newsfirstkannada.com

ಬೆಂಗಳೂರಲ್ಲಿ ರೇವ್ ಪಾರ್ಟಿ.. ನಮಗೆ ನಿದ್ದೆ ಮಾಡಲು ಇನ್ನೂ ಟೈಂ ಬೇಕೆಂದು ಪೊಲೀಸ್ರಿಗೇ ಆವಾಜ್ ಹಾಕಿದ್ರಂತೆ ನಟಿಯರು

Share :

Published May 20, 2024 at 10:52am

Update May 20, 2024 at 11:13am

    ನಶೆಯಿಂದ ಇನ್ನೂ ಏದ್ದೇಳದ ನಟಿಯರು ಮತ್ತು ಮಾಡೆಲ್ಸ್​

    ನಮಗೆ ನಿದ್ದೆ ಮಾಡಲು ಸಮಯ ಬೇಕು ಎಂದು ಪೊಲೀಸರಿಗೆ ಅವಾಜ್​

    ಪಾರ್ಟಿಯಲ್ಲಿ ಎಂಡಿಎಂಎ, ಕೊಕೇನ್ ಸೇರಿ ಹಲವು ಬಗೆಯ ಮಾದಕ ವಸ್ತುಗಳು ಪತ್ತೆ

ಬೆಂಗಳೂರು: ಜಿಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು ಸೇರಿ ಐವರು ಅರೆಸ್ಟ್ ಮಾಡಿದ್ದಾರೆ.

ಐವರು ಅರೆಸ್ಟ್​

ಪಾರ್ಟಿಯಲ್ಲೇ ಇದ್ದ ಮೂವರು ಡ್ರಗ್ ಪೆಡ್ಲರ್ಸನ್ನು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಫಾರ್ಮ್ ಹೌಸ್ ನಲ್ಲಿ 45 ಗ್ರಾಂ ಡ್ರಗ್ಸ್ ಪತ್ತೆಯಾಗಿದೆ. ಎಂಡಿಎಂಎ, ಕೊಕೇನ್ ಸೇರಿ ಹಲವು ಬಗೆಯ ಮಾದಕ ವಸ್ತು ಪೊಲೀಸರಿಗೆ ಸಿಕ್ಕಿದೆ.

ಪಾರ್ಟಿಯಲ್ಲಿ ಕಿರುತೆರೆ ಕಲಾವಿದರು

ಪೊಲೀಸ್ ದಾಳಿ ವೇಳೆ ರೇವ್ ಪಾರ್ಟಿಯಲ್ಲಿರೋ 25 ಕ್ಕೂ ಹೆಚ್ಚು ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಕೆಲವರು ತೆಲುಗು ಸಿನಿರಂಗದ ಕಿರುತೆರೆ ಕಲಾವಿದರು ಹಾಗೂ ಮಾಡಲ್ಸ್​ಗಳು ಕಾಣಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರಿಗೆ ನಟಿಯರ ಅವಾಜ್​

ಇನ್ನು ಕೆಲವು ಕಿರುತೆರೆ ನಟಿಯರು ಮತ್ತು ಮಾಡಲ್​ ನಶೆಯಲ್ಲಿರೆವುದು ಪೊಲೀಸರಿಗೆ ಕಂಡುಬಂದಿದೆ. ನಮಗೆ ನಿದ್ದೆ ಮಾಡಲು ಸಮಯ ಬೇಕಿದೆ. ನಮಗೆ ತೊಂದರೆ ಮಾಡಬೇಡಿ ಎಂದು ಹೇಳುತ್ತಾ ಅವಾಜ್ ಹಾಖಿದ ಘಟನೆಯೂ ನಡೆದಿದೆ.

ಇದನ್ನೂ ಓದಿ: ಬೆಂಗಳೂರು: ರೇವ್​ ಪಾರ್ಟಿಯಲ್ಲಿ ಸಿಸಿಬಿಗೆ ಕಂಡ ಕಿರುತೆರೆ ಮತ್ತು ಸಿನಿಮಾ ನಟಿಯರು! ಯಾರೆಲ್ಲಾ ಇದ್ದರು ಗೊತ್ತಾ?

ಪೊಲೀಸರ ವಶದಲ್ಲಿ 80ಕ್ಕೂ ಹೆಚ್ಚು ಜನರು

ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 50 ಕ್ಕೂ ಹೆಚ್ಚು ಜನ ಪೊಲೀಸರಿಂದ ದಾಳಿ ಮುಂದುವರೆದಿದೆ. ಮಾಹಿತಿಂದತೆ, 25 ಕ್ಕೂ ಹೆಚ್ಚು ಯುವತಿಯರು 45 ಕ್ಕೂ ಹೆಚ್ಚು ಮಂದಿ ಯುವಕರು ಸೇರಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಒಟ್ಟು 80ಕ್ಕೂ ಜನರನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಎಲ್ಲರಿಗೂ ಕೆಲವೇ ಕ್ಷಣಗಳಲ್ಲಿ ಮೆಡಿಕಲ್ ಟೆಸ್ಟ್ ಗೆ ಕರೆದೊಯ್ಯಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಾದಕ ವಸ್ತುಗಳ ಜೊತೆಗೆ ರೇವ್​ ಪಾರ್ಟಿ! MLA ಪಾಸ್​ ಕೂಡ ಪತ್ತೆ! ಯಾರವರು ಗೊತ್ತಾ?

ನಿದ್ರೆಯಿಂದ ಇನ್ನು ಎದ್ದಿಲ್ಲ

ಸಿಸಿಬಿ ಪೊಲೀಸರು ತಡರಾತ್ರಿ 2:30 ರ ಸುಮಾರಿಗೆ ದಾಳಿ ಮಾಡಿದ್ದಾರೆ. ನಿನ್ನೆ ಸಂಜೆ ಐದರಿಂದ ರೇವ್ ಪಾರ್ಟಿ ಪ್ರಾರಂಭವಾಗಿದೆ. ಪೊಲೀಸರ ದಾಳಿ ಮಾಡೋ ವೇಳೆಗೆ ಕೆಲ ಮಾಡೆಲ್ಸ್ ಹಾಗೂ ನಟಿಯರು ನಿದ್ರೆಗೆ ಜಾರಿದ್ದರು. ಇನ್ನು ಕೆಲವರು ನಿದ್ರೆಯಿಂದ ಎದ್ದಿಲ್ಲ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ರೇವ್ ಪಾರ್ಟಿ.. ನಮಗೆ ನಿದ್ದೆ ಮಾಡಲು ಇನ್ನೂ ಟೈಂ ಬೇಕೆಂದು ಪೊಲೀಸ್ರಿಗೇ ಆವಾಜ್ ಹಾಕಿದ್ರಂತೆ ನಟಿಯರು

https://newsfirstlive.com/wp-content/uploads/2024/05/rev-party-5.jpg

Load More