newsfirstkannada.com

ಮಳೆಗೆ ಬೆಂಗಳೂರಲ್ಲಿ ಮತ್ತೊಂದು ಅನಾಹುತ.. ಮರದ ಕೊಂಬೆ ಬಿದ್ದು ಟೆಕ್ಕಿಯ ಬೆನ್ನು ಮೂಳೆ ಮುರಿತ

Share :

Published May 8, 2024 at 9:53am

  2ನೇ ಕ್ರಾಸ್​ನಲ್ಲಿ ನಡೆದುಕೊಂಡು ಹೋಗುವಾಗ ಬಿದ್ದ ಮರ

  ಮರದ ಕೊಂಬೆ ಬಿದ್ದ ರಭಸಕ್ಕೆ ಬೆನ್ನು ಮೂಳೆ ಮುರಿದಿದೆ

  ಮಳೆಯಲ್ಲಿ ನಡೆದುಕೊಂಡು ಹೋಗುವಾಗ ಟೆಕ್ಕಿಗೆ ಗಾಯ

ಬೆಂಗಳೂರು: ಮಳೆ ಸುರಿಯುವಾಗ ಮರದ ಕೊಂಬೆ ಬಿದ್ದು ರಸ್ತೆ ಮೇಲೆ ಹೋಗುತ್ತಿದ್ದ ಓರ್ವ ಟೆಕ್ಕಿಯ ಬೆನ್ನು ಮೂಳೆ ಮುರಿದ ಘಟನೆ ಸಿವಿ ರಾಮನ್ ನಗರದ ನಾಗವಾರಪಾಳ್ಯದ 2ನೇ ಕ್ರಾಸ್​ನಲ್ಲಿ ನಡೆದಿದೆ.

ಇದನ್ನೂ ಓದಿ: ಮಹಿಳೆಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಜೊತೆಗಾರ.. ಕಾರಣ..?

ಐಟಿ ಕಂಪನಿ ಉದ್ಯೋಗಿ ರವಿಕುಮಾರ್ (26) ಗಾಯಾಳು. ಮಳೆ ಸುರಿಯುತ್ತಿರುವಾಗ ಟೆಕ್ಕಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ಸಮಯಕ್ಕೆ ಸರಿಯಾಗಿ ಮರವೊಂದು ಮುರಿದು ಟೆಕ್ಕಿ ಮೇಲೆ ಬಿದ್ದಿದೆ. ಪರಿಣಾಮ ಬೆನ್ನು ಮೂಳೆ ಮುರಿದು ಹೋಗಿ ತೀವ್ರವಾಗಿ ಗಾಯಗೊಂಡಿದ್ದಾನೆ. ಸದ್ಯ ಗಾಯಾಳುವಿಗೆ ನಗರದ ಹೆಚ್​ಎಎಲ್​ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮರ ಜೋರಾಗಿ ಬಿದ್ದಿದ್ದರಿಂದ ಟೆಕ್ಕಿಯ ಸ್ಪೈನ್ ಕಾರ್ಡ್ ಮುರಿದು ಹೋಗಿದೆ. ಬಿಬಿಎಂಪಿ ಉಸ್ತುವಾರಿಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಗೆ ಬೆಂಗಳೂರಲ್ಲಿ ಮತ್ತೊಂದು ಅನಾಹುತ.. ಮರದ ಕೊಂಬೆ ಬಿದ್ದು ಟೆಕ್ಕಿಯ ಬೆನ್ನು ಮೂಳೆ ಮುರಿತ

https://newsfirstlive.com/wp-content/uploads/2024/05/TREE.jpg

Load More