/newsfirstlive-kannada/media/post_attachments/wp-content/uploads/2023/08/Current-1.jpg)
ಬೆಂಗಳೂರು: ಇಂದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ನಿರ್ವಹಣಾ ಕಾಮಗಾರಿ ಪ್ರಯುಕ್ತ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ನಗರದ ಹಲವು ಏರಿಯಾಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗಾಗಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ಪವರ್ ಕಟ್ ಇರಲಿದೆ. ದೂರದರ್ಶನಕೇಂದ್ರ, ಮುನ್ಸಿಪಾಲ್ ಕಾರ್ಪೋರೇಷನ್, ಸರ್ಕ್ಯೂಟ್ ಹೌಸ್, ಪಿಜೆ ಲೇಔಟ್, ಎಂಸಿಸಿ ಎ ಬ್ಲಾಕ್, ವಿನೋಭಾ ನಗರ, ಸೂಪರ್ ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್, ಕುವೆಂಪು ನಗರ, ರಾಜಾಜಿನಗರ ಸೇರಿದಂತೆ ಹಲವು ಕಡೆ ವಿದ್ಯುತ್ ವ್ಯತ್ಯಯ ಆಗಲಿದೆ.
ಈ ಪ್ರದೇಶಗಳಲ್ಲೂ ಪವರ್ ಕಟ್
ಬೂಮರೆಡ್ಡಿ ಕಾಲೋನಿ, 515 ಕಾಲೋನಿ, ಕೋಡಿಹಳ್ಳಿ ಗ್ರಾಮ, 17, 18 ಹಾಗೂ 19ನೇ ಅಡಿ ಮುಖ್ಯರಸ್ತೆ, ಸರ್ವೀಸ್ ರಸ್ತೆ 100, 13ನೇ ಎಚ್, 12ನೇ ಮುಖ್ಯರಸ್ತೆ, ದೊಮ್ಮಲೂರು 2ನೇ ಹಂತ, 6ನೇ ಮುಖ್ಯ ಡಿಫೆನ್ಸ್ ಕಾಲೋನಿ, 80 ಅಡಿ ರಸ್ತೆ, 11ನೇ ಮುಖ್ಯರಸ್ತೆ, ಹಳೆ ತಿಪ್ಪಸಂದ್ರ, ಹೊಸ ತಿಪ್ಪಸಂದ್ರ, ಎಂಜಿ ರಸ್ತೆಗಳಲ್ಲಿ ಪವರ್ ಕಟ್ ಇರಲಿದೆ.
ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್‌ಹೌಸ್ ರಸ್ತೆ, ರಿಚ್ಮಂಡ್ ರಸ್ತೆ, ಕಸ್ತೂರಬಾ ರಸ್ತೆ, ವಾಲ್ಟನ್ ರಸ್ತೆ, ಡಿಕನ್ಸನ್ ರಸ್ತೆ, ಅಶೋಕ್ ನಗರ, ಪ್ರೈಮ್‌ರೋಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಟ್ರಿನಿಟಿ ಸರ್ಕಲ್, ಹಲಸೂರು ರಸ್ತೆ, ಮರ್ಫಿ ಪಟ್ಟಣ, ಹಲಸೂರು ಗೀತಾಂಜಲಿ ಲೇಔಟ್ನಲ್ಲೂ ಕರೆಂಟ್ ಇರಲ್ಲ.
ಜತೆಗೆ ಏರ್‌ಪೋರ್ಟ್ ರಸ್ತೆ, ಕೋಡಿಹಳ್ಳಿ, 16 ಮತ್ತು 19ನೇ ಮುಖ್ಯರಸ್ತೆ, ಎಚ್‌ಎಎಲ್ 2ನೇ ಹಂತ, ಕಾಲ್ಟನ್ ಟವರ್ಸ್, ಎನ್‌ಎಎಲ್ ಕಾಂಪೌಂಡ್, ಕೋಡಿಹಳ್ಳಿ, ರಾಮ ಟೆಂಪಲ್ ರಸ್ತೆ, ವೆಂಕಟೇಶ್ವರ ಕಾಲೋನಿಯಲ್ಲೂ ಕರೆಂಟ್ ಇರೋದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:ಪ್ರೀತಿಗೆ ವಯಸ್ಸಿಲ್ಲ; 19ರ ಯುವತಿಯನ್ನ ಮದುವೆಯಾದ 47 ವರ್ಷದ ಪುರುಷನ ಜೀವವನ್ನೇ ನಿಲ್ಲಿಸಿಬಿಟ್ರು!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ