/newsfirstlive-kannada/media/post_attachments/wp-content/uploads/2025/07/Sudarshan-Kamath1.jpg)
ಬೆಂಗಳೂರಿನ ಸ್ಟಾರ್ಟ್ ಅಪ್ ಒಂದು ನಿರುದ್ಯೋಗಿಗಳಿಗೆ ದೊಡ್ಡ ಸಂಬಳದ ಆಫರ್ ನೀಡಿದೆ. ಯಾವುದೇ ರೆಸ್ಯೂಮ್ ಬೇಡ, ನಿಮ್ಮ ಡಿಗ್ರಿ ಅರ್ಹತೆಯನ್ನೂ ಕೇಳಲ್ಲ. ಆದ್ರೆ, ನಿಮ್ಮ ಇದುವರೆಗಿನ ಕೆಲಸದ ಪ್ರೂಫ್ ಮತ್ತು ಚಿಕ್ಕ ವಿಡಿಯೋ ಕಳಿಸಿ. ನೇಮಕಾತಿಯ ಈ ಹೊಸ ಶೈಲಿಯು ಆನ್ ಲೈನ್ ನಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಕಾಲೇಜು ಉಪನ್ಯಾಸಕರಿಂದ ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್.. ಮೂವರು ಕೀಚಕರು ಅರೆಸ್ಟ್..!
ಸಣ್ಣ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಂಪನಿಯೊಂದರ ಸ್ಥಾಪಕ ಸುದರ್ಶನ್ ಕಾಮತ್ ಟ್ವಿಟರ್ನಲ್ಲಿ ಮಾಡಿರುವ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಈ ಪೋಸ್ಟ್, ಇತರೆ ಉದ್ಯೋಗಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಹೊಸ ಕಂಪನಿಯಲ್ಲಿ ವರ್ಷಕ್ಕೆ 60 ಲಕ್ಷ ರೂಪಾಯಿ ಫಿಕ್ಸಡ್ ಸಂಬಳ ನೀಡಲಾಗುತ್ತೆ. 40 ಲಕ್ಷ ರೂಪಾಯಿಯನ್ನು ಕಂಪನಿಯ ಈಕ್ವಿಟಿ ರೂಪದಲ್ಲಿ ನೀಡಲಾಗುತ್ತೆ. ಇದು ಫುಲ್ ಟೈಮ್ ಜಾಬ್. ವಾರಕ್ಕೆ ಐದು ದಿನದ ಕೆಲಸ. ಕೆಲಸದ ಅವಧಿಯೂ ಫ್ಲೆಕ್ಸಿಬಲ್ ಆಗಿರುತ್ತೆ ಎಂದು ಸುದರ್ಶನ್ ಕಾಮತ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಬೇರೆ ಸಂದರ್ಶನಗಳಿಗಿಂತ ಈ ಕಂಪನಿಯ ಸಂದರ್ಶನ ಸಂಪೂರ್ಣ ಭಿನ್ನವಾಗಿದೆ. ನಿಮ್ಮ ಬಗ್ಗೆ 100 ಪದಗಳಲ್ಲಿ ಪರಿಚಯ ಮಾಡಿಕೊಳ್ಳಬೇಕು. ನಿಮ್ಮ ಅತ್ಯುತ್ತಮ ಕೆಲಸದ ಲಿಂಕ್ಗಳನ್ನು ನೀಡಬೇಕು. ಇಷ್ಟೇ ಕೇಳಲಾಗುತ್ತೆ ಎಂದು ಸುದರ್ಶನ್ ಕಾಮತ್ ಹೇಳಿದ್ದಾರೆ. ಯಾವ ಕಾಲೇಜಿನಲ್ಲಿ ಓದಿದ್ದೀರಾ? ಯಾವ ಯೂನಿರ್ವಸಿಟಿ ಎಂಬುದು ಮುಖ್ಯವಲ್ಲ. ನಿಮ್ಮ ರೆಸ್ಯೂಮ್ ಕೂಡ ಅಗತ್ಯವಿಲ್ಲ. ತಕ್ಷಣವೇ ಕೆಲಸಕ್ಕೆ ಸೇರಿಕೊಳ್ಳಬಹುದು. ಬೆಂಗಳೂರಿನ ಇಂದಿರಾನಗರದಲ್ಲಿ ಕೆಲಸ ಮಾಡಬೇಕು. ಕೆಲಸದಲ್ಲಿ 4-5 ವರ್ಷದ ಅನುಭವ ಇರಬೇಕು. ನಿಮಗೆ ನೆಕ್ಸ್ಟ ಜೆಎಸ್, ಫೈಥಾನ್, ರಿಯಾಕ್ಟ್ ಜೆಎಸ್ ಗೊತ್ತಿರಬೇಕು. “ನೀವು ಪ್ರಾಯೋಗಿಕ ಡೆವಲಪರ್ ಆಗಿರಬೇಕು. ಇದು ಮ್ಯಾನೇಜಿರಿಯಲ್ ಹುದ್ದೆಯಲ್ಲ ಎಂದು ಸುದರ್ಶನ್ ಕಾಮತ್ ಸ್ಪಷ್ಟಪಡಿಸಿದ್ದಾರೆ.
ಈ ಪೋಸ್ಟ್ ಅನ್ನು 60 ಸಾವಿರ ಮಂದಿ ವೀಕ್ಷಿಸಿದ್ದಾರೆ. ಆನ್ ಲೈನ್ನಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ನೀವು ಹೇಳಿದ್ದು ಸರಿ. ಇದು ಕೇವಲ ಥಂಬ್ ರೂಲ್. ಅನುಭವವಿದ್ದರೂ ಸಹ, ಹೆಚ್ಚಿನ ಜನರು ಅನುಭವವಿಲ್ಲದಂತೆ ಎದ್ದು ಕಾಣುತ್ತಾರೆ," ಎಂದು ಕಾಮತ್ ಉತ್ತರಿಸಿದ್ದಾರೆ.
"ಇದು ತುಂಬಾ ಆಸಕ್ತಿದಾಯಕವಾಗಿದೆ. ಕೈಯಲ್ಲಿರುವ ಕೆಲಸದ ಮೇಲೆ ಕೇಂದ್ರೀಕರಿಸಲಾಗಿದೆ. ಶುದ್ಧ ಕೌಶಲ್ಯ ಮತ್ತು ಅನುಭವ!" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು, "ಇದು ಒಂದು ಉತ್ತಮ ಅವಕಾಶ, ಕನಿಷ್ಠ ಹೈಬ್ರಿಡ್ ಇರಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಆಸಕ್ತಿದಾಯಕ ನೇಮಕಾತಿ ನಿಯಮಗಳಿಗಾಗಿ ಈ ಪೋಸ್ಟ್ ವೈರಲ್ ಆಗುತ್ತದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ವಿಶ್ವ ಯುವ ಕೌಶಲ್ಯ ದಿನ (ಜುಲೈ 15) ಹತ್ತಿರವಾಗುತ್ತಿರುವಾಗ, ಈ ನೇಮಕಾತಿ ಪ್ರವೃತ್ತಿಯು ಭಾರತೀಯ ಸ್ಟಾರ್ಟ್‌ಅಪ್‌ಗಳು ಪದವಿಗಳಿಂದ ನಿಜವಾದ ಕೌಶಲ್ಯಗಳತ್ತ ಗಮನವನ್ನು ಹೇಗೆ ಬದಲಾಯಿಸುತ್ತಿವೆ ಎಂಬುದನ್ನು ತೋರಿಸುತ್ತದೆ. ಇದು ಒಂದು ಉಲ್ಲಾಸಕರ ಬದಲಾವಣೆಯಾಗಿದೆ .
Putting some clarity on what no resume, no college means!
Hope it helps https://t.co/L2z7b8QQLTpic.twitter.com/1Yykklzj3z
— Sudarshan Kamath (@kamath_sutra)
Putting some clarity on what no resume, no college means!
Hope it helps https://t.co/L2z7b8QQLTpic.twitter.com/1Yykklzj3z— Sudarshan Kamath (@kamath_sutra) July 14, 2025
">July 14, 2025
ಅಲ್ಲದೆ, ಇದು ಕಂಪನಿಯ ಮೊದಲ ದಿಟ್ಟ ಕ್ರಮವಲ್ಲ. ಈ ವರ್ಷದ ಆರಂಭದಲ್ಲಿ, ಸ್ಮಾಲೆಸ್ಟ್ AI ಮತ್ತೊಂದು ಅನೌಪಚಾರಿಕ ಉದ್ಯೋಗ ಕೊಡುಗೆಯನ್ನು ಪೋಸ್ಟ್ ಮಾಡಿದೆ . ಜೂನಿಯರ್ ಡೆವಲಪರ್‌ಗಳಿಗೆ ರೂ 40 ಲಕ್ಷ ರೂಪಾಯಿ ಸಂಬಳ ನೀಡುವ ಆಫರ್ ನೀಡಿತ್ತು. ಇದು ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಡಿಗ್ರಿಗಿಂತ ಕೌಶಲ್ಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತೆ ಎಂಬುದನ್ನು ತೋರಿಸುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ