ಬೆಂಗಳೂರಲ್ಲಿ ಟೆಕ್ಕಿ ದುರಂತ.. ಅತುಲ್ ಸುಭಾಷ್‌ ಪತ್ನಿ ಆರೋಪಗಳೆಲ್ಲಾ ಸುಳ್ಳಾ? ಸ್ಫೋಟಕ ಸತ್ಯಗಳು ಬಯಲು

author-image
admin
Updated On
ಬೆಂಗಳೂರಲ್ಲಿ ಟೆಕ್ಕಿ ದುರಂತ.. ಅತುಲ್ ಸುಭಾಷ್‌ ಪತ್ನಿ ಆರೋಪಗಳೆಲ್ಲಾ ಸುಳ್ಳಾ? ಸ್ಫೋಟಕ ಸತ್ಯಗಳು ಬಯಲು
Advertisment
  • ಅತುಲ್ ಸುಭಾಷ್ ಕೊನೇ ಬಾರಿ ಮಾಡಿರುವ ಪೋಸ್ಟ್ ವೈರಲ್‌
  • 40 ಬಾರಿ ಕೋರ್ಟ್‌ನ ಕೇಸ್ ಹಾಜರಾಗಲು ಹೋಗಿದ್ದ ಟೆಕ್ಕಿ ಅತುಲ್
  • ಅತುಲ್‌ಗೆ ಬಾಕಿ ಉಳಿದಿರುವ ನ್ಯಾಯ ಸಿಗಲಿ ಎಂದು ಹೆಚ್ಚಾದ ಕೂಗು

ಬೆಂಗಳೂರಿನ ಮಾರತಹಳ್ಳಿಯಲ್ಲಿ ಕೌಟುಂಬಿಕ ಕಲಹಕ್ಕೆ ನೊಂದ ಅತುಲ್ ಸುಭಾಷ್ ಜೀವ ಕಳೆದುಕೊಂಡಿದ್ದಾರೆ. 2 ದಿನಗಳ ಟೈಮ್ ಟೇಬಲ್ ಹಾಗೂ ಬಾಕಿ ಇರುವ ನ್ಯಾಯಕ್ಕಾಗಿ ಅತುಲ್‌ ಹೋರಾಡಿದ ಘೋರ ದುರಂತ ಕರುಣಾಜನಕವಾಗಿದೆ. ಅತುಲ್ ಸುಭಾಷ್ ಸಾವಿನ ಬಳಿಕ ಈ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಗಂಡನ ನ್ಯಾಯಕ್ಕಾಗಿ ಆಗ್ರಹ ಕೇಳಿ ಬರುತ್ತಿದೆ.

ಅತುಲ್ ಸುಭಾಷ್ ಅವರು ಕೊನೇ ಬಾರಿ ಸೋಷಿಯಲ್ ಮೀಡಿಯಾ Xನಲ್ಲಿ ವಿಡಿಯೋ ಸಮೇತ ಒಂದು ಪೋಸ್ಟ್ ಮಾಡಿದ್ದು, ಫುಲ್ ವೈರಲ್ ಆಗಿದೆ. ನೀವು ಈ ಪೋಸ್ಟ್ ಓದುವಷ್ಟರಲ್ಲಿ ನಾನು ಬದುಕಿರಲ್ಲ ಎಂದು ಅತುಲ್ ಸುಭಾಷ್ ಅವರು ಬರೆದಿದ್ದು, ಭಾರತದಲ್ಲಿ ಪುರುಷರ ನರಮೇಧ ನಡೆಯುತ್ತಿದೆ ಎಂದು ಅಮೆರಿಕಾದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

publive-image

ಹೆಂಡತಿಯಿಂದ ಸಾಕಷ್ಟು ಕಿರುಕುಳದ ಆರೋಪ ಮಾಡಿದ್ದ ಟೆಕ್ಕಿ ಅತುಲ್ ಸುಭಾಷ್ ಅವರು ತನ್ನ ನೋವನ್ನು ಕೊನೇ ವಿಡಿಯೋದಲ್ಲಿ ಸಂಪೂರ್ಣವಾಗಿ ಹೇಳಿಕೊಂಡಿದ್ದಾರೆ. ಅತುಲ್ ಸುಭಾಷ್ ತಂದೆ ಪವನ್ ಕುಮಾರ್ ಅವರು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಜಸ್ಟ್ 27 ವರ್ಷಕ್ಕೆ ದುರಂತ ಅಂತ್ಯ ಕಂಡ ರೀಲ್ಸ್ ಸ್ಟಾರ್; ಆನ್ವಿ ಕೊನೆಯ ಕ್ಷಣ ಹೇಗಿತ್ತು? ಇಂಚಿಂಚು ಮಾಹಿತಿ ಇಲ್ಲಿದೆ 

ಅತುಲ್ ಸುಭಾಷ್ ಅವರ ಪತ್ನಿ ಹೆಸರು ನಿಕಿತಾ ಸಿಂಘಾನಿಯಾ. ಅತುಲ್ ತನ್ನ ಪತ್ನಿ ವಿರುದ್ಧ ಮಾಡಿರುವ ಆರೋಪಗಳೆಲ್ಲಾ ಸತ್ಯ. ಪತ್ನಿ ನಿಕಿತಾ ಯಾವಾಗಲೂ ಒಂದಲ್ಲ, ಒಂದು ಕೇಸ್ ದಾಖಲಿಸುತ್ತಿದ್ದರು. ಬೆಂಗಳೂರಿನಿಂದ ಉತ್ತರ ಪ್ರದೇಶದ ಜೋನಪುರಕ್ಕೆ 40 ಬಾರಿ ಕೋರ್ಟ್‌ನ ಕೇಸ್ ಹಾಜರಾಗಲು ಹೋಗಿದ್ದ. ಇದರಿಂದ ತೀವ್ರವಾಗಿ ಹತಾಶನಾಗಿದ್ದ, ಆದರೆ ನಮಗೆ ಆ ಭಾವನೆ ಬಾರದಂತೆ ನೋಡಿಕೊಂಡಿದ್ದ. ಮಧ್ಯಸ್ಥಿಕೆ ಕೋರ್ಟ್‌ನಲ್ಲಿರುವವರು ಕಾನೂನು ಪ್ರಕಾರ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದ. ಜೊತೆಗೆ ಮಧ್ಯಸ್ಥಿಕೆ ಕೋರ್ಟ್‌ಗಳು ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರವೂ ಕೆಲಸ ಮಾಡುತ್ತಿಲ್ಲ. ಮಧ್ಯರಾತ್ರಿ 1 ಗಂಟೆಯಲ್ಲಿ ನಮ್ಮ ಕಿರಿಯ ಮಗನಿಗೆ ಇ-ಮೇಲ್ ಮಾಡಿದ್ದಾನೆ ಎಂದು ಅತುಲ್ ತಂದೆ ವಿವರಿಸಿದ್ದಾರೆ.

publive-image

ಅತುಲ್ ವಿರುದ್ಧ ಪತ್ನಿ ಆರೋಪ ಏನು?
ಅತುಲ್ ಸುಭಾಷ್ ಮೇಲೆ ಕೇಸ್ ಹಾಕಿದ್ದ ಅವರ ಪತ್ನಿ, ನನ್ನ ಗಂಡ 10 ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದ್ದರು. ಈ ಶಾಕ್‌ನಿಂದ ನನ್ನ ತಂದೆ ಸಾವನ್ನಪ್ಪಿದ್ದರು ಎಂದು ಆರೋಪ ಮಾಡಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯದ ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ ತಂದೆಯ ಸಾವಿಗೆ ಅತುಲ್ ಸುಭಾಷ್ ಕಾರಣ ಎಂಬುದು ಸುಳ್ಳು ಎಂದು ಪತ್ನಿ ನಿಕಿತಾ ಒಪ್ಪಿಕೊಂಡಿದ್ದರಂತೆ.

2019ರಲ್ಲಿ ನಿಕಿತಾ ಅವರ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಈ ಕೇಸ್ ಅನ್ನು ಸೆಟಲ್ ಮಾಡಿಕೊಳ್ಳಲು ಆತುಲ್ ಸುಭಾಷ್ ರಿಂದ 3 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಲಾಗಿತ್ತು ಎಂದು ಅತುಲ್ ಸುಭಾಷ್ ಸೋದರ ಬಿಕಾಸ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅತುಲ್ ಸುಭಾಷ್ ಅವರ ಪ್ರಕರಣದಲ್ಲಿ ಪತ್ನಿ ಮಾಡಿದ್ದ ಆರೋಪಗಳು ಎಷ್ಟು ಸುಳ್ಳು ಅನ್ನೋದು ಕೋರ್ಟ್‌ನಲ್ಲಿ ಸಾಬೀತಾಗಬೇಕಿದೆ. ಆದರೆ ಅತುಲ್ ದುರಂತ ಅಂತ್ಯದ ಈ ಘಟನೆ ನೊಂದ ಗಂಡಂದಿರನ್ನು ಚಿಂತೆಗೆ ಗುರಿ ಮಾಡಿರೋದಂತೂ ಸುಳ್ಳಲ್ಲ. ಅತುಲ್ ಸುಭಾಷ್ ಅವರಿಗೆ ಬಾಕಿ ಉಳಿದಿರುವ ನ್ಯಾಯ ಸಿಗಲಿ ಎನ್ನುವ ಆಗ್ರಹ ಕೇಳಿ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment