂಭವಿಸಿತ್ತು. ಈ ಕೇಸ್​ನ ಶಂಕಿತ ಆರೋಪಿಗೆ ತಮಿಳುನಾಡು ಹಾಗೂ ಕೇರಳದ ಟ್ರಾವೆಲ್ ಹಿಸ್ಟರಿ ಕಂಡುಬಂದ ಹಿನ್ನೆಲೆಯಲ್ಲಿ ಹೊರ ರಾಜ್ಯದಲ್ಲೂ ತನಿಖೆ ತೀವ್ರಗೊಂಡಿದೆ. ಪ್ರಕರಣ ಸಂಬಂಧ ತನಿಖೆ ಜವಾಬ್ದಾರಿ ವಹಿಸಿಕೊಂಡಿರುವ ಬೆಂಗಳೂರಿನ ಎನ್ಐಎ ಅಧಿಕಾರಿಗಳು.. ಸದ್ಯ ತಮಿಳುನಾಡು ಹಾಗೂ ಕೇರಳದ ಎನ್ಐಎ ವಿಭಾಗದ ಅಧಿಕಾರಿಗಳಿಗೆ ಕೆಲ ಮಾಹಿತಿ ನೀಡಿ ಅನುಮಾನ ಮೇರೆಗೆ ಕೆಲವರನ್ನ ಕಸ್ಟಡಿಗೆ ಪಡೆದು. ವಿಚಾರಣೆಗೆ ಮುಂದಾಗಿದ್ದಾರೆ.

ತಮಿಳುನಾಡಿನಲ್ಲಿ ನಾಲ್ವರು, ಕೇರಳದಲ್ಲಿ ಓರ್ವ ಸೇರಿ ಒಟ್ಟು ಐವರನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 2022ರಲ್ಲಿ ಕೊಯಮತ್ತೂರಿನ ಕಾರು ಬಾಂಬ್ ಸ್ಫೋಟ ನಡೆದಿತ್ತು. ಅದರ ಆರೋಪಿಗಳಾದ ಜಮೀಲ್ ಪಾಷಾ ಉಮ್ರಿ, ಮೊಹಮ್ಮದ್ ಹುಸೇನ್, ಇರ್ಷತ್, ಸೈಯದ್ ಅಬ್ದುಲ್ ರೆಹಮಾನ್​ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಿದೆ. ಕೇರಳದ‌ ಪಾಲಕ್ಕಾಡ್​ನಲ್ಲಿ ನಡೆದ RSS ಮುಖಂಡನ ಹತ್ಯೆ ಕೇಸ್​ ಆರೋಪಿ ಶಫಿಕ್​ನನ್ನು ಕೇರಳ ವಿಭಾಗದ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ಪ್ರತ್ಯೇಕ ವಿಚಾರಣೆ ನಡೆಸುತ್ತಿದ್ದಾರೆ. ಮಾರ್ಚ್ 28ರವರೆಗೆ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್​ ಆರೋಪಿ ನ್ಯಾಯಾಂಗ ಬಂಧನಕ್ಕೆ
ಇತ್ತ ಶಿವಮೊಗ್ಗ ಜಿಲ್ಲೆಯಲ್ಲಿ ಟ್ರಯಲ್‌ ಬ್ಲಾಸ್ಟ್ ಕೇಸ್ ಆರೋಪಿಯಾಗಿರುವ ತೀರ್ಥಹಳ್ಳಿ ಮೂಲದ ಮಾಜ್ ಮುನೀರ್​ನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಒಟ್ಟು ಏಳು ದಿನಗಳ ಕಾಲ ವಿಚಾರಣೆ ನಡೆಸಿದ್ದು, ಈ ವೇಳೆ ಮಹತ್ವದ ಮಾಹಿತಿಗಳು ಸಿಕ್ಕಿವೆ. ಸದ್ಯ ಆತನ ಪೊಲೀಸ್ ಕಸ್ಟಡಿ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಮಾಜ್ ಮುನೀರ್​ನನ್ನ ಎನ್ಐಎ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಹಾಜಪಡಿಸಿದ್ರು. ಸದ್ಯ ಆತನನ್ನು ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಒಟ್ಟಾರೆ. ಪೊಲೀಸರಿಗೆ ಚಾಲೆಂಜ್​ ಆಗಿರುವ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಆರೋಪಿ ಪತ್ತೆಗೆ ತೀವ್ರ ತನಿಖೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಕೇಸ್​​; RSS ಮುಖಂಡನ ಕೊಲೆ ಪ್ರಕರಣದ ಆರೋಪಿ ಕಸ್ಟಡಿಗೆ, ತೀವ್ರ​ ವಿಚಾರಣೆ ​

https://newsfirstlive.com/wp-content/uploads/2024/03/Rameshwaram-Cafe-Bomber.jpg

Load More