/newsfirstlive-kannada/media/post_attachments/wp-content/uploads/2024/12/BANGALORE-COLD.jpg)
ಬೆಂಗಳೂರು ಈ ಹಿಂದೆಂದೂ ಕಾಣದಂತಹ ಭೀಕರ ಕೊರೆಯುವ ಚಳಿಯನ್ನ ಈ ಡಿಸೆಂಬರ್​ನಲ್ಲಿ ಅನುಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 2011ರ ಬಳಿಕ ಈ ಮಟ್ಟದ ತಾಪಮಾನದ ಇಳಿಕೆಯನ್ನು ಕಾಣಲಿದೆ ಎಂದು ಹೇಳಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಹೇಳುವ ಪ್ರಕಾರ ಬೆಂಗಳೂರಿನ ತಾಪಮಾನ ಮಂಗಳವಾರದಿಂದು ಸುಮಾರು 12.4 ಡಿಗ್ರಿ ಸೆಲ್ಸಿಯಸ್​ಗೆ ಇಳಿಯಲಿದೆ ಎಂದು ಹೇಳಿದೆ. ಇದು ಕಳೆದ 14 ವರ್ಷಗಳ ಹಿಂದಿನ ದಾಖಲೆಯನ್ನೇ ಮುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿಂದೆ 2011 ಡಿಸೆಂಬರನಲ್ಲಿ ಬೆಂಗಳೂರು 12.8 ಡಿಗ್ರಿ ಸೆಲ್ಸಿಯಸ್​ ತಾಪಮಾನವನ್ನು ಅನುಭವಿಸಿತ್ತು. ಈಗ ರಾತ್ರಿ ವೇಳೆ 12.4 ಡಿಗ್ರಿಸೆಲ್ಸಿಯಸ್ ಇರಲಿದ್ದ ಸಾಧಾರಣ ಸಮಯದಲ್ಲಿ ತಾಪಮಾನದ ಪ್ರಮಾಣ 15.5 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಲಾಗಿದೆ. ಆದರೆ ಏರ್​ಪೋರ್ಟ್ ಸುತ್ತಮುತ್ತ ತಾಪಮಾನದ ಪ್ರಮಾಣ 14.7 ಮತ್ತ ಏರ್​ಪೋರ್ಟ್​ನಲ್ಲಿ 14.5ರಷ್ಟು ಇರಲಿದೆ.
ಇದನ್ನೂ ಓದಿ: 113 ವರ್ಷದ ಸಾಲು ಮರದ ತಿಮ್ಮಕ್ಕನ ಆರೋಗ್ಯ ಸ್ಥಿತಿ ಗಂಭೀರ; ಏನಂದ್ರು ಪುತ್ರ ಉಮೇಶ್​?
ಹವಾಮಾನ ಇಲಾಖೆ ಹೇಳುವ ಪ್ರಕಾರ ಮುಂದಿನ ದಿನಗಳಲ್ಲಿ ಸ್ವಚ್ಛ ಆಕಾಶವಿದ್ದು ಮಂಜು ಮುಸುಕಿದ ವಾತಾವರಣವು ಬೆಂಗಳೂರಿನಲ್ಲಿ ಅಲ್ಲಲ್ಲಿ ಕಾಣಲಿದೆ. ಅದರಲ್ಲೂ ಮುಂಜಾನೆ ವೇಳೆ ಮಂಜು ಬೀಳಲಿದ್ದು ಚಳಿಯ ಅನುಭವ ಇದಕ್ಕಿಂತ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ರಾತ್ರಿ ವೇಳೆ 16 ಡಿಗ್ರಿಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us