newsfirstkannada.com

ರಾಮೇಶ್ವರಂ ಬ್ಲಾಸ್ಟ್ ಕೇಸ್‌.. ಬಳ್ಳಾರಿ ಯುವಕನಿಂದ NIAಗೆ ಶಂಕಿತನ ಸ್ಫೋಟಕ ಮಾಹಿತಿ ಲಭ್ಯ

Share :

Published March 8, 2024 at 3:12pm

Update March 8, 2024 at 3:06pm

    ಮಸೀದ್​ಗೆ ನಮಾಜ್ ಮಾಡಲು ಬರುತ್ತಿದ್ದ ಯುವಕರೇ ಟಾರ್ಗೆಟ್​

    PFI ನಿಷೇಧದ ಬಳಿಕ ಐಎಸ್ ಜೊತೆ ಸಂಪರ್ಕ ಹೊಂದಿದ್ದ ಶಂಕಿತ

    ಮುಸ್ಲಿಂ ಯುವಕರನ್ನ ಸಂಪರ್ಕ ಮಾಡಿ ತಲೆ ಕೆಡಿಸುತ್ತಿದ್ದ ಆರೋಪ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನುವ ಅನುಮಾನದ ಮೇಲೆ ಶಂಕಿತ ಮಿನಾಜ್ ಅಲಿಯಾಸ್ ಸುಲೇಮಾನ್​ನನ್ನ ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು ಮೂವರ ಸುಳಿವು ಪತ್ತೆಯಾಗಿದೆ.

ಬಳ್ಳಾರಿ ಮಾಡ್ಯುಲ್​ನ ಶಂಕಿತ ಉಗ್ರ ಮಿನಾಜ್​ನನ್ನ ನಿನ್ನೆ ಬಾಡಿ ವಾರೆಂಟ್ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಶಂಕಿತನ ಹೇಳಿಕೆಯಿಂದ ಮತ್ತೆ ಮೂವರ ಸುಳಿವು ಪತ್ತೆಯಾಗಿದ್ದು ಬೆಂಗಳೂರು, ಮುಂಬೈ, ದೆಹಲಿಯಲ್ಲಿ ಸೇರಿದಂತೆ ಮೂವರು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರನ್ನು ಬಳ್ಳಾರಿಯ ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಶೇಕ್ ಮತ್ತು ದೆಹಲಿಯ ಶ್ಯಾನ್ ರೆಹಮಾನ್ ಅಲಿಯಾಸ್ ಹುಸೇನ್ ಸದ್ಯ ಇವರೆಲ್ಲ ಎನ್ಐಎ ವಶದಲ್ಲಿದ್ದು ವಿಚಾರಣೆ ನಡೆಸಲಾಗುತ್ತಿದೆ.

ಒಟ್ಟು 19 ಕಡೆ ದಾಳಿ ಮಾಡಿ 8 ಶಂಕಿತರನ್ನ ಅರೆಸ್ಟ್ ಮಾಡಿದ್ದರು

ಬೆಂಗಳೂರು ಸ್ಫೋಟದ ಹಿಂದೆ ಬಳ್ಳಾರಿ‌ ಮಾಡ್ಯೂಲ್ ಐಎಸ್ ತಂತ್ರವಿದೆಯಾ ಎಂದು ಅನುಮಾನ ವ್ಯಕ್ತವಾಗಿದೆ. ಕಳೆದ ವರ್ಷ ಡಿಸೆಂಬರ್ 14 ರಂದು ಬಳ್ಳಾರಿಯಲ್ಲಿ ಪ್ರಕರಣ ದಾಖಲು ಆಗಿತ್ತು. ಈ ವೇಳೆ ಎನ್​ಐಎ ದಾಳಿ ಮಾಡಿದಾಗ ಶಂಕಿತರ ಗ್ಯಾಂಗ್ ಪತ್ತೆಯಾಗಿತ್ತು. ಒಟ್ಟು 19 ಕಡೆ ದಾಳಿ ಮಾಡಿ 8 ಶಂಕಿತರನ್ನ ಅರೆಸ್ಟ್ ಮಾಡಿ ಎಲ್ಲರನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಬಂಧಿತರಿಂದ ಐಇಡಿ ತಯಾರಿಕೆಯ ಕಚ್ಚಾ ವಸ್ತುಗಳು, ಫಾರ್ಮುಲಾದ ದಾಖಲೆಗಳು ಪತ್ತೆಯಾಗಿದ್ದವು. ದಾಳಿ ಮಾಡಿದ್ದಾಗ ಕೆಲ ಶಂಕಿತರು ಎಸ್ಕೇಪ್ ಆಗಿದ್ದರು. ಹೀಗಾಗಿ ಜೈಲಿನಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಎನ್​ಐಎ ಕಸ್ಟಡಿಯಲ್ಲಿರುವ ಮಿನಾಜ್​​ನನ್ನ ತೀವ್ರವಾಗಿ ವಿಚಾರಣೆ ಮಾಡಲಾಗುತ್ತಿದೆ. ಈ ಹಿಂದೆ ದೇಶದೆಲ್ಲೆಡೆ ವಿಧ್ವಂಸಕ ಕೃತ್ಯಕ್ಕೆ ಸ್ಕೇಚ್ ಹಾಕಿದ್ದನು. ಆದರೆ ಇದು ಎನ್ಐಎ ದಾಳಿಯಿಂದ ಪ್ಲಾನ್ ಎಲ್ಲ ವಿಫಲಗೊಂಡಿತ್ತು. ಮುಂಬೈ, ದೆಹಲಿ, ಜಾರ್ಖಂಡ್, ಪುಣೆ ಐಸಿಸಿ ಮಾಡ್ಯೂಲ್ ಜೊತೆ ಲಿಂಕ್ ಪತ್ತೆಯಾಗಿತ್ತು ಎನ್ನುವುದು ವಿಚಾರಣೆಯಲ್ಲಿ ಬಹಿರಂಗವಾಗಿತ್ತು. ಹೀಗಾಗಿ ಸಾಕ್ಷಿ ಸಮೇತ ಪ್ರೂವ್ ಮಾಡಿ ಶಂಕಿತರನ್ನ ಜೈಲಿಗೆ ಕಳುಹಿಸಲಾಗಿತ್ತು.

ಐಎಸ್​ನಲ್ಲಿ ಬಳ್ಳಾರಿಯ ಮಾಡ್ಯೂಲ್ ಅಧ್ಯಕ್ಷನ ಪಟ್ಟ

ಮಿನಾಜ್​ ಬಳ್ಳಾರಿ ಐಎಸ್ ಗ್ಯಾಂಗ್ ಕಟ್ಟಿದ್ದನು. ಅದರಂತೆ ಬಡ ಮುಸ್ಲಿಂ ಯುವಕರ ಟಾರ್ಗೆಟ್ ಮಾಡಿ ತಲೆ ಕೆಡಿಸಿದ್ದನು. ಮೊದಲು ಪಿಎಫ್ಐ ಸಂಘಟನೆಯಲ್ಲಿ ಸಕ್ರಿಯನಾಗಿ ಕೆಲಸ ಮಾಡಿದ್ದನು. ತದನಂತರ ಭಾರತದಲ್ಲಿ ಪಿಎಫ್ಐ ನಿಷೇಧದ ಬಳಿಕ ಐಸಿಎಸ್ ಜೊತೆ ಸಂಪರ್ಕ ಹೊಂದಿ ಯುವಕರನ್ನು ಐಎಸ್​ಗೆ ಸೇರಿಸುತ್ತಿದ್ದನು. ಇದರಿಂದಾಗಿಯೇ ಮಿನಾಜ್​ಗೆ ಐಎಸ್​ನಲ್ಲಿ ಬಳ್ಳಾರಿಯ ಮಾಡ್ಯೂಲ್ ಅಧ್ಯಕ್ಷನ ಪಟ್ಟ ನೀಡಲಾಗಿತ್ತು. ಕೇವಲ 26 ವರ್ಷಕ್ಕೆ ಉಗ್ರ ಸಂಘಟನೆ ಕಟ್ಟಿದ್ದ ಮಿನಾಜ್​ ನಮಾಜ್ ಮಾಡಲು ಮಸೀದಿಗೆ ಬರುತ್ತಿದ್ದ ಅಮಾಯಕ ಹುಡುಗರ ತಲೆಗೆ ಹುಳ ಬಿಡುತ್ತಿದ್ದನು. ಅಜಾದಿ ಹೆಸರಲ್ಲಿ ಬ್ರೈನ್ ವಾಷ್ ಮಾಡುತ್ತಿದ್ದನು. ಇದರಲ್ಲಿ ಪ್ರಮುಖವಾಗಿ ಪಿಎಫ್‌ಐ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡುತ್ತಿದ್ದನು. ಈಗಾಗಲೇ ಶಂಕಿತನು ನೂರಾರು ಮಂದಿಯ ಬ್ರೈನ್ ವಾಷ್ ಮಾಡಿದ್ದಾನೆ.

ಇದನ್ನು ಓದಿ: ರಾಮೇಶ್ವರಂ ಕೆಫೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​.. ಬಾಂಬರ್​ ಮಾಸ್ಟರ್​​ ಪ್ಲಾನ್​​ಗೆ ಬೆಚ್ಚಿಬಿದ್ದ ಪೊಲೀಸ್ರು!

ಶಂಕಿತ ಮಿನಾಜ್ ಐಎಸ್ ಸೇರಿ ಫಂಡಿಂಗ್ ಪಡೆದಿದ್ದರಿಂದಲೇ ಅದೇ ಹಣದಲ್ಲಿ ಯುವಕರನ್ನ ಪುಸಲಾಯಿಸಿ ಉಗ್ರ ಸಂಘಟನೆಗೆ ಅವರನ್ನು ತಳ್ಳುತ್ತಿದ್ದ ಎನ್ನುವ ಆರೋಪವಿದೆ. ಮಿನಾಜ್ ಕುಟುಂಬ ಆರ್ಥಿಕವಾಗಿ ಸದೃಢವಾಗಿದ್ದರು ಉಗ್ರ ಸಂಘಟನೆ ಜೊತೆ ಲಿಂಕ್​ಗಳನ್ನ ಹೊಂದಿದ್ದನು. ಆದರೆ ಇದೀಗ ಇವರ ಗ್ಯಾಂಗ್​​ನ ಓರ್ವ ನಾಪತ್ತೆಯಾಗಿದ್ದಾನೆ. ಅವನೇ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕವನ್ನು ಇಟ್ಟವನು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಇದರಿಂದಾಗಿಯೇ ಈ ಎಲ್ಲರನ್ನ ವಶಕ್ಕೆ ಪಡೆದು ಎನ್​​​ಐಎ ವಿಚಾರಣೆ ಮುಂದುವರೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಬ್ಲಾಸ್ಟ್ ಕೇಸ್‌.. ಬಳ್ಳಾರಿ ಯುವಕನಿಂದ NIAಗೆ ಶಂಕಿತನ ಸ್ಫೋಟಕ ಮಾಹಿತಿ ಲಭ್ಯ

https://newsfirstlive.com/wp-content/uploads/2024/03/BNG_MINAJ.jpg

Load More