newsfirstkannada.com

BREAKING: ಬೆಂಗಳೂರಲ್ಲಿ ಖ್ಯಾತ ತೆಲುಗು ನಟಿ ಹೇಮಾ ಬಂಧನ

Share :

Published June 3, 2024 at 5:32pm

Update June 3, 2024 at 5:39pm

    ಹೇಮಾ ಮೇಲೆ ರೇವ್ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ್ದ ಆರೋಪ

    ಡ್ರಗ್ಸ್ ಪಾರ್ಟಿ ಆಯೋಜನೆಯಲ್ಲಿ ನಟಿ ಹೇಮಾ ಪ್ರಮುಖ ಪಾತ್ರ ವಹಿಸಿದ್ರಾ?

    ಎರಡು ಬಾರಿ ನೋಟಿಸ್ ನೀಡಿದ್ದರು ಹಾಜರಾಗದ ಹೇಮಾಗೆ ಬಿಗ್ ಶಾಕ್‌!

ಬೆಂಗಳೂರು ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಕೇಸ್‌ನಲ್ಲಿ ತೆಲುಗು ನಟಿ ಹೇಮಾ ಅವರಿಗೆ ಸಂಕಷ್ಟ ಎದುರಾಗಿದೆ. ರೇವ್ ಪಾರ್ಟಿ ವೇಳೆ ಮಾದಕ ವಸ್ತು ಸೇವಿಸಿದ್ದ ಆರೋಪದಲ್ಲಿ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ.

ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ ಅವರ ರಕ್ತ ಪರೀಕ್ಷೆ ಮಾಡಲಾಗಿತ್ತು. ರಕ್ತ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನಟಿ ಹೇಮಾ ಅವರಿಗೆ ನೋಟಿಸ್ ನೀಡಿತ್ತು.

ಸಿಸಿಬಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ ಅವರು ಇಂದು ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ನಟಿ ಹೇಮಾ ಅವರನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಇದನ್ನೂ ಓದಿ: ರೇವ್ ಪಾರ್ಟಿಯಿಂದ ನಟಿ ಹೇಮಾ ಭವಿಷ್ಯದ ಮೇಲೆ ಕರಿನೆರಳು.. ಟಾಲಿವುಡ್​​ನಿಂದ ಹೊರಬಿತ್ತು ಶಾಕಿಂಗ್ ನ್ಯೂಸ್..! 

ನಟಿ ಹೇಮಾ ಅವರ ಮೇಲೆ ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಪೊಲೀಸರು ರೇಡ್ ಮಾಡಿದ್ದ ವೇಳೆ ವಿಡಿಯೋ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಿದ್ದ ಪ್ರಕರಣ ದಾಖಲಾಗಿದೆ. ಅದೂ ಅಲ್ಲದೇ ಡ್ರಗ್ಸ್ ಸೇವನೆ ಮಾಡಿದ್ದಕ್ಕೆ ರಕ್ತ ಪರೀಕ್ಷೆಯಲ್ಲಿ ರಿಪೋರ್ಟ್ ಪಾಸಿಟಿವ್ ಬಂದಿತ್ತು.

ಇದನ್ನೂ ಓದಿ: 10ನೇ ಮಹಡಿಯಿಂದ ಜಿಗಿದು IAS ಆಫೀಸರ್​ ಮಗಳು ಅನುಮಾನಾಸ್ಪದ ಸಾವು.. ಕಾರಣವೇನು? 

ರೇವ್ ಪಾರ್ಟಿ ಪ್ರಕರಣದಲ್ಲಿ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ನಟಿ ಹೇಮಾ ಅವರಿಗೆ ಎರಡು ನೋಟಿಸ್ ನೀಡಿದ್ದರು. ಈ ನೋಟಿಸ್ ನೀಡಿದ ಮೇಲೂ ಹೇಮಾ ಅವರು ಪೊಲೀಸರ ತನಿಖೆಗೆ ಹಾಜರಾಗಿರಲಿಲ್ಲ. ಇಂದು ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ನಟಿ ಹೇಮಾಗೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ವಿಚಾರಣೆ ಬಳಿಕ ಸಿಸಿಬಿ ಪೊಲೀಸರು ನಟಿ ಹೇಮಾ ಅವರನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಬೆಂಗಳೂರಲ್ಲಿ ಖ್ಯಾತ ತೆಲುಗು ನಟಿ ಹೇಮಾ ಬಂಧನ

https://newsfirstlive.com/wp-content/uploads/2024/05/Hema.jpg

Load More