/newsfirstlive-kannada/media/post_attachments/wp-content/uploads/2025/06/RCB-FAN.jpg)
ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ನೂಕು ನುಗ್ಗಲು ಉಂಟಾಗಿ 11 ಮಂದಿ ಸಾವನ್ನಪ್ಪಿರೋ ದಾರುಣ ಘಟನೆ ನಡೆದಿದೆ. ಆರ್ಸಿಬಿ ಆಟಗಾರರನ್ನ, ಟ್ರೋಫಿಯನ್ನ, ಕಣ್ತುಂಬಿಕೊಳ್ಳೋಕೆ ಬಂದಿದ್ದ ಫ್ಯಾನ್ಸ್ ಸ್ಟೇಡಿಯಂ ಒಳಗೆ ನುಗ್ಗೋಕೆ ಯತ್ನಿಸಿದ್ರು. ವೇಳೆ ಕಾಲ್ತುಳಿತ ಸಂಭವಿಸಿ ದುರಂತ ನಡೆದಿದೆ. ಹಲವರು ಅಸ್ವಸ್ಥಗೊಂಡಿದ್ದು, ಸದ್ಯ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು
ದಿವ್ಯಾಂಶಿ (13), ದಿಯಾ (26), ಶರವಣ (21), ದೇವಿ, ಶಿವು (17), ಮನೋಜ್, ಭೂಮಿಕ್ (21), ಸಹನಾ, ಪೂರ್ಣಚಂದ್ರ (24) ಮೃತ ದುರ್ದೈವಿಗಳು. ಬೌರಿಂಗ್ ಆಸ್ಪತ್ರೆಯಲ್ಲಿ 6 ಮಂದಿ ಮೃತಪಟ್ಟಿದ್ದು, 24 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. 13 ವರ್ಷದ ದಿವ್ಯಾಂಶಿ, 26 ವರ್ಷದ ದಿಯಾ, 21 ವರ್ಷದ ಶರವಣ, ದೇವಿ, 17 ವರ್ಷದ ಶಿವು, ಮನೋಜ್ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೈದೇಹಿ ಆಸ್ಪತ್ರೆಯಲ್ಲಿ 4 ಮಂದಿ ಕೊನೆಯುಸಿರೆಳೆದಿದ್ದು, 12 ಮಂದಿಗೆ ಚಿಕಿತ್ಸೆ ನೀಡಲಾಗ್ತಿದೆ.
ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಸಿಎಂ ಭೇಟಿ..
ದುರಂತ ಸಂಭವಿಸಿದ ತಕ್ಷಣ ಕೆಲ ಗಾಯಾಳುಗಳನ್ನ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಈ ಪೈಕಿ ಓರ್ವ ಮಹಿಳೆ ಹಾಗೂ ಮೂವರು ಯುವಕರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವೈದೇಹಿ ಆಸ್ಪತ್ರೆಯ ವೈದ್ಯೆ ಎಂ.ಎಸ್ ಹುಮೇರಾ ತಿಳಿಸಿದ್ರು. ನಾಲ್ವರು ಕೂಡ ಆಸ್ಪತ್ರೆಗೆ ಕರೆತುರುವಾಗಲೇ ಸಾವನ್ನಪ್ಪಿದ್ದಾರೆ.. ಇನ್ನುಳಿದ 12 ಜನರಿಗೆ ಸಿಂಪಲ್ ಇಂಜುರಿಯಾಗಿದೆ ಎಂದು ಹುಮೆರಾ ಮಾಹಿತಿ ನೀಡಿದ್ದಾರೆ.
ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಸಂಭವಿಸಿ ಅಭಿಮಾನಿಗಳು ಸಾವನ್ನಪಿರೋ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನ ವಿಚಾರಿಸಿದ್ರು, ವೈದೇಹಿ, ಬೌರಿಂಗ್ ಆಸ್ಪತ್ರೆಗೆ ತೆರಳಿದ ಸಿಎಂ ಗಾಯಾಳುಗಳ ಆರೋಗ್ಯವನ್ನ ವಿಚಾರಿಸಿದ್ದಾರೆ. ಅಲ್ಲದೇ ಮೃತರಿಗೆ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ನೀಡೋದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಪ್ರಧಾನಿ ಮೋದಿ ಕಂಬನಿ.. ಟ್ವೀಟ್ ಮಾಡಿ ಏನಂದ್ರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ