newsfirstkannada.com

ಬರೋಬ್ಬರಿ 30 ಸಾವಿರ ರೂ.ಗೆ ಟ್ಯಾಕ್ಸಿ ಬುಕ್ಕಿಂಗ್‌; ಸುಚನಾ ಸೇಠ್ ಕೇಸ್‌ ಕೆದಕಿದಷ್ಟು ಭಯಾನಕ

Share :

Published January 9, 2024 at 6:05pm

    ಗೋವಾದಿಂದ ಬೆಂಗಳೂರಿಗೆ ಕ್ಯಾಬ್‌ ಬುಕ್‌ ಮಾಡಿದರೆ ದುಬಾರಿ

    ಬರೋಬ್ಬರಿ 30 ಸಾವಿರ ರೂ.ಗೆ ಟ್ಯಾಕ್ಸಿ ಬುಕ್ ಮಾಡಿದ ಸುಚನಾ

    ಮಧ್ಯರಾತ್ರಿ 1.30ರ ಸುಮಾರಿಗೆ ಹೋಟೆಲ್ ಖಾಲಿ ಮಾಡಿದ ತಾಯಿ

ಗೋವಾ ಹೋಟೆಲ್‌ನಲ್ಲಿ 4 ವರ್ಷದ ಮಗುವನ್ನ ಸಾಯಿಸಿದ ಬೆಂಗಳೂರು ಸ್ಟಾರ್ಟ್‌ ಅಪ್‌ ಸಿಇಒ ಸುಚನಾ ಸೇಠ್ ಪ್ರಕರಣದ ಮತ್ತಷ್ಟು ರೋಚಕ ಮಾಹಿತಿಗಳು ಬಯಲಾಗಿದೆ. ಕೊಲೆ ಆರೋಪಿಯನ್ನು ಚಿತ್ರದುರ್ಗ ಪೊಲೀಸರಿಂದ ವಶಕ್ಕೆ ಪಡೆದ ಗೋವಾ ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಸುಚನಾ ಸೇಠ್ ಅವರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ಸುಚನಾ ಸೇಠ್ ಅವರು ಪೊಲೀಸರಿಗೆ ಕೆಲವೊಂದು ಮಾಹಿತಿಯನ್ನು ನೀಡಿದ್ದಾರೆ. ಗಂಡನಿಂದ ಬೇರೆಯಾಗಿದ್ದ ಆರೋಪಿ ಮಹಿಳೆಯು ವಿಚ್ಛೇದನಕ್ಕೆ ಬಯಸಿದ್ದರು. ಈ ಕೇಸ್‌ ವಿಚಾರಣೆಯಲ್ಲಿ ನ್ಯಾಯಾಲಯ ಪತಿಗೆ ಪ್ರತಿ ವಾರ ಮಗನನ್ನು ವಿಡಿಯೋ ಕಾಲ್ ಮುಖಾಂತರ ಮಾತನಾಡಿಸಲು ಅವಕಾಶ ನೀಡಿತ್ತು. ಇದು ಸುಚನಾ ಸೇಠ್ ಅವರಿಗೆ ಇಷ್ಟವಿರಲಿಲ್ಲ. 4 ವರ್ಷದ ಮಗನನ್ನು ಕೊಲೆ ಮಾಡಲು ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ.

ಅಂದು ಮಧ್ಯರಾತ್ರಿ ನಡೆದಿದ್ದೇನು? 
ಕಳೆದ ಜನವರಿ 6 ರಂದು ಬೆಂಗಳೂರಿನ ಥಣಿಸಂದ್ರ ನಿವಾಸಿಯಾದ ಸುಚನಾ ಸೇಠ್ ಅವರು ಗೋವಾಕ್ಕೆ ಹೋಗಿದ್ದಾರೆ. ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಹೋಟೆಲ್‌ಗೆ ತೆರಳಿದ ಸುಚನಾ ಸೇಠ್ ಅವರು ತನ್ನ ಮಗನೊಂದಿಗೆ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾರೆ. ಜನವರಿ 7ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುಚನಾ ಸೇಠ್ ಅವರು ಹೋಟೆಲ್ ಸಿಬ್ಬಂದಿಗೆ ತಾನು ಚೆಕ್‌ ಔಟ್‌ ಮಾಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಾನು ಬೆಂಗಳೂರಿಗೆ ಹೋಗಬೇಕು ಒಂದು ಕ್ಯಾಬ್ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಲಗೇಜ್ ಬ್ಯಾಗ್‌ನಲ್ಲಿ ಮಗನ ಮೃತದೇಹ ಸಾಗಿಸಿದ ಮಹಾತಾಯಿ.. ಸುಚನಾ ಸೇಠ್ ಕೇಸ್‌ಗೆ ಹೊಸ ಟ್ವಿಸ್ಟ್‌!

ಗೋವಾದಿಂದ ಕ್ಯಾಬ್‌ ಕೇಳಿದ ಮಹಿಳೆಗೆ ಹೋಟೆಲ್ ಸಿಬ್ಬಂದಿ ಒಂದು ಸಲಹೆ ನೀಡಿದ್ದಾರೆ. ಇಲ್ಲಿಂದ ಬೆಂಗಳೂರಿಗೆ ಕ್ಯಾಬ್‌ ಬುಕ್‌ ಮಾಡಿದರೆ ದುಬಾರಿಯಾಗುತ್ತೆ. ವಿಮಾನದಲ್ಲಿ ಹೋಗುವಂತೆ ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸುಚನಾ ಸೇಠ್, ಎಷ್ಟೇ ದುಬಾರಿ ಆದರೂ ಕ್ಯಾಬ್ ಬುಕ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಕೊನೆಗೆ 30 ಸಾವಿರ ರೂಪಾಯಿಗೆ ಟ್ಯಾಕ್ಸಿ ಬುಕ್ ಮಾಡಲಾಗುತ್ತೆ. ಮಧ್ಯರಾತ್ರಿ 1.30ರ ಸುಮಾರಿಗೆ ಸುಚನಾ ಸೇಠ್ ಅವರು ಹೋಟೆಲ್‌ನಿಂದ ತನ್ನ ಲಗೇಜ್ ಬ್ಯಾಗ್‌ನ ಜೊತೆ ಚೆಕ್‌ಔಟ್ ಮಾಡಿದ್ದಾರೆ.

ಕ್ಯಾಬ್ ಚಾಲಕ ಸುಚನಾ ಸೇಠ್ ಅವರ ಲಗೇಜ್ ಬ್ಯಾಗ್‌ ಅನ್ನು ಕಾರಿನ ಒಳಗೆ ಇಡಲು ಸಹಾಯ ಮಾಡಿದ್ದಾನೆ. ಆಗ ಆ ಬ್ಯಾಗ್ ಅವನಿಗೆ ಹೆಚ್ಚು ಭಾರ ಇರೋ ಅನುಭವವಾಗಿದೆ. ಆದರೆ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಎಂದು ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹೋಟೆಲ್ ರೂಮ್‌ನಲ್ಲಿ ಕೆಲವು ರಕ್ತದ ಕಲೆಗಳು ಕಂಡು ಬಂದ ಮೇಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಇನ್ನು, ಸುಚನಾ ಸೇಠ್ ಅವರ ಮಾಜಿ ಪತಿ ವೆಂಕಟರಾಮನ್ ಅವರು ಇಂಡೋನೇಷಿಯಾದ ಜಕಾರ್ತ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಡೋನೇಷಿಯಾದಿಂದ ಅವರು ಭಾರತಕ್ಕೆ ಆಗಮಿಸಿದ್ದು, ಮಗುವಿನ ಅಂತಿಮ ವಿಧಿವಿಧಾನದಲ್ಲಿ ಭಾಗಿಯಾಗುತ್ತಿದ್ದಾರೆ. ತಂದೆ ವೆಂಕಟರಾಮನ್ ಬಂದ ಮೇಲೆ ಮೃತ ಮಗುವಿನ ಮರಣೋತ್ತರ ಪರೀಕ್ಷೆಗಳು ನೆರವೇರಲಿದೆ ಎನ್ನಲಾಗಿದೆ. ಇದಾದ ಬಳಿಕ ಗೋವಾ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಕಾರಣಗಳು ಬಯಲಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 30 ಸಾವಿರ ರೂ.ಗೆ ಟ್ಯಾಕ್ಸಿ ಬುಕ್ಕಿಂಗ್‌; ಸುಚನಾ ಸೇಠ್ ಕೇಸ್‌ ಕೆದಕಿದಷ್ಟು ಭಯಾನಕ

https://newsfirstlive.com/wp-content/uploads/2024/01/Suchita-Seth.jpg

Load More