/newsfirstlive-kannada/media/post_attachments/wp-content/uploads/2024/04/heat-wave5.jpg)
ಸಿಲಿಕಾನ್ ಸಿಟಿ ಜನರೇ ಬಹಳ ಗಮನವಿಟ್ಟು ಕೇಳಿ. ಇಂದು ಬೆಂಗಳೂರು ನಗರದ ಬಿಸಿಲು ನೆತ್ತಿ ಸುಟ್ಟು ಕಾದ ಕಾವಲಿಯಂತಾಗಿದೆ. ಇವತ್ತಷ್ಟೇ ಅಲ್ಲ ಮುಂದಿನ 7 ದಿನಗಳಲ್ಲಿ ಸೂರ್ಯ ಮತ್ತಷ್ಟು ನಿಮ್ಮನ್ನು ಸುಡಲಿದ್ದಾನೆ. ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಹತ್ವದ ಮಾಹಿತಿ ನೀಡಿ ಸಾಮಾನ್ಯ ಜನರನ್ನು ಎಚ್ಚರಿಸಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ತಾಪಮಾನ ಇನ್ನಷ್ಟು ಬಿಸಿ ಆಗಲಿದೆ. ಮುಂದಿನ ಏಳು ದಿನಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಸದ್ಯ ಬೆಂಗಳೂರಲ್ಲಿ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ 7 ದಿನದಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿಗೆ ತಲುಪಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
/newsfirstlive-kannada/media/post_attachments/wp-content/uploads/2024/05/heat-wave2.jpg)
ವಿಜ್ಞಾನಿ ಹಾಗೂ ಭಾರತೀಯ ಹವಾಮಾನ ಇಲಾಖೆ ಬೆಂಗಳೂರಿನ ನಿರ್ದೇಶಕರಾದ ಸಿ.ಎಸ್ ಪಾಟೀಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಲ್ಲಿ ಮುಂದಿನ ವಾರ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ಮಂಗಳೂರು ಹಾಗೂ ಕಲಬುರಗಿಯಲ್ಲಿ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಲಿದೆ. ಬಾಗಲಕೋಟೆ, ಧಾರವಾಡ 39 ಡಿಗ್ರಿ, ಕರಾವಳಿ 33-35 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಸಿಲಿನಿಂದ ಬಚಾವ್ ಆಗಲು 5 ಸುಲಭ ಮಾರ್ಗ!
ಕೆಂಡದಂತೆ ಸುಡೋ ಈ ಬಿಸಿಲಿನ ವಾತಾವರಣದಲ್ಲಿ ಉತ್ತಮ ಆರೋಗ್ಯಕ್ಕಾಗಿ ಕೆಲವು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಇದನ್ನೂ ಓದಿ: ಬೆಳ್ಳುಳ್ಳಿ ತಿನ್ನೋದರಿಂದ ಈ ಕಾಯಿಲೆಗಳು ಮಾಯ; ನೀವು ಓದಲೇಬೇಕಾದ ಸ್ಟೋರಿ
1. ಹೆಚ್ಚು, ಹೆಚ್ಚು ನೀರು ಕುಡಿಯಿರಿ
ನಿಮ್ಮ ದೇಹ ಬಿಸಿಲಿನ ತಾಪಮಾನವನ್ನು ತಡೆಯಲು ನೀರು ಬಹಳಷ್ಟು ಸಹಾಯ ಮಾಡುತ್ತದೆ. ಬಿಸಿಲಿನ ವೇಳೆ ಸಾಕಷ್ಟು ನೀರು ಮತ್ತು ಇತರೆ ದ್ರವಾಂಶಗಳನ್ನು ಕುಡಿಯಿರಿ. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರನ್ನು ಕುಡಿಯೋದು ಉತ್ತಮ.
2. ಗರಿಷ್ಠ ಶಾಖದ ಸಮಯದಲ್ಲಿ ಮನೆಯೊಳಗೆ ಇರಿ
ಸೂರ್ಯನ ಬೆಳಕು ಮತ್ತು ಶಾಖಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ದಿನದ ಅತ್ಯಂತ ಬಿಸಿಯಾದ ಸಮಯದಲ್ಲಿ (ಸಾಮಾನ್ಯವಾಗಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ) ಮನೆಯೊಳಗೆ ಇರಲು ಪ್ರಯತ್ನಿಸಿ.
/newsfirstlive-kannada/media/post_attachments/wp-content/uploads/2024/03/heat-wave.jpg)
3. ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ
ಉತ್ತಮ ಗಾಳಿಯ ಹರಿವನ್ನು ಅನುಮತಿಸುವ ಮತ್ತು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸಲು ಸಹಾಯ ಮಾಡುವ ಹಗುರವಾದ, ತಿಳಿ ಬಣ್ಣದ, ಸಡಿಲವಾದ ಬಟ್ಟೆಗಳನ್ನು ಧರಿಸಬೇಕು. ಶಾಖವನ್ನು ಹೀರಿಕೊಳ್ಳುವ ಗಾಢ ಬಣ್ಣದ ಬಟ್ಟೆಗಳಿಂದ ದೂರವಿರಬೇಕು.
4. ತಂಪಾಗಿಸುವ ಕ್ರಮಗಳನ್ನು ಬಳಸಿ
ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಫ್ಯಾನ್‌ಗಳು, ಹವಾನಿಯಂತ್ರಣಗಳು ಮತ್ತು ತಂಪಾಗಿಸುವ ಕ್ರಮಗಳನ್ನು ಬಳಸಿ.
5. ವೃದ್ಧರು, ಚಿಕ್ಕ ಮಕ್ಕಳು ಎಚ್ಚರ
ವೃದ್ಧರು, ಚಿಕ್ಕ ಮಕ್ಕಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಶಾಖ-ಸಂಬಂಧಿತ ಕಾಯಿಲೆಗಳಿಗೆ ಹೆಚ್ಚು ಒಳಗಾಗಬಹುದು. ಅವರು ತೇವಾಂಶದಿಂದ ಮತ್ತು ತಂಪಾಗಿರಲು ಪ್ರಯತ್ನಿಸಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us