ಮಹಾ ಕುಂಭಮೇಳ ಕೇವಲ ಒಂದು ಉತ್ಸವವಲ್ಲ; ಇದರ ಆದಾಯ ಬರೋಬ್ಬರಿ 25,000 ಕೋಟಿ!

author-image
Gopal Kulkarni
Updated On
ಮಹಾ ಕುಂಭಮೇಳ ಕೇವಲ ಒಂದು ಉತ್ಸವವಲ್ಲ; ಇದರ ಆದಾಯ ಬರೋಬ್ಬರಿ 25,000 ಕೋಟಿ!
Advertisment
  • 2025ರ ಮಹಾಕುಂಭಮೇಳಕ್ಕೆ ಖರ್ಚಾಗುತ್ತಿರುವುದು ಎಷ್ಟು ಕೋಟಿ?
  • ಈ ಬಾರಿಯ ಮಹಾಕುಂಭಮೇಳ ತಂದು ಕೊಡುವ ಆದಾಯ ಎಷ್ಟು?
  • ಒಬ್ಬ ಯಾತ್ರಿಕ 8 ಸಾವಿರ ರೂಪಾಯಿ ಖರ್ಚು ಮಾಡಿದರೆ ಲಾಭ ಎಷ್ಟು?

ಈ ಬಾರಿಯ ಮಹಾಕುಂಭಮೇಳಕ್ಕೆ ದಿನಗಣನೆ ಶುರುವಾಗಿದೆ. ಇದು ಕೇವಲ ಒಂದು ಆಧ್ಯಾತ್ಮಿ, ಭಕ್ತಿಯ ಕಾರ್ಯಕ್ರಮವಾಗಿದೇ ಉತ್ತರಪ್ರದೇಶದ ಆರ್ಥಿಕತೆಯೂ ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿದೆ ಲಾಭ ನಷ್ಟಗಳ ಲೆಕ್ಕಾಚಾರ ನಡೆಯುತ್ತಿದೆ. 1882 ರಿಂದಲೂ ಕುಂಭಮೇಳ ನಡೆಯುತ್ತಲೇ ಬಂದಿದೆ. ಆವಾಗ ಕುಂಭಮೇಳಕ್ಕೆ ಸುಮಾರು 20,228 ರೂಪಾಯಿಯಷ್ಟು ವೆಚ್ಚವಾಗಲಿದ್ದು. ಇದರಿಂದ 49,840 ರೂಪಾಯಿ ರೆವಿನ್ಯೂ ಬಂದಿತ್ತು ಒಟ್ಟು 29 ಸಾವಿರ ಕೋಟಿ ರೂಪಾಯಿ ಲಾಭವಾಗಿತ್ತು. ಅದೆ ಪರಂಪರೆ ಈಗಲೂ ಕೂಡ ಮುಂದುವರಿಯಲಿದೆ ಈ ಬಾರಿ ಒಟ್ಟು 25 ಸಾವಿರ ಕೋಟಿ ರೂಪಾಯಿ ಲಾಭಗಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಈಗಾಗಲೇ 4 ಸಾವಿರ ಹೆಕ್ಟರ್ ಪ್ರದೇಶವನ್ನು ಗುರುತಿಸಲಾಗಿದೆ. ಈ ಬಾರಿಯ ಮಹಾಕುಂಭಮೇಳದಲ್ಲಿ 40 ರಿಂದ 45 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಇದು ವಿಶ್ವದಲ್ಲಿ ಒಂದೇ ಕಡೆ ಅತಿಹೆಚ್ಚು ಜನರು ಸೇರುವ ಒಂದು ಆಧ್ಯಾತ್ಮಿಕ ಕಾರ್ಯವಾಗಿದೆ. ಇದರ ಬಜೆಟ್​ ಒಟ್ಟು 6382 ಕೋಟಿ ರೂಪಾಯಿಯಷ್ಟು ಇದೆ. ಈಗಅಗಲೇ 5600 ಕೋಟಿ ರೂಪಾಯಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಅಲಾಟ್ ಮಾಡಲಾಗಿದೆ. ಸರ್ಕಾರ ಸುಮಾರು 3,700 ಕೋಟಿ ರೂಪಾಯಿಯನ್ನು ಈ ಹಿಂದೆ 2019ರಲ್ಲಿ ನಡೆದ ಕುಂಭಮೇಳಕ್ಕೆ ನೀಡಿತ್ತು.

ಇದನ್ನೂ ಓದಿ: ಗುಡ್​ನ್ಯೂಸ್; 2025 ರಿಂದ ಈ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾ ಬೇಕಿಲ್ಲ! ಯಾವ ರಾಷ್ಟ್ರ ಗೊತ್ತಾ?

ಈ ಬಾರಿಯ ಮಹಾಕುಂಭಮೇಳವನ್ನು ಬಹಳ ಲೆಕ್ಕಾಚಾರ ಹಾಕಿ ನಡೆಸಲಾಗುತ್ತಿದೆ. ಕುಂಭಮೇಳಕ್ಕೆ ಬರುವ ಒಬ್ಬ ಯಾತ್ರಿಕ ಸುಮಾರು 8 ಸಾವಿರ ರೂಪಾಯಿಯನ್ನು ಖರ್ಚು ಮಾಡಿದರೆ ಒಟ್ಉ 3.2 ಲಕ್ಷ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆಯಿದೆ ಪ್ರಯಾಗರಾಜ್ ಮಾತ್ರವಲ್ಲ ಅಕ್ಕಪಕ್ಕದಲ್ಲಿರುವ ಧಾರ್ಮಿಕ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯ, ಮಥುರಾ ಮತ್ತು ವಿಧ್ಯಾವಾಸಿನಿ ಧಾಮಕ್ಕೂ ಕೂಡ ಸಾವಿರಾರು ಭಕ್ತರು ಭೇಟಿ ಕೊಡಲಿದ್ದಾರೆ. ಈಗಾಗಳೇ 45ಸಾವಿರ ಕುಟುಂಬಗಳು ಈ ಮಹಾಕುಂಭಮೇಳದಿಂದ ಉದ್ಯೋಗ ಪಡೆದುಕೊಂಡಿವೆ. ಒಂದು ಮೂಲಗಳ ಪ್ರಕಾರ ಆರು ತಿಂಗಳಿಗೆ ಹರಿದು ಬರುವ ಬಂಡವಾಳವನ್ನು ಈ ಒಂದೇ ಒಂದು ಕುಂಭಮೇಳದಿಂದ ಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment