/newsfirstlive-kannada/media/post_attachments/wp-content/uploads/2025/01/Bangalore-Family-Tragedy-2.jpg)
ಬೆಂಗಳೂರು: RMV ಸೆಕೆಂಡ್ ಸ್ಟೇಜ್‌ನ ಮನೆಯಲ್ಲಿ ಇವತ್ತು ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. 2 ವರ್ಷದ ಗಂಡು ಮಗು, 5 ವರ್ಷದ ವಿಶೇಷ ಚೇತನ ಹೆಣ್ಣು ಮಗಳ ಜೊತೆ ತಂದೆ, ತಾಯಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಅನೂಪ್ ಕುಮಾರ್ ಕುಟುಂಬದ ಈ ಕರುಣಾಜನಕ ಕಥೆ ಕರುಳು ಹಿಂಡುವಂತಿದೆ.
ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನೂಪ್ ಕುಮಾರ್ ಅವರಿಗೆ 5 ವರ್ಷದ ವಿಶೇಷ ಚೇತನ ಹೆಣ್ಣು ಮಗು ಇತ್ತು. ಇದರಿಂದ ಅನೂಪ್ ಕುಮಾರ್ ದಂಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ತಮ್ಮ ಅಮಿತ್ ಎಂಬಾತನಿಗೆ ಇ-ಮೇಲ್ ಮೂಲಕ ಡೆತ್ ನೋಟ್ ಕಳುಹಿಸಿರುವ ಅನೂಪ್ ಅವರು ಜೀವ ಕಳೆದುಕೊಂಡಿದ್ದಾರೆ.
ನಾಲ್ವರ ದುರಂತಕ್ಕೆ ಕಾರಣವೇನು?
ಮಕ್ಕಳ ಸಾವಿಗೂ ಮುನ್ನ ಅನೂಪ್ ಕುಮಾರ್ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಅದರಲ್ಲಿ ಕುಟುಂಬಸ್ಥರು ಸರಿಯಾಗಿ ನನ್ನನ್ನು ನೋಡುತ್ತಿರಲಿಲ್ಲ. ರಾಕೇಶ್ ಎಂಬ ಸಂಬಂಧಿ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ; ಆಗಿದ್ದೇನು?
ಮೊದಲನೇ ಮಗುವಿಗೆ ಬುದ್ಧಿ ಮಾಂದ್ಯತೆಯಿದೆ. ಈ ಮಗು ನೋಡಿಕೊಳ್ಳುವುದ್ರಲ್ಲೂ ಸಹ ತಮಗೆ ಮಾನಸಿಕ ಖಿನ್ನತೆ ಉಂಟಾಗಿದೆ. 2ನೇ ಮಗು ಆದರೂ ಸಹ ಯಾರೂ ತನ್ನನ್ನು ಮಾತಾಡಿಸಿಲ್ಲ. ಒಂದು ವಿಡಿಯೋ ಕಾಲ್ ಸಹ ಮಾಡಿಲ್ಲ. ಎಲ್ಲಿ ತನ್ನನ್ನು ಮಾತಾಡಿಸಿದ್ರೆ ಆಸ್ತಿ ಕೇಳ್ತಿವಿ ಎಂದು ಮಾತಾಡಿಲ್ವ. ತನ್ನ ತಂದೆ ಸರಿಯಾಗಿ ಮಾತಾಡಿಸುವುದಿಲ್ಲ. ಹೀಗಾಗಿ ಮನನೊಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅನೂಪ್ ಕುಮಾರ್ ಅವರ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ.
ಪಾಪ.. 2 ವರ್ಷದ ಗಂಡು ಮಗು, 5 ವರ್ಷದ ಹೆಣ್ಣು ಮಗುವಿನ ಮೃತದೇಹ ನೋಡಿದ್ರೆ ಕರುಳು ಹಿಂಡುವಂತಿದೆ. ಈ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಮನೆ ಕೆಲಸದಾಕೆ ಮಗು ಮುಖವನ್ನ ನೋಡಿ ರೋದಿಸುತ್ತಿರುವ ದೃಶ್ಯ ಕರುಣಾಜನಕವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ