/newsfirstlive-kannada/media/post_attachments/wp-content/uploads/2025/01/Bangalore-Family-Tragedy.jpg)
ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಮನೆಯಲ್ಲಿ ಪ್ರಾಣ ಬಿಟ್ಟಿರುವ ದಾರುಣ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಮಕ್ಕಳ ಕಣ್ಣು ಮುಚ್ಚಿಸಿದ ಬಳಿಕ ತಂದೆ, ತಾಯಿ ಕೂಡ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತರನ್ನ ಪತಿ ಅನೂಪ್, ಪತ್ನಿ ರಾಖಿ, ಮಕ್ಕಳಾದ ಅನುಪ್ರಿಯ, ಪ್ರಿಯಾಂಶ್ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಅಲಹಾಬಾದ್ ಮೂಲದ ಅನೂಪ್ ಕುಮಾರ್ ದಂಪತಿ ಕಳೆದ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾ ಇದ್ದು ಅನೂಪ್ ಫ್ಯಾಮಿಲಿ RMV ಸೆಕೆಂಡ್ ಸ್ಟೇಜ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.
ಮೃತಪಟ್ಟವರ ವಿವರ!
ಅನೂಪ್ ಕುಮಾರ್, ಪತಿ (38 ವರ್ಷ)
ರಾಖಿ, ಪತ್ನಿ (35 ವರ್ಷ)
ಅನುಪ್ರಿಯ, ವಿಶೇಷ ಚೇತನ ಮಗಳು (5 ವರ್ಷ)
ಪ್ರಿಯಾಂಶ್, ಮಗ (2 ವರ್ಷ)
ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನೂಪ್ ಕುಮಾರ್ ಅವರಿಗೆ 5 ವರ್ಷದ ವಿಶೇಷ ಚೇತನ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗು ಇತ್ತು. ಕಷ್ಟದಲ್ಲೂ ಆರಾಮಾಗಿದ್ದ ದಂಪತಿ ಇಬ್ಬರು ಮಕ್ಕಳ ಜೀವ ತೆಗೆದು ಆ ನಂತರ ತಾವೂ ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ 2 HMPV ಕೇಸ್ ಪತ್ತೆ.. ICMRನಿಂದ ಅಧಿಕೃತ ಹೇಳಿಕೆ ಬಿಡುಗಡೆ
ಆರ್.ಎಂ.ವಿ ಸೆಕೆಂಡ್ ಸ್ಟೇಜ್ ಟೆಂಪಲ್ ರಸ್ತೆಯಲ್ಲಿ ಇವತ್ತು ಬೆಳಗ್ಗೆ ಒಂದೇ ಕುಟುಂಬದ ನಾಲ್ಕು ಜನರ ದುರಂತ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿರುವ ಪೊಲೀಸರು ಮೃತರ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. FSL ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಈ ದುರಂತಕ್ಕೆ ಕಾರಣ ಏನು ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ