newsfirstkannada.com

ಬೆಂಗಳೂರಲ್ಲಿ ಮಳೆಗಾಗಿ ಇನ್ನೆಷ್ಟು ದಿನ ಕಾಯಬೇಕು? ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

Share :

Published May 1, 2024 at 7:24pm

Update May 1, 2024 at 7:31pm

    ಕಳೆದ ಒಂದು ತಿಂಗಳಿನಿಂದ ರಣಬಿಸಿಲಿಗೆ ಕಂಗೆಟ್ಟ ರಾಜ್ಯದ ಜನ

    ಆದಷ್ಟು ಬೇಗ ಮಳೆಯಾಗಲಿ ಎಂದಿದ್ದ ಜನರಿಗೆ ಭರ್ಜರಿ ಗುಡ್​ನ್ಯೂಸ್​​

    ಮಳೆ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

ಬೆಂಗಳೂರು: ಭಾರೀ ಬಿಸಿಲಿನಿಂದ ಸಿಲಿಕಾನ್​ ಸಿಟಿ ಬೆಂಗಳೂರ ಮಂದಿ ಬೆಂದು ಹೋಗಿದ್ದಾರೆ. ಈ ಮಧ್ಯೆ ರಾಜಧಾನಿ ಜನರಿಗೆ ರಾಜ್ಯ ಹವಾಮಾನ ಇಲಾಖೆ ಗುಡ್​ನ್ಯೂಸ್​ ನೀಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

ರಾಜಧಾನಿ ಬೆಂಗಳೂರಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮಂಗಳವಾರ ದಶಕದ ಹೆಚ್ಚು ತಾಪಮಾನ ದಾಖಲಾಗಿದೆ. ಯಾವಾಗಲೂ ಮಳೆಯಿಂದ ದಾಖಲೆ ಬರೆಯುತ್ತಿದ್ದ ಬೆಂಗಳೂರು ಈಗ ಬಿಸಿಲಿನ ವಿಚಾರದಲ್ಲೂ ರೆಕಾರ್ಡ್​​​ ಕ್ರಿಯೇಟ್​ ಮಾಡುತ್ತಿದೆ. ಮಳೆಗಾಗಿ ಕಾಯುತ್ತಿರೋ ಬೆಂಗಳೂರು ಮಂದಿಗೆ 1 ವಾರದಲ್ಲಿ ವರುಣನ ದರ್ಶನವಾಗಲಿದೆ ಎಂದು ತಿಳಿದು ಬಂದಿದೆ.

ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಮೇ 4ರ ಬಳಿಕ ಭಾರೀ ಮಳೆಯಾಗಲಿದೆ. ಮೇ 4-15 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ಇದೆ. ಮೇ ಮೊದಲ ವಾರ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೆ, 2ನೇ ವಾರದಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಇಂದಿನಿಂದ ರಾಜ್ಯದ ಈ ಜಿಲ್ಲೆಗಳಲ್ಲಿ 1 ವಾರ ಭರ್ಜರಿ ಮಳೆ; ಬೆಂಗಳೂರಿಗೂ ಗುಡ್​ನ್ಯೂಸ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮಳೆಗಾಗಿ ಇನ್ನೆಷ್ಟು ದಿನ ಕಾಯಬೇಕು? ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

https://newsfirstlive.com/wp-content/uploads/2024/04/CKD_RAIN_1.jpg

Load More